ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಇಸುಝು ಇಂಡಿಯಾ ಕಂಪನಿಯು ತನ್ನ ಬಹುನೀಕ್ಷಿತ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಪಿಕ್‌ಅಪ್ ಮಾದರಿಯು ಹೊಚ್ಚ ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಹೊಸ ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯು ಹಳೆಯ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಡಿ-ಕ್ರಾಸ್ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹೊಚ್ಚ ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಇಸುಝು ಹೈ-ಲ್ಯಾಂಡರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಜೆಡ್ ಸೀರಿಸ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 19.98 ಲಕ್ಷದಿಂದ ರೂ.24.49 ಲಕ್ಷ ಬೆಲೆ ಹೊಂದಿವೆ.

ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಹೈ-ಲ್ಯಾಂಡರ್ ಮಾದರಿಯು ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯ ಬೆಸ್ ವೆರಿಯೆಂಟ್ ಆಗಿ ಮಾರಾಟಗೊಳ್ಳಲಿದ್ದು, ಹಲವಾರು ಫೀಚರ್ಸ್ ಮ್ಯಾನುವಲ್ ಕಂಟ್ರೋಲ್ ಹೊಂದಿವೆ. ಪಿಕ್ಅಪ್ ಮಾದರಿಯನ್ನು ಹೊಂದಲು ಬಯುಸುವ ಎಸ್‌ಯುವಿ ಗ್ರಾಹಕರಿಗಾಗಿ ಈ ಮಾದರಿಯನ್ನು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಡಿ-ಕ್ರಾಸ್ ವಿ-ಕ್ರಾಸ್ ಜೆಡ್ ಸರಣಿಯಲ್ಲಿ ಇಸುಝು ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಜೆಡ್ 2 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್, ಜೆಡ್ 4 ವೀಲ್ಹ್ ಡ್ರೈವ್ ಮ್ಯಾನುವಲ್ ಮತ್ತು ಜೆಡ್ ಪ್ರೆಸ್ಟಿಜ್ 4 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್ ಮಾದರಿಗಳನ್ನು ಪರಿಚಯಿಸಲಾಗಿದೆ. ಹೊಸ ಪಿಕ್‌ಅಪ್ ವಾಹನದಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಬದಲಾವಣೆ ಮಾಡಲಾಗಿದೆ.

ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಬೆಸ್ ವೆರಿಯೆಂಟ್‌ ಸೇರಿದಂತೆ ಜೆಡ್ ಸರಣಿಯಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಿ-ಎಲ್ಇಡಿ ಪ್ರೊಜೆಕ್ಟರ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲೈಟ್ಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯ ಜೋಡಿಸಿದೆ.

ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಎಂಜಿನ್ ಮತ್ತು ಪರ್ಫಾಮೆನ್ಸ್

ಬಿಎಸ್-6 ವಿ-ಕ್ರಾಸ್ ಮಾದರಿಯಲ್ಲಿ ಈ ಹಿಂದಿನ 2.5-ಲೀಟರ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಅನ್ನು ಮಾತ್ರ ಮಾರಾಟ ಮಾಡುತ್ತಿದೆ.

ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಹೊಸ ಡಿ-ಮ್ಯಾಕ್ಸ್ ಟ್ರಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ ಮತ್ತು ಸಾಫ್ಟ್ ರೈಡ್, ಹಿಂಭಾಗದಲ್ಲಿ ಲೀಫ್ ಸ್ಪಿರ್ಗ್ ಡಬಲ್ ವಿಷ್ಬೋನ್ ಅನ್ನು ಒಳಗೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಹೊಸ ವಾಹನ ಬ್ರೇಕಿಂಗ್ ಸಿಸ್ಟಂ ಕೂಡಾ ಉತ್ತಮವಾಗಿದ್ದು, ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರಲಿದ್ದು, 3,095 ಎಂಎಂ ಉದ್ದದ ವ್ಹೀಲ್‌ಬೇಸ್‌‌ನೊಂದಿಗೆ 5,295 ಎಂಎಂ ಉದ್ದ, 1,860 ಎಂಎಂ ಅಗಲ ಮತ್ತು 1,840 ಎಂಎಂ ಎತ್ತರ ಹೊಂದಿದೆ.

ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಸ್ಪೈನೆಲ್ ರೆಡ್, ಟೈಟಾನಿಯಂ ಸಿಲ್ವರ್, ಕಾಸ್ಮಿಕ್ ಬ್ಲ್ಯಾಕ್, ಗಲೆನಾ ಗ್ರೇ, ಸಿಲ್ಕಿ ವೈಟ್ ಪರ್ಲ್, ಸರ್ಪೈರ್ ಬ್ಲೂ ಮತ್ತು ಸ್ಪ್ಲಾಷ್ ವೈಟ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್

ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಕ್ರೂಸ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಕರ್ಟನ್, 18-ಇಂಚಿನ ಅಲಾಯ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
2021 Isuzu D-Max V-Cross & Hi-Lander BS6 Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X