Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 5 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್
ಬ್ರಿಟಿಷ್ ಕಾರು ಉತ್ಪಾದನಾ ಕಂಪನಿ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವಲ್, ರೇಂಜ್ ರೋವರ್) ನಮ್ಮ ಬೆಂಗಳೂರಿನಲ್ಲಿ ಹೊಸ ವರ್ಷದಲ್ಲಿ ಮತ್ತೊಂದು ಮಾರಾಟ ಮಳಿಗೆಗೆ ಚಾಲನೆ ನೀಡಿದ್ದು, ಒಂದೇ ಸೂರಿನಡಿ ವಿವಿಧ ಗ್ರಾಹಕ ಸೇವೆಗಳನ್ನು ಒದಗಿಸುವ ತ್ರಿ ಎಸ್ ಮಾರಾಟ ಮಳಿಗೆ ಇದಾಗಿದೆ.

ತ್ರಿ ಎಸ್ ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ವಾಹನ ಮಾರಾಟ, ಗ್ರಾಹಕ ಸೇವೆಗಳು ಮತ್ತು ಬಿಡಿಭಾಗಗಳ ಸೇವೆಗಳು ಒಂದೇ ಸೂರಿನಡಿ ಲಭ್ಯವಿದ್ದು, ಜೆಲ್ಎಲ್ಆರ್ ಹೊಸ ಕಾರು ಮಾರಾಟ ಮಳಿಗೆಯು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ತೆರೆಯಲಾಗಿದೆ. ಹೊಸ ಕಾರು ಮಾರಾಟ ಮಳಿಗೆಯನ್ನು ಶಕ್ತಿ ಆಟೋ ಕಾರ್ಸ್ ಸಂಸ್ಥೆಯೊಂದಿನ ಸಹಭಾಗೀತ್ವದಲ್ಲಿ ತೆರೆಯಲಾಗಿದ್ದು, ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಮಾರಾಟ ಮಳಿಗೆಯಲ್ಲಿ ಮಾರಾಟ, ಗ್ರಾಹಕರ ಸೇವೆಗಳು ಮತ್ತು ಬಳಕೆ ಮಾಡಿದ ಕಾರುಗಳ ಮಾರಾಟ ಸೌಲಭ್ಯಕ್ಕಾಗಿ ಪ್ರತ್ಯೇಕ ಸೌಲಭ್ಯ ತೆರೆದಿದೆ.

ಹೊಸ ತ್ರಿ ಎಸ್ ಮಾರಾಟ ಮಳಿಗೆಯು ಬರೋಬ್ಬರಿ 4,180 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದ್ದು, ಹೊಸ ಕಾರು ಮಾರಾಟ ಮಳಿಗೆಗಳಲ್ಲಿ ಒಂದೇ ಬಾರಿಗೆ 10ಕ್ಕೂ ಹೆಚ್ಚು ಕಾರುಗಳನ್ನು ಪ್ರದರ್ಶನ ಮಾಡಬಹುದಾಗಿದೆ.

ಜೊತೆಗೆ ಗ್ರಾಹಕರ ವ್ಯವಹಾರಗಳಿಗೆ ಪ್ರತ್ಯೇಕ ಸೌಲಭ್ಯ ತೆರೆದಿರುವ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಕಾರು ವಿತರಣೆಗೆ ಪ್ರತ್ಯೇಕವಾದ ಬೇ ಸಿದ್ದಪಡಿಸಿದ್ದು, ಸಾಕಷ್ಟು ಹೊರಾಂಗಣ ಸೌಲಭ್ಯ ಹೊಂದಿರುವುದರಿಂದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆಗೆ ಸಾಕಷ್ಟು ಸಹಕಾರಿಯಾಗಿದೆ.

ತ್ರಿ ಎಸ್ ಮಾರಾಟ ಮಳಿಗೆಗಳಲ್ಲಿ ಇತ್ತೀಚೆಗೆ ಯೂಸ್ಡ್ ಕಾರು ಮಾರಾಟ ಸೌಲಭ್ಯವನ್ನು ಸಹ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಪ್ರಮಾಣಿಕೃತ ಯೂಸ್ಡ್ ಕಾರು ಮಾರಾಟವು ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಆಟೋ ಕಂಪನಿಗಳು ಯಶಸ್ವಿಯಾಗಿವೆ. ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಿರುವ ಆಟೋ ಕಂಪನಿಗಳು ಹೊಸ ಕಾರು ಜೊತೆಗೆ ಯೂಸ್ಡ್ ಕಾರುಗಳ ಉದ್ಯಮದ ಮೇಲೂ ಸಾಕಷ್ಟು ಆಸಕ್ತಿ ತೋರುತ್ತಿವೆ.

ಸೆಕೆಂಡ್ ಹ್ಯಾಂಡ್ ಕಾರುಗಳು ಹೊಸ ಕಾರುಗಳ ಮಾದರಿಯಲ್ಲೇ ಗರಿಷ್ಠ ಮಟ್ಟದ ವಾರಂಟಿ, ಆಕರ್ಷಕ ಸಾಲಸೌಲಭ್ಯಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿದ್ದು, ದೇಶದ ಪ್ರಮುಖ 28 ನಗರಗಳಲ್ಲಿ 24 ನಗರಗಳಲ್ಲಿ ಜೆಎಲ್ಆರ್ ಕಂಪನಿಯು ಹೊಸ ತ್ರಿ ಎಸ್ ಮಾರಾಟ ಮಳಿಗೆಗಳನ್ನು ತೆರೆದಿದೆ.

ಹೊಸ ಕಾರು ಮಾರಾಟ ಮಳಿಗೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಡಿಫೆಂಡರ್ ಆಫ್ ರೋಡ್ ಎಸ್ಯುವಿ ಮಾದರಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಮಾರಾಟ ಪ್ರಕ್ರಿಯೆ ಜೋರಾಗಿದೆ.

ಆಫ್ ರೋಡ್ ಚಾಲನೆಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಲ್ಯಾಂಡ್ ರೋವಲ್ ಡಿಫೆಂಡರ್ ಕಾರು ಮಾದರಿಯು ಭಾರತದಲ್ಲಿ ಎಕ್ಸ್ಶೋರೂಂ ದರದಂತೆ ಆರಂಭಿಕವಾಗಿ ರೂ. 73.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.79.94 ಲಕ್ಷ ಬೆಲೆ ಹೊಂದಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಡಿಫೆಂಡರ್ ಆಫ್-ರೋಡ್ ಕಾರು ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಡಿಫೆಂಡರ್ 90(3 ಡೋರ್) ಹಾಗೂ ಡಿಫೆಂಡರ್ 110(5 ಡೋರ್) ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಕಾರು ಮಾದರಿಯು ಡಿ7ಎಕ್ಸ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ್ದು, ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಲ್ಯಾಂಡ್ ರೋವರ್ ಡಿಫೆಂಡರ್ ಕಾರು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್ಯುವಿಯು 3,022 ಎಂಎಂ ವ್ಹೀಲ್ ಬೇಸ್ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಈ ಮೂಲಕ ಆಫ್ ರೋಡ್ ಕೌಶಲ್ಯತೆಯಲ್ಲಿ ಎದುರಾಳಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ಹೊಸ ಕಾರು ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವಲ್ಲಿ ಯಶಸ್ವಿಯಾಗಿದೆ.