ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಹೊಸ ಹುರಾಕನ್ ಎಸ್‌ಟಿಒ ಸುಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ (ಸೂಪರ್ ಟ್ರೋಫಿಯೋ ಓಮೊಲೊಗಾಟಾ) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.99 ಕೋಟಿಯಾಗಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಗಳಂತೆಯೇ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ. ಕಡಿಮೆ ಟಾರ್ಕ್ ಅನ್ನು ಸರಿದೂಗಿಸಲು ಹುರಾಕನ್ ಎಸ್‌ಟಿಒ ಹುರಾಕನ್ ಪರ್ಫಾರ್ಮೆಂಟೆಗಿಂತ 43 ಕಿ.ಗ್ರಾಂ ಹಗುರವಾಗಿರುತ್ತದೆ. ಟ್ರ್ಯಾಕ್ ಕಾರ್ಯಕ್ಷಮತೆಗೆ ಮತ್ತಷ್ಟು ಸಹಾಯ ಮಾಡಲು, ಹುರಾಕನ್ ರೋಡೈನಾನಿಕ್ ಅನ್ನು ಮತ್ತಷ್ಟು ತಿರುಚಲಾಗಿದೆ. ಇದು ಕ್ರಮವಾಗಿ ಶೇ.37 ಮತ್ತು ಶೇ.53 ಏರೋಡೈನಾನಿಕ್ ದಕ್ಷತೆ ಮತ್ತು ಡೌನ್‌ಫೋರ್ಸ್‌ನಲ್ಲಿ ಹೆಚ್ಚಾಗುತ್ತದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿನ ಬಾಡಿಯ ಶೇ.75 ರಷ್ಟು ಫೈಬರ್ ಬಳಸಿ ಮತ್ತು ಮೆಗ್ನೀಸಿಯಮ್ ವ್ಹೀಲ್ ಗಳನ್ನು ಬಳಸುವ ಮೂಲಕ 43 ಕಿ.ಗ್ರಾಂ ತೂಕ ಉಳಿತಾಯ ಮಾಡಲಾಗಿದೆ. ಇದರ ಬಾನೆಟ್, ಬಂಪರ್ ಮತ್ತು ಮಡ್‌ಗಾರ್ಡ್ ಅನ್ನು ಒಂದೇ ಯುನಿಟ್ ಆಗಿ ಮಾಡುವ ಮೂಲಕ ಮತ್ತಷ್ಟು ತೂಕ ಉಳಿತಾಯ ಮಾಡಲಾಗಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿನಲ್ಲಿ 5.2-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 640 ಹೆಚ್‌ಪಿ ಪವರ್ ಮತ್ತು 565 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಇನ್ನು ಈ ಹೊಸ ಕಾರು ಕೇವಲ 3 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕೇವಲ 9 ಸೆಕೆಂಡುಗಳಲ್ಲಿ 200 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್ ಕಾರ್ 310 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಸ್‌ಟಿಒ, ಟ್ರೋಫಿಯೊ ಮತ್ತು ಪಿಯೋಗಿಯಾ ಎಂಬ ಡ್ರೈವಿಂಗ್ ಮೋಡ್ ಗಳನ್ನು ಹೊಂದಿವೆ. ಮುಂಭಾಗದ ವ್ಹೀಲ್‌ಹೌಸ್‌ಗಳಲ್ಲಿ ಫ್ರಂಟ್ ಸ್ಪ್ಲಿಟರ್ ಮತ್ತು ಲೌವರ್‌ಗಳು, ಎನ್‌ಎಸಿಎ ಏರ್, ಏರ್ ಸ್ಕೂಪ್ ಮತ್ತು ಇಂಟಿಗ್ರೇಟೆಡ್ ಶಾರ್ಕ್ ಫಿನ್‌ನೊಂದಿಗೆ ಹಿಂಭಾಗದ ಎಂಜಿನ್ ಬಾನೆಟ್ ಮತ್ತು ಕೈಯಾರೆ ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ವಿಂಗ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಈ ಹುರಾಕನ್ ಎಸ್‌ಟಿಒ ಕಾರಿನ ಇಂಟಿರಿಯರ್ ನಲ್ಲಿ ಸ್ಪೋರ್ಟಿ ಬಕೆಟ್ ಸೀಟುಗಳನ್ನು ಹೊಂದಿವೆ. ಈ ಕಾರಿನಲ್ಲಿ ಕ್ಲೈಮೇಟ್ ಕಂಟ್ರೋಲ್, ದೊಡ್ಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಟೀಯರಿಂಗ್ ವ್ಹೀಲ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು, ಅಲ್ಯೂಮಿನಿಯಂ ಸ್ವಿಚ್ ಗಳು ಮತ್ತು ಸೆಂಟರ್ ಕನ್ಸೋಲ್ ನಲ್ಲಿ ಎಸ್‌ಟಿಒ ಬ್ಯಾಡ್ಜ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಕರೋನಾ ವೈರಸ್ ಆರ್ಭಟದಿಂದಾಗಿ 2021ರ ಹಣಕಾಸು ವರ್ಷದಲ್ಲಿ ಬಹುತೇಕ ಎಲ್ಲಾ ಐಷಾರಾಮಿ ಕಾರುಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಆದರೆ ಲ್ಯಾಂಬೊರ್ಗಿನಿ ಕಾರುಗಳ ಮಾರಾಟ ಪ್ರಮಾಣವು ದ್ವಿಗುಣಗೊಂಡಿತ್ತು. ಇದರಿಂದ ಲ್ಯಾಂಬೊರ್ಗಿನಿ ತಮ್ಮ ಹೊಸ ಸೂಪರ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ.

ಭಾರತದಲ್ಲಿ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಬಿಡುಗಡೆ

ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಮಾದರಿ ಕೂಡ ಇತರ ಲ್ಯಾಂಬೊರ್ಗಿನಿ ಸೂಪರ್ ಕಾರುಗಳಂತೆ ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುತ್ತದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Lamborghini Huracan STO Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X