ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಹೊಸ ಬೊಲೆರೊ ನಿಯೋ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಹೀಂದ್ರಾ ಟಿಯುವಿ 300 ಸಬ್ -4 ಮೀಟರ್ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಅವತಾರ ಬೊಲೆರೊ ನಿಯೋ ಆಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಆದರೆ ‘ಬೊಲೆರೊ ನಿಯೋ' ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಎನ್ನಲಾಗುತ್ತಿದೆ. ಮಹೀಂದ್ರಾ ಕಂಪನಿಯು ಸರಣಿಯಲ್ಲಿ ಬೊಲೆರೊ ಜನಪ್ರಿಯ ಮಾದರಿಯಾಗಿದೆ. ಅತಿ ಹೆಚ್ಚು ಮಾರಾಟವಾಗುವ ಯುಟಿಲಿಟಿ ವಾಹನಗಳ ಪಟ್ಟಿಯಲ್ಲಿ ಬೊಲೆರೊ ಅಗ್ರಸ್ಥಾನದಲ್ಲಿದೆ. ಇದೇ ಕಾರಣಕ್ಕೆ ತನ್ನ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗೆ ಬೊಲೆರೊ ನಿಯೋ ಎಂಬ ಹೆಸರನ್ನು ನೀಡರಬಹುದು. ಈ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿಯು ಈ ವರ್ಷದ ಸೆಪ್ಟೆಂಬರ್ ತಿಂಗಳಿನೊಳಗೆ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ವಿನ್ಯಾಸದ ವಿಷಯದಲ್ಲಿ, ಹೊಸ ಬೊಲೆರೊ ನಿಯೋ ಹಿಂದಿನ ಟಿಯುವಿ300 ಮಾದರಿಗಿಂತ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ, ಇದರ ಮುಂಭಾಗದ ಗ್ರಿಲ್, ಹೊಸ ಮುಂಭಾಗದ ಬಂಪರ್ ಮತ್ತು ನಯವಾದ ಹೆಡ್‌ಲ್ಯಾಂಪ್. ಬಾಕ್ಸಿ ಸಿಲೂಯೆಟ್, ಸ್ಕ್ವೇರ್-ಇಶ್ ವ್ಹೀಲ್ ಆರ್ಚರ್ ಮತ್ತು ಸೈಡ್-ಹಿಂಗ್ಡ್ ಟೈಲ್‌ಗೇಟ್ ಹೊಂದಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಇದರಲ್ಲಿ ಲ್ಯಾಡರ್-ಫ್ರೇಮ್ ಚಾಸಿಸ್ ಬದಲಾಗದೆ ಉಳಿಯುತ್ತದೆ. ಇನ್ನು ಎಸ್‌ಯುವಿಯ ಸೈಡ್ ಸ್ಟೆಪ್ಸ್, ರಿಯರ್ ಸ್ಟೆಪ್, ರೂಫ್ ರೈಲ್ಸ್, ರೂಫ್-ಮೌಂಟೆಡ್ ರಿಯರ್ ಸ್ಪಾಯ್ಲರ್ ಮತ್ತು ಟೈಲ್‌ಗೇಟ್ ಅಳವಡಿಸಿದ ಸ್ಪೇರ್ ವ್ಹೀಲ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಈ ನಿರ್ದಿಷ್ಟ ಮಾದರಿಯು ಸ್ಟೀಲ್ ವ್ಹೀಲ್ ಗಳನ್ನು ಹೊಂದಿತ್ತು, ಇನ್ನು ಈ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲೈಟ್‌ಗಳು ಅಥವಾ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿಲ್ಲ. ಅಲ್ಲದೇ ಈ ಬೊಲೆರೊ ನಿಯೋ 7 ಸೀಟುಗಳ ಸಂರಚನೆಯಲ್ಲಿ ಲಭ್ಯವಿರಬಹುದು.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಇನ್ನು ಸ್ಫಾಟ್ ಟೆಸ್ಟ್ ನಲ್ಲಿ ಹಳೆಯ ಟಿಯುವಿ300 ಬ್ಯಾಡ್ಜ್ ಅನ್ನು ಟೈಲ್‌ಗೇಟ್‌ನಲ್ಲಿ ಕಾಣಸಿಗೊಂಡಿದೆ. ಇನ್ನು ಬಾನೆಟ್ ವಿನ್ಯಾಸವು ಒಂದೇ ಆಗಿರುತ್ತದೆ. ಡಿ-ಪಿಲ್ಲರ್ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ಪಡೆಯುವುದರೊಂದಿಗೆ ಬೊಲೆರೊ ನಿಯೋದ ಸೈಡ್ ಪ್ರೊಫೈಲ್ ಬದಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಈ ಎಸ್‍ಯುವಿಯು ಒಟ್ಟಾರೆ ಬಾಕ್ಸಿ ವಿನ್ಯಾಸವು ಹೊಸ ಮಾದರಿಯಲ್ಲಿ ಬದಲಾಗದೆ ಉಳಿದಿದೆ. ಹೊಸ ಬೊಲೆರೊ ನಿಯೋ ಇಂಟಿರಿಯರ್ ನಲ್ಲಿ ಹಿಂದಿನ ಮಾದರಿಗಿಂತ ಕೆಲವು ನವೀಕರಣಗಳನ್ನು ಹೊಂದಿರುತ್ತದೆ. ಬೊಲೆರೊ ನಿಯೋ ಕಾಂಪ್ಯಾಕ್ಟ್-ಎಸ್‌ಯುವಿ ಕ್ಯಾಬಿನ್‌ಗೆ ಹೊಸ ಲುಕ್ ಮತ್ತು ಪ್ರೀಮಿಯಂ ಅನುಭವವನ್ನು ನೀಡಲು ಸಾಕಷ್ಟು ಬದಲಾವಣೆಗಳನ್ನು ಮಾಡಲಿದೆ ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಇದರ ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ನೊಂದಿಗೆ ನವೀಕರಿಸಿದ ಇನ್ಫೋಟೈನ್ಮೆಂಟ್ ಟಚ್-ಸ್ಕ್ರೀನ್ ಸಿಸ್ಟಂ ಅನ್ನು ಒಳಗೊಂಡಿರಲಿದೆ. ಇನ್ನು ಹಿಂದಿನ ಮಾದರಿಯಲ್ಲಿದ್ದ ಕೀ ಲೆಸ್ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕರ ಸೀಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಫೀಚರ್ ಗಳು ಇದರಲ್ಲಿಯು ಮುಂದುವರೆಸಬಹುದು.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಈ ಹೊಸ ಕಾಂಪ್ಯಾಕ್ಟ್-ಎಸ್‌ಯುವಿಯಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 1.5-ಲೀಟರ್ ಮೂರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿತ್ತದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 240 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಪವರ್ ಮತ್ತು ಟಾರ್ಕ್ ಸಂಖ್ಯೆಗಳಲ್ಲಿ ಬದಲಾಗುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯ ಸನಿಹದಲ್ಲಿ ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿ

ಜನಪ್ರಿಯ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು ಮಾರಾಟವನ್ನು ಹೆಚ್ಚಿಸಲು ಮಹೀಂದ್ರಾ ಟಿವಿಯು300 ಅನ್ನು ಬೊಲೆರೊ ನಿಯೋ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಾಗುತ್ತಿದೆ. ಈ ಹೊಸ ಎಸ್‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mahindra Bolero Neo Launch Will Be Soon. Read In Kannada.
Story first published: Saturday, June 19, 2021, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X