ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ತನ್ನ ಎಫ್-ಪೇಸ್ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಜಾಗ್ವಾರ್ ಎಫ್-ಪೇಸ್ ಎಸ್‍ಯುವಿಯ ಪರ್ಫಾಮೆನ್ಸ್ ಎಸ್‌ವಿಆರ್ ಮಾದರಿಯನ್ನು ಕೂಡ ಪರಿಚಯಿಸಲಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಭಾರತದಲ್ಲಿ ಇದೀಗ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧಿಕೃತವಾಗಿ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ. ಮೊದಲಿಗೆ 2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯು ಇತರ ಜಾಗ್ವಾರ್ ಮಾದರಿಗಳಂತೆ ಐಷಾರಾಮಿ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ಮುಂಭಾಗ ಮುಂಭಾಗದ ಬಂಪರ್ ಅನ್ನು ಅಗ್ರೇಸಿವ್ ಲುಕ್ ನೊಂದಿಗೆ ಕಾಣುವ ರೀತಿಯ ವಿನ್ಯಾಸಗೊಳಿಸಲಾಗಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಏರ್ ಇನ್ ಟೆಕ್ ಗಳು ದೊಡ್ಡದಾಗಿದೆ. ಇದು ಇದು ಬ್ರೇಕ್‌ಗಳನ್ನು ಕೂಲ್ ಆಗಿ ಇರಸಲು ಸಹಾಯ ಮಾಡುತ್ತದೆ. 2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಹೊಸ ಎಲ್ಇಡಿ ಹೆಡ್‌ಲೈಟ್‌ಗಳೊಂದಿಗೆ ಪಿಕ್ಸೆಲ್ ಎಲ್ಇಡಿ ತಂತ್ರಜ್ಞಾನವನ್ನು ಆಯ್ಕೆಯಾಗಿ ನೀಡಲಾಗಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಎಸ್‍ಯುವಿಯು ನಯವಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು ಏರೋ ಪ್ಯಾಕೇಜ್ ಅನ್ನು ಸಹ ಹೊಂದಿದೆ, ಇದು ಬ್ರ್ಯಾಂಡ್‌ನ ಮೋಟಾರ್‌ಸ್ಪೋರ್ಟ್ ವಿಭಾಗದಿಂದ ಪ್ರೇರಿತವಾಗಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಎಸ್‍ಯುವಿ 22 ಇಂಚಿನ ಹೊಸ ಡ್ಯುಯಲ್-ಟೋನ್ ಗ್ಲೋಸ್ ನಾರ್ವಿಕ್ ಬ್ಲ್ಯಾಕ್ ವ್ಹೀಲ್ ಗಳನ್ನು ಹೊಂದಿವೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಹೊಸ ವ್ಜೀಲ್ ಗಳೊಂದಿಗೆ ಅಗ್ರೇಸಿವ್ ಆಗಿ ಕಾಣುವ ಫ್ರಂಟ್ ಎಂಡ್ ಹೊಂದಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯಲ್ಲಿ ಬ್ರ್ಯಾಂಡ್‌ನ 5.0-ಲೀಟರ್ ಸೂಪರ್‌ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 543 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು 20 ಎನ್ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಕೇವಲ 0.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ 286 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯಲ್ಲಿ ಡೈನಾಮಿಕ್, ಇಕೋ, ರೈನ್ ಮತ್ತು ಐಸ್-ಸ್ನೊ ಎಂಬ ಡ್ರೈವ್ ಮೋಡ್ ಗಳನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ವೆಹಿಕಲ್ ಹೋಲ್ಡ್" ಸಿಸ್ಟಂ ಸಹ ಹೊಂದಿದೆ, ಇದು ಹಿಲ್-ಹೋಲ್ಡ್ ಸಿಸ್ಟಂಗಿಂತ ಹೆಚ್ಚು ಸುಗಮವಾಗಿದೆ ಎಂದು ಹೇಳಲಾಗುತ್ತದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಮತ್ತು 11.4- ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಪಿವಿ ಪ್ರೊ ಇನ್ಫೋಟೈನ್‌ಮೆಂಟ್, ಸಾಫ್ಟ್‌ವೇರ್-ಓವರ್-ಏರ್ ಸಾಮರ್ಥ್ಯ ಮತ್ತು ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ಹೊಂದಿರಲಿದೆ.

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಕ್ಸ್3 ಎಂ ಮತ್ತು ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಎಸ್‍ಯುವಿಗಳುಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New Jaguar F-Pace SVR Bookings Open. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X