Just In
- 31 min ago ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- 45 min ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 1 hr ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಪರ್ಫಾಮೆನ್ಸ್ ಎಸ್ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ತನ್ನ ಎಫ್-ಪೇಸ್ ಎಸ್ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಜಾಗ್ವಾರ್ ಎಫ್-ಪೇಸ್ ಎಸ್ಯುವಿಯ ಪರ್ಫಾಮೆನ್ಸ್ ಎಸ್ವಿಆರ್ ಮಾದರಿಯನ್ನು ಕೂಡ ಪರಿಚಯಿಸಲಿದೆ.
ಭಾರತದಲ್ಲಿ ಇದೀಗ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧಿಕೃತವಾಗಿ ಹೊಸ ಎಫ್-ಪೇಸ್ ಎಸ್ವಿಆರ್ ಪರ್ಫಾಮೆನ್ಸ್ ಎಸ್ಯುವಿಯ ಖರೀದಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ. ಮೊದಲಿಗೆ 2021ರ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್ಯುವಿಯು ಇತರ ಜಾಗ್ವಾರ್ ಮಾದರಿಗಳಂತೆ ಐಷಾರಾಮಿ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯ ಮುಂಭಾಗ ಮುಂಭಾಗದ ಬಂಪರ್ ಅನ್ನು ಅಗ್ರೇಸಿವ್ ಲುಕ್ ನೊಂದಿಗೆ ಕಾಣುವ ರೀತಿಯ ವಿನ್ಯಾಸಗೊಳಿಸಲಾಗಿದೆ.
ಇನ್ನು ಏರ್ ಇನ್ ಟೆಕ್ ಗಳು ದೊಡ್ಡದಾಗಿದೆ. ಇದು ಇದು ಬ್ರೇಕ್ಗಳನ್ನು ಕೂಲ್ ಆಗಿ ಇರಸಲು ಸಹಾಯ ಮಾಡುತ್ತದೆ. 2021ರ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿ ಹೊಸ ಎಲ್ಇಡಿ ಹೆಡ್ಲೈಟ್ಗಳೊಂದಿಗೆ ಪಿಕ್ಸೆಲ್ ಎಲ್ಇಡಿ ತಂತ್ರಜ್ಞಾನವನ್ನು ಆಯ್ಕೆಯಾಗಿ ನೀಡಲಾಗಿದೆ.
ಇನ್ನು ಈ ಎಸ್ಯುವಿಯು ನಯವಾದ ಎಲ್ಇಡಿ ಟೈಲ್ಲ್ಯಾಂಪ್ಗಳನ್ನು ಸಹ ಒಳಗೊಂಡಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯು ಏರೋ ಪ್ಯಾಕೇಜ್ ಅನ್ನು ಸಹ ಹೊಂದಿದೆ, ಇದು ಬ್ರ್ಯಾಂಡ್ನ ಮೋಟಾರ್ಸ್ಪೋರ್ಟ್ ವಿಭಾಗದಿಂದ ಪ್ರೇರಿತವಾಗಿದೆ.
ಇನ್ನು ಈ ಹೊಸ ಎಸ್ಯುವಿ 22 ಇಂಚಿನ ಹೊಸ ಡ್ಯುಯಲ್-ಟೋನ್ ಗ್ಲೋಸ್ ನಾರ್ವಿಕ್ ಬ್ಲ್ಯಾಕ್ ವ್ಹೀಲ್ ಗಳನ್ನು ಹೊಂದಿವೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿ ಹೊಸ ವ್ಜೀಲ್ ಗಳೊಂದಿಗೆ ಅಗ್ರೇಸಿವ್ ಆಗಿ ಕಾಣುವ ಫ್ರಂಟ್ ಎಂಡ್ ಹೊಂದಿದೆ.
ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯಲ್ಲಿ ಬ್ರ್ಯಾಂಡ್ನ 5.0-ಲೀಟರ್ ಸೂಪರ್ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 543 ಬಿಹೆಚ್ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯು 20 ಎನ್ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ.
ಇನ್ನು ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿ ಕೇವಲ 0.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿ 286 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯಲ್ಲಿ ಡೈನಾಮಿಕ್, ಇಕೋ, ರೈನ್ ಮತ್ತು ಐಸ್-ಸ್ನೊ ಎಂಬ ಡ್ರೈವ್ ಮೋಡ್ ಗಳನ್ನು ಹೊಂದಿದೆ. ಇನ್ನು ಈ ಎಸ್ಯುವಿಯಲ್ಲಿ ವೆಹಿಕಲ್ ಹೋಲ್ಡ್" ಸಿಸ್ಟಂ ಸಹ ಹೊಂದಿದೆ, ಇದು ಹಿಲ್-ಹೋಲ್ಡ್ ಸಿಸ್ಟಂಗಿಂತ ಹೆಚ್ಚು ಸುಗಮವಾಗಿದೆ ಎಂದು ಹೇಳಲಾಗುತ್ತದೆ.
2021ರ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಮತ್ತು 11.4- ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಪಿವಿ ಪ್ರೊ ಇನ್ಫೋಟೈನ್ಮೆಂಟ್, ಸಾಫ್ಟ್ವೇರ್-ಓವರ್-ಏರ್ ಸಾಮರ್ಥ್ಯ ಮತ್ತು ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ಹೊಂದಿರಲಿದೆ.
ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಎಸ್ಯುವಿಯು ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಎಸ್ವಿಆರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಕ್ಸ್3 ಎಂ ಮತ್ತು ಮರ್ಸಿಡಿಸ್-ಎಎಂಜಿ ಜಿಎಲ್ಸಿ 43 ಎಸ್ಯುವಿಗಳುಗೆ ಪೈಪೋಟಿ ನೀಡುತ್ತದೆ.