Just In
- 3 hrs ago
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
- 6 hrs ago
ಸಿಟ್ರನ್ 2ನೇ ಕಾರು ಮಾದರಿಯಾಗಿ ಬಿಡುಗಡೆಯಾಗಲಿದೆ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್ಯುವಿ
- 6 hrs ago
ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್ವ್ಯಾಗನ್ ಆರ್ಟಿಯೊನ್ ಕಾರು
- 6 hrs ago
ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್
Don't Miss!
- News
ಭಾರತದಲ್ಲಿ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ಇಲ್ಲ
- Movies
ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು
- Sports
ಐಎಸ್ಎಲ್: ಕೇರಳಕ್ಕೆ ಸೋಲುಣಿಸಿದ ನಾರ್ಥ್ಈಸ್ಟ್ ಯುನೈಟೆಡ್ ಪ್ಲೇ ಆಫ್ ಗೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಮಕ್ಕಳಿಗೆ ಪಿಸ್ತಾ ನೀಡಿದರೆ ಬುದ್ಧಿ ಶಕ್ತಿ ಹೆಚ್ಚುವುದರ ಜೊತೆಗೆ ಈ ಪ್ರಯೋಜನಗಳಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
ಜೀಪ್ ಇಂಡಿಯಾ ಕಂಪನಿಯು ತನ್ನ ಹೊಸ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ.

ಈ ಎಸ್ಯುವಿಯ ವಿತರಣೆಯನ್ನು ಭಾರತದಲ್ಲಿ ಶೀಘ್ರದಲ್ಲೇ ಆರಂಭಿಸಬಹುದು. ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ಖರೀದಿಗಾಗಿ ಜೀಪ್ ಕಂಪನಿಯು ಪ್ರೀ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಈ ಹೊಸ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ಗಳ ಮಾಹಿತಿ ಬಹಿರಂಗವಾಗಿದೆ.

ಈ 2021ರ ಜೀಪ್ ಕಂಪಾಸ್ ಎಸ್ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ), ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿರಲಿದೆ. ಇನ್ನು ಈ ವೆರಿಯೆಂಟ್ಗಳ ಫೀಚರ್ ಗಳ ಬಗ್ಗೆ ಮಾಹಿತಿ ಇಲ್ಲಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರಲ್ಲಿ ಸ್ಪೋರ್ಟ್ ವೆರಿಯೆಂಟ್ನಲ್ಲಿ ಡ್ಯುಯಲ್ ಏರ್ಬ್ಯಾಗ್, ಎಲ್ಇಡಿ ಹೆಡ್ಲ್ಯಾಂಪ್, 4 ಸ್ಪೀಕರ್ಗಳೊಂದಿಗೆ 8.4-ಇಂಚಿನ ಯುಕನೆಕ್ಟ್ ಇನ್ಫೋಟೈನ್ಮೆಂಟ್ ಮತ್ತು ಆಂಡ್ರಾಯ್ಡ್ ಆಟೋ/ಆಪಲ್ ಕಾರ್ ಪ್ಲೇ, 17 ಇಂಚಿನ ಅಲಾಯ್ ವೀಲ್ಸ್, ಬ್ಲ್ಯಾಕ್ ಫ್ಯಾಬ್ರಿಕ್ ಸೀಟುಗಳು, 3.5 ಇಂಚಿನ ಎಂಐಡಿ, ಮ್ಯಾನುಯಲ್ ಎಸಿ, ರಿಯರ್ ವೈಪರ್ ಮತ್ತು ಡಿಫೋಗರ್ ಮುಂತಾದ ಫೀಚರ್ ಗಳನ್ನು ಹೊಂದಿರಲಿದೆ.

ಲಾಂಗಿಟ್ಯೂಡ್ ವೆರಿಯೆಂಟ್ನಲ್ಲಿ ಪುಶ್ ಸ್ಟಾರ್ಟ್ ಬಟನ್, ರೂಫ್ ರೈಲ್, ಸ್ಕೈ ಗ್ರೇ ಇಂಟೀರಿಯರ್ಸ್, 7.0-ಇಂಚಿನ ಟಿಎಫ್ಟಿ ಕ್ಲಸ್ಟರ್, 6-ಸ್ಪೀಕರ್ಗಳು, ಎಲೆಕ್ಟ್ರಿಕ್ ಆಗಿ ಮಡಚಬಹುದಾದ ಮೀರರ್ ಗಳು ಮತ್ತು ಸ್ಪೋರ್ಟ್ ವೆರಿಯೆಂಟ್ನಲ್ಲಿ ನೀಡಲಾಗುವ ಫೀಚರ್ ಗಳ ಮೇಲೆ ಎಲ್ಇಡಿ ಫಾಗ್ ಲ್ಯಾಂಪ್ಗಳು ಸಿಗುತ್ತವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಲಿಮಿಟೆಡ್ ವೆರಿಯೆಂಟ್ನಲ್ಲಿ ಆಟೋ ಹೋಲ್ಡ್, 4X4, ಡ್ಯುಯಲ್ ಕಲರ್, ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಬಹುದಾದ ಡೈವರ್ ಸೀಟುಗಳು, ಆಟೋ ಡಿಮ್ಮಿಂಗ್ ಡೇ/ನೈಟ್ ಐಆರ್ವಿಎಂ, ರೇನ್ ಸೆನ್ಸಿಂಗ್ ವೈಪರ್ಸ್, 6 ಏರ್ಬ್ಯಾಗ್ ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಲಿಮಿಟೆಡ್ (ಒ) ವೆರಿಯೆಂಟ್ನಲ್ಲಿ ಡ್ಯುಯಲ್ ಪನೋರಮಿಕ್ ಸನ್ರೂಫ್, 10.1-ಇಂಚಿನ ಕನೆಕ್ಟ್ ಇನ್ಫೋಟೈನ್ಮೆಂಟ್ ಮತ್ತು ಪವರ್ಡ್ ಟೈಲ್ ಗೇಟ್ ಅನ್ನು ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಎಸ್ ವೆರಿಯೆಂಟ್ನಲ್ಲಿ ಪಿಎಂಎಸ್, 9 ಸ್ಪೀಕರ್ ಆಲ್ಪೈನ್ ಸಿಸ್ಟಂ, ವೈರ್ಲೆಸ್ ಚಾರ್ಜಿಂಗ್, 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತುಆಂಬಿಯೆಂಟ್ ಫೂಟ್ ಲೈಟ್ಗಳಂತಹ ಫೀಚರ್ ಗಳನ್ನು ಒಳಗೊಂಡಿದೆ.

2021ರ ಜೀಪ್ ಕಂಪಾಸ್ನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.

ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.