2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಜೀಪ್ ಇಂಡಿಯಾ ಕಂಪನಿಯು ತನ್ನ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಈ ಎಸ್‍ಯುವಿಯ ವಿತರಣೆಯನ್ನು ಭಾರತದಲ್ಲಿ ಶೀಘ್ರದಲ್ಲೇ ಆರಂಭಿಸಬಹುದು. ಕಂಪಾಸ್ ಫೇಸ್‌ಲಿಫ್ಟ್‌ ಎಸ್‍ಯುವಿ ಖರೀದಿಗಾಗಿ ಜೀಪ್ ಕಂಪನಿಯು ಪ್ರೀ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್‌ಗಳ ಮಾಹಿತಿ ಬಹಿರಂಗವಾಗಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಈ 2021ರ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ), ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿರಲಿದೆ. ಇನ್ನು ಈ ವೆರಿಯೆಂಟ್‌ಗಳ ಫೀಚರ್ ಗಳ ಬಗ್ಗೆ ಮಾಹಿತಿ ಇಲ್ಲಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಇದರಲ್ಲಿ ಸ್ಪೋರ್ಟ್ ವೆರಿಯೆಂಟ್‌ನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಲ್ಇಡಿ ಹೆಡ್‌ಲ್ಯಾಂಪ್, 4 ಸ್ಪೀಕರ್‌ಗಳೊಂದಿಗೆ 8.4-ಇಂಚಿನ ಯುಕನೆಕ್ಟ್ ಇನ್ಫೋಟೈನ್‌ಮೆಂಟ್ ಮತ್ತು ಆಂಡ್ರಾಯ್ಡ್ ಆಟೋ/ಆಪಲ್ ಕಾರ್ ಪ್ಲೇ, 17 ಇಂಚಿನ ಅಲಾಯ್ ವೀಲ್ಸ್, ಬ್ಲ್ಯಾಕ್ ಫ್ಯಾಬ್ರಿಕ್ ಸೀಟುಗಳು, 3.5 ಇಂಚಿನ ಎಂಐಡಿ, ಮ್ಯಾನುಯಲ್ ಎಸಿ, ರಿಯರ್ ವೈಪರ್ ಮತ್ತು ಡಿಫೋಗರ್ ಮುಂತಾದ ಫೀಚರ್ ಗಳನ್ನು ಹೊಂದಿರಲಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಲಾಂಗಿಟ್ಯೂಡ್ ವೆರಿಯೆಂಟ್‌ನಲ್ಲಿ ಪುಶ್ ಸ್ಟಾರ್ಟ್ ಬಟನ್, ರೂಫ್ ರೈಲ್, ಸ್ಕೈ ಗ್ರೇ ಇಂಟೀರಿಯರ್ಸ್, 7.0-ಇಂಚಿನ ಟಿಎಫ್‌ಟಿ ಕ್ಲಸ್ಟರ್, 6-ಸ್ಪೀಕರ್‌ಗಳು, ಎಲೆಕ್ಟ್ರಿಕ್ ಆಗಿ ಮಡಚಬಹುದಾದ ಮೀರರ್ ಗಳು ಮತ್ತು ಸ್ಪೋರ್ಟ್ ವೆರಿಯೆಂಟ್‌ನಲ್ಲಿ ನೀಡಲಾಗುವ ಫೀಚರ್ ಗಳ ಮೇಲೆ ಎಲ್ಇಡಿ ಫಾಗ್ ಲ್ಯಾಂಪ್‌ಗಳು ಸಿಗುತ್ತವೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಲಿಮಿಟೆಡ್ ವೆರಿಯೆಂಟ್‌ನಲ್ಲಿ ಆಟೋ ಹೋಲ್ಡ್, 4X4, ಡ್ಯುಯಲ್ ಕಲರ್, ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಬಹುದಾದ ಡೈವರ್ ಸೀಟುಗಳು, ಆಟೋ ಡಿಮ್ಮಿಂಗ್ ಡೇ/ನೈಟ್ ಐಆರ್ವಿಎಂ, ರೇನ್ ಸೆನ್ಸಿಂಗ್ ವೈಪರ್ಸ್, 6 ಏರ್‌ಬ್ಯಾಗ್ ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಲಿಮಿಟೆಡ್ (ಒ) ವೆರಿಯೆಂಟ್‌ನಲ್ಲಿ ಡ್ಯುಯಲ್ ಪನೋರಮಿಕ್ ಸನ್‌ರೂಫ್, 10.1-ಇಂಚಿನ ಕನೆಕ್ಟ್ ಇನ್ಫೋಟೈನ್‌ಮೆಂಟ್ ಮತ್ತು ಪವರ್ಡ್ ಟೈಲ್ ಗೇಟ್ ಅನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಎಸ್ ವೆರಿಯೆಂಟ್‌ನಲ್ಲಿ ಪಿಎಂಎಸ್, 9 ಸ್ಪೀಕರ್ ಆಲ್ಪೈನ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತುಆಂಬಿಯೆಂಟ್ ಫೂಟ್ ಲೈಟ್‌ಗಳಂತಹ ಫೀಚರ್ ಗಳನ್ನು ಒಳಗೊಂಡಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

2021ರ ಜೀಪ್ ಕಂಪಾಸ್‌ನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ

ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
2021 Jeep Compass Variant Details Leaked Ahead Of Launch. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X