ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಜಾಗ್ವಾರ್ ಲ್ಯಾಂಡ್ ರೋವರ್ ತನ್ನ 2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.88.06 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಸ್ಟ್ಯಾಂಡರ್ಡ್ ಮತ್ತು ಆರ್-ಡೈನಾಮಿಕ್ ಸ್ಟೈಲಿಂಗ್ ಪ್ಯಾಕ್‌ಗಳೊಂದಿಗೆ ಎಸ್, ಎಸ್‌ಇ ಮತ್ತು ಎಚ್‌ಎಸ್‌ಇ ಎಂಬ ಮೂರು ಟ್ರಿಮ್‌ಗಳನ್ನು ಹೊಂದಿದೆ. ಹೊಸ ಡಿಸ್ಕವರಿ ಸ್ವಲ್ಪ ಸುಧಾರಿತ ಸ್ಟೈಲಿಂಗ್ ಮತ್ತು ಹೊಸ ಇಂಟಲಿಜೆಂಟ್ ಎಡಬ್ಲ್ಯೂಡಿ ಸಿಸ್ಟಂ ಜೊತೆಗೆ ಹಲವಾರು ಹೊಸ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಕೂಡ ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಈ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ಹೊರಭಾಗದಲ್ಲಿ, ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಡಿಆರ್‌ಎಲ್‌ಗಳು, ನವೀಕರಿಸಿದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಇದರೊಂದಿಗೆ ಹೊಸ ಸೈಡ್ ವೆಂಟ್ಸ್, ಆನಿಮೇಟೆಡ್ ಸ್ವೀಪಿಂಗ್ ಫ್ರಂಟ್ ಮತ್ತು ಹಿಂಭಾಗದ ಇಂಡಿಕೇಟರ್ಸ್ ಮತ್ತು ಹೊಸ ಗ್ಲೋಸ್ ಬ್ಲ್ಯಾಕ್ ಪ್ಯಾನಲ್ ಮೂಲಕ ಕನೆಕ್ಟಿವಿಟಿಯನ್ನು ಹೊಂದಿರುವ ಹೊಸ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಈ ಎಸ್‍ಯುವಿಯಲ್ಲಿ 19-ಇಂಚಿನ ಮತ್ತು 20-ಇಂಚಿನ ವ್ಹೀಲ್ ಗಳ ಆಯ್ಕೆಯನ್ನು ನೀಡಲಾಗಿದೆ. ಇತರ ನವೀಕರಿಸಿದ ಲ್ಯಾಂಡ್ ರೋವರ್ ಎಸ್‌ಯುವಿಗಳಂತೆಯೇ, 2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ 11.4-ಇಂಚಿನ ಪೂರ್ಣ ಎಚ್‌ಡಿ ಟಚ್‌ಸ್ಕ್ರೀನ್‌ನೊಂದಿಗೆ ಹೊಸ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಬ್ರ್ಯಾಂಡ್'ನ ಸೋಟಾ ತಂತ್ರಜ್ಞಾನವು ಮಾರಾಟಗಾರರಿಗೆ ಭೇಟಿ ನೀಡದೆ 44 ವೈಯಕ್ತಿಕ ಎಲೆಕ್ಟ್ರಾನಿಕ್ ಮಾಡ್ಯೂಲ್‌ಗಳನ್ನು ನವೀಕರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಈ ಎಸ್‍ಯುವಿ 12.3-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಹೈ-ಡೆಫಿನಿಷನ್ 3ಡಿ ಮ್ಯಾಪಿಂಗ್ ಅನ್ನು ಸಹ ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಈ ಎಸ್‍ಯುವಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್, 4 ಜೋನ್ ಕ್ಲೈಮೇಟ್ ಕಂಟ್ರೋಲ್, 18-ವೇ ಹೀಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ, ಪಿಎಂ 2.5 ಏರ್ ಫಿಲ್ಟರ್ ಸಿಸ್ಟಮ್, ಲ್ಯಾಂಡ್ ರೋವರ್ ಕ್ಲಿಕ್ ಮತ್ತು ಸೀ ಟ್ಯಾಬ್ಲೆಟ್ ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

ಇನ್ನು ಹೊಸ ಡಿಸ್ಕವರಿ ಎಸ್‍ಯುವಿಯಲ್ಲಿ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಸ್ಟೇಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಬ್ರೇಕಿಂಗ್ ಮೂಲಕ ಟಾರ್ಕ್ ವೆಕ್ಟರಿಂಗ್ ಮತ್ತು ಐಸೊಫಿಕ್ಸ್ ಮೌಂಟಡ್ ಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ ಪಿ300 2.0ಎಲ್ 4-ಸಿಲಿಂಡರ್, ಪಿ360 3.0ಎಲ್ 6-ಸಿಲಿಂಡರ್ ಪೆಟ್ರೋಲ್ ಮತ್ತು ಡಿ300, 3.0ಎಲ್, 6-ಸಿಲಿಂಡರ್ ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಬಿಡುಗಡೆ

2.0 ಎಲ್ ಗ್ಯಾಸೋಲಿನ್ ಯುನಿಟ್ 296 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 3.0ಎಲ್ ಪೆಟ್ರೋಲ್ ಎಂಜಿನ್ 355 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು3.0ಎಲ್, ಡೀಸೆಲ್ ಎಂಜಿನ್ 296 ಬಿಹೆಚ್‌ಪಿ ಪವರ್ ಮತ್ತು 650 ಎನ್ಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಡಿಸ್ಕವರಿ 4ಡಬ್ಲ್ಯುಡಿ ಸಿಸ್ಟಂ ಜೊತೆಗೆ ಟೆರೈನ್ ರೆಸ್ಪಾನ್ಸ್ ಸಿಸ್ಟಂ ಅನ್ನು ಪಡೆದುಕೊಂಡಿದೆ.

Most Read Articles

Kannada
English summary
2021 Land Rover Discovery Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X