ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಐದನೇ ತಲೆಮಾರಿನ ಗ್ರ್ಯಾಂಡ್ ಚರೋಕಿಯನ್ನು ಅನಾವರಣಗೊಳಿಸಿದೆ. ಈ 2022ರ ಜೀಪ್ ಗ್ರ್ಯಾಂಡ್ ಚರೋಕಿ(Jeep Grand Cherokee) ಎಸ್‍ಯುವಿಯು ಹೊಸ ವಿನ್ಯಾಸ, ಹೊಸ 4xe ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯ ಸೇರ್ಪಡೆ ಸೇರಿದಂತೆ ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

2022ರ ಜೀಪ್ ಗ್ರ್ಯಾಂಡ್ ಚರೋಕಿ ಎಸ್‍ಯುವಿಯು ತನ್ನ ತವರು ಅಮೆರಿಕದಲ್ಲಿ ಈ ವರ್ಷದಲ್ಲೇ ಬಿಡುಗಡೆಯಾಗಲಿದೆ. ಆದರೆ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯು 2022ರ ಆರಂಭದಲ್ಲಿ ಮಾತ್ರ ಬರುತ್ತದೆ. ಇನ್ನು ಈ ಎಸ್‍ಯುವಿಯು ಭಾರತಕ್ಕೆ ಬರುವ ಸಾಧ್ಯತೆಯಿದೆ ಮತ್ತು ನಾವು ನಿರೀಕ್ಷಿಸಬಹುದು ಮುಂದಿನ ವರ್ಷದಲ್ಲಿ ಅದು ಬರಲಿದೆ. ಜೀಪ್ ಸಂಸ್ಥೆಯ ಸಿಇಒ ಕ್ರಿಶ್ಚಿಯನ್ ಮ್ಯೂನಿಯರ್ ಮಾತನಾಡಿ, ಜೀಪ್ ಗ್ರ್ಯಾಂಡ್ ಚರೋಕಿ ನಮ್ಮ ಜಾಗತಿಕ ಫ್ಲಾಗ್‌ಶಿಪ್ ಆಗಿದೆ ಮತ್ತು ಜೀಪ್ ಬ್ರಾಂಡ್ ಅನ್ನು ಹೊಸ ಯುಗದ ಪ್ರೀಮಿಯಂ ಪರಿಷ್ಕರಣೆ, ನವೀನ ತಂತ್ರಜ್ಞಾನ, ಸುಧಾರಿತ 4x4 ಸಾಮರ್ಥ್ಯ ಮತ್ತು ಎಲೆಕ್ಟ್ರಿಕರಣ ಮುನ್ನಡೆಸಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಆನ್-ರೋಡ್ ಡೈನಾಮಿಕ್ಸ್, 4x4 ಸಾಮರ್ಥ್ಯ ಮತ್ತು 4xe ಕಾರ್ಯಕ್ಷಮತೆಯ ಸಂಪೂರ್ಣ ಸಮತೋಲನದೊಂದಿಗೆ, ಎಲ್ಲಾ ಹೊಸ 2022 ಜೀಪ್ ಗ್ರ್ಯಾಂಡ್ ಚೆರೋಕೀ ಅತ್ಯಂತ ತಾಂತ್ರಿಕವಾಗಿ ಮುಂದುವರಿದ, ಐಷಾರಾಮಿ ಮತ್ತು 4x4 ಸಾಮರ್ಥ್ಯದ ಗ್ರ್ಯಾಂಡ್ ಚರೋಕಿ ಆಗಿದೆ. ಹೊಸ ಜೀಪ್ ಗ್ರ್ಯಾಂಡ್ ಚರೋಕಿ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತರ ಅಮೆರಿಕದ ಜೀಪ್ ಡೀಲರ್‌ಶಿಪ್‌ಗಳಿಗೆ ಆಗಮಿಸಲಿದೆ. ಜೀಪ್ ಗ್ರ್ಯಾಂಡ್ ಚೆರೋಕೀ 4xe ಉತ್ತರ ಅಮೆರಿಕಾಕ್ಕೆ 2022ರ ಆರಂಭದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಆ ವರ್ಷದ ಕೊನೆಯಲ್ಲಿ ಆಗಮಿಸಲಿದೆ ಎಂದು ಹೇಳಿದರು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಐದನೇ ತಲೆಮಾರಿನ ಜೀಪ್ ಗ್ರ್ಯಾಂಡ್ ಚೆರೋಕಿ ಎಸ್‍ಯುವಿಯಲ್ಲಿ ಹಲವು ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 3.6-ಲೀಟರ್ ಪೆಂಟಾಸ್ಟಾರ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 294 ಬಿಎಚ್‌ಪಿ ಪವರ್ ಮತ್ತು 348 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಇದರೊಂದಿಗೆ 5.7 ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 357 ಬಿಎಚ್‌ಪಿ ಪವರ್ ಮತ್ತು 528 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಹಜವಾಗಿ, ಹೈಲೈಟ್ ಹೊಸ 4xe ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಾಗಿದ್ದು, 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಈ ಎಂಜಿನ್ 375 ಬಿಹೆಚ್‍ಪಿ ಪವರ್ ಮತ್ತು 637 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮೋಟಾರ್ 40 ಕಿಮೀ ರೇಂಜ್ ನೀಡುವ 17 kWh ಬ್ಯಾಟರಿ ಪ್ಯಾಕ್‌ನಿಂದ ಎಲೆಕ್ಟ್ರಿಕ್ ಸಹಾಯವನ್ನು ಪಡೆಯುತ್ತದೆ. ಈ ಆವೃತ್ತಿಯು 2720 ಕೆಜಿ ಎಳೆಯುವ ಸಾಮರ್ಥ್ಯದೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಈ ಹೊಸ ಗ್ರ್ಯಾಂಡ್ ಚರೋಕಿ ಕ್ವಾಡ್ರಾ-ಲಿಫ್ಟ್ ಏರ್ ಸಸ್ಪೆಂಕ್ಷನ್ ಸಿಸ್ಟಂನೊಂದಿಗೆ ಹೆಚ್ಚು ಆಫ್-ರೋಡ್ ನಿರ್ದಿಷ್ಟ ಟ್ರೈಲ್‌ಹಾಕ್ ಆವೃತ್ತಿಯನ್ನು ಪಡೆಯುತ್ತದೆ, ಇದು ಎಸ್‍ಯುವಿಯನ್ನು 287 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ಗೆ ಹೆಚ್ಚಿಸುತ್ತದೆ. ಕ್ವಾಡ್ರಾ-ಡ್ರೈವ್ II ಸಕ್ರಿಯ ವರ್ಗಾವಣೆ ಪ್ರಕರಣವು ಎಲೆಕ್ಟ್ರಾನಿಕ್ ನಿಯಂತ್ರಿತ ಸೀಮಿತ-ಸ್ಲಿಪ್ ರಿಯರ್ ಡಿಫರೆನ್ಷಿಯಲ್ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಇದು ನಿಜವಾಗಿಯೂ ಒರಟಾದ ಸಂದರ್ಭಗಳಲ್ಲಿ ಸುಧಾರಿತ ಸಸ್ಪೆಂಕ್ಷನ್ ಗಾಗಿ ಸ್ವೇ ಬಾರ್ ಡಿಸ್ಕನೆಕ್ಟ್ ಸಿಸ್ಟಂ ಅನ್ನು ಸಹ ಹೊಂದಿದೆ. ಹೊಸ ಗ್ರ್ಯಾಂಡ್ ಚೆರೋಕಿಯಿಂದ ಐಷಾರಾಮಿಯನ್ನು ನೋಡುವವರಿಗೆ, ಪ್ಯಾಲೆರ್ಮೊ ಲೆಥರ್ ಅಪ್‌ಹೋಲ್ಸ್ಟರಿ ಮತ್ತು 950 ವ್ಯಾಟ್, 19-ಸ್ಪೀಕರ್ ಮ್ಯಾಕ್‌ಇಂಟೋಶ್ ಸ್ಟಿರಿಯೊವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಹೊಸ ಜೀಪ್ ಗ್ರ್ಯಾಂಡ್ ಚರೋಕಿ ಕೂಡ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಗಾಗಿ 10.1 ಇಂಚಿನ ಸ್ಕ್ರೀನ್‌ಗಳನ್ನು ಹೊಂದಿದೆ. 10 ಇಂಚಿನ ಹೆಡ್-ಅಪ್ ಡಿಸ್‌ಪ್ಲೇ ಸಹ ಇದೆ, ಆದರೆ ಖರೀದಿದಾರರು ಮುಂಭಾಗದ ಪ್ರಯಾಣಿಕರಿಗಾಗಿ 10.25 ಇಂಚಿನ ಸ್ಕ್ರೀನ್ ಪಡೆಯಬಹುದು. ಈ ಸಿಸ್ಟಂಗಳು ಯುಕನೆಕ್ಟ್ 5 ಬಳಕೆದಾರ ಇಂಟರ್ಫೇಸ್ ಅನ್ನು ಐದು ಪಟ್ಟು ವೇಗದ ಆಪರೇಟಿಂಗ್ ವೇಗ ಮತ್ತು ಒಟಿಎ ಅಪ್‌ಡೇಟ್‌ಗಳೊಂದಿಗೆ ನಡೆಸುತ್ತವೆ. ಈ ಹೊಸ ಎಸ್‍ಯ್ವಿಯಲ್ಲಿ ಅಮೆಜಾನ್ ಫೈರ್ ಟಿವಿ ಕಾರ್ಯನಿರ್ವಹಣೆಯೊಂದಿಗೆ ಹಿಂಭಾಗದ ಸೀಟಿನ ಮನರಂಜನಾ ಸಿಸ್ಟಂ ಇದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಇನ್ನು ಜೀಪ್ ತನ್ನ ಹೊಸ ಕಮಾಂಡರ್‌ ಎಸ್‌ಯುವಿಯನ್ನು ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಿದೆ. ಜೀಪ್ ಕಂಪನಿಯು ಭಾರತದಲ್ಲಿ ಈ ಮಾದರಿಯನ್ನು ಮೆರಿಡಿಯನ್‌ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. 2022ರಲ್ಲಿ ಭಾರತದ ಮಾರುಕಟ್ಟೆಗೆ ಮೆರಿಡಿಯನ್‌ ಮಾದರಿಯನ್ನು ಬಿಡುಗಡೆಗೊಳಿಸಲಿದೆ. ಆದರೆ ಜೀಪ್ ಕಂಪನಿಯು ಮೆರಿಡಿಯನ್‌ ಎಸ್‍ಯುವಿಯ ಭಾರತದ ಬಿಡುಗಡೆಯ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರಿನಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ. ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ. ಇದರಿಂದ ಮೆರಿಡಿಯನ್‌ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ನಿರೀಕ್ಷಿಸುತ್ತೇವೆ .ಕಮಾಂಡರ್ ಎಸ್‍ಯುವಿಯ ಆಫ್-ರೋಡ್ ಸಾಮರ್ಥ್ಯದ ವಿಡಿಯೋವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ವಿಡಿಯೋದಲ್ಲಿ ಬೆಟ್ಟ ಹತ್ತುವಿಕೆ, ವಿಭಿನ್ನ ಭೂಪ್ರದೇಶಗಳನ್ನು ಸಾಗುವುದನ್ನು ಪ್ರದರ್ಶಿಸಿದ್ದಾರೆ. ವಿ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Jeep Grand Cherokee ಎಸ್‍ಯುವಿ

ಹೊಸ ಗ್ರ್ಯಾಂಡ್ ಚರೋಕಿ ಎಸ್‍ಯುವಿಯ ಸುರಕ್ಷತೆಗೆ ಸಂಬಂಧಿಸಿದಂತೆ, ಕಲೆಷನ್ ಅಲರ್ಟ್, ರೇರ್ ಪತ್ ಡೆಡಿಕ್ಷನ್ ಕ್ರೂಸ್ ಕಂಟ್ರೋಲ್, ಆಕ್ಟೀವ್ ಲೆನ್ ಮ್ಯಾನೆಜ್ ಮೆಂಟ್, ಲೇನ್-ಕೀಪಿಂಗ್ ಅಸಿಸ್ಟ್, ಸುಧಾರಿತ ಬ್ರೇಕ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆಯುತ್ತದೆ.

Most Read Articles

Kannada
Read more on ಜೀಪ್ jeep
English summary
New jeep grand cherokee suv unveiled features specifications detail
Story first published: Friday, October 1, 2021, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X