ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಆಫ್ ರೋಡ್ ಎಸ್‌ಯುವಿ ಕಾರು ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಆಫ್ ರೋಡ್ ಎಸ್‌ಯುವಿ ಮಾದರಿಯ ಕಾರು ಮಾರಾಟದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 12.12 ಲಕ್ಷದಿಂದ ಟಾಪ್ ಮಾದರಿಯು ರೂ. 14.17 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಆಸಕ್ತ ಗ್ರಾಹಕರು ಆಫ್ ರೋಡ್ ಎಸ್‌ಯುವಿ ಮಾದರಿಗಾಗಿ ಹೆಚ್ಚುವರಿ ಪ್ಯಾಕೇಜ್‌ನೊಂದಿಗೆ ಮತ್ತಷ್ಟು ಪ್ರೀಮಿಯಂ ಮತ್ತು ಸೆಫ್ಟಿ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಮಹೀಂದ್ರಾ ಕಂಪನಿಯೇ ಆಫ್ಟರ್ ಮಾರ್ಕೆಟ್ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡುತ್ತದೆ.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಕಂಪನಿಯು ನೀಡದಿರುವ ರೀತಿಯಲ್ಲಿ ವಿವಿಧ ಬಣ್ಣಗಳ ಆಯ್ಕೆ ಮತ್ತು ಆಕರ್ಷಕ ಟೈರ್ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಗ್ರಾಹಕರ ಬೇಡಿಕೆಯೆಂತೆ ಇತ್ತೀಚೆಗೆ ಥಾರ್ ಮಧ್ಯಮ ಗಾತ್ರದ ಆವೃತ್ತಿಯೊಂದು ನಾರ್ಡೊ ಗ್ರೆ ಬಣ್ಣದ ವ್ಯಾರ್ಪ್ ಮಾಡಿಫಿಕೇಷನ್ ಪಡೆದುಕೊಂಡಿದ್ದು, ಹೊಸ ಕಾರು ಕಂಪನಿಯೇ ನೀಡಿರುವ ಬಣ್ಣದ ಆಯ್ಕೆ ಹೊಂದಿರುವ ಮಾದರಿಯಲ್ಲಿ ಸಿದ್ದಗೊಂಡಿದೆ. ಹೊಸ ಬಣ್ಣದ ಆಯ್ಕೆಯೊಂದಿಗೆ ಸ್ಟಿಕರ್ಸ್ ಡಿಸೈನ್ ಕೂಡಾ ಆಫ್ ರೋಡ್ ಮಾದರಿಗೆ ಹೊಸ ಲುಕ್ ನೀಡಿದ್ದು, ಬ್ಲ್ಯಾಕ್ ಯಾರ್ಡ್ ಕಸ್ಟಮ್ ಎನ್ನುವ ಮಾಡಿಫೈ ಕಂಪನಿಯೊಂದಿಗೆ ಹೊಸ ಬಣ್ಣದ ಆಯ್ಕೆಯನ್ನು ನೀಡಿದೆ.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಥಾರ್ ಖರೀದಿ ಮಾಡುವ ಶೇ. 80ಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಇಷ್ಟದಂತೆ ಮಾಡಿಫೈ ಸೌಲಭ್ಯವನ್ನು ಹೊಂದಿದ್ದಾರೆ.

ಹೀಗಾಗಿ ಹಲವಾರು ಮಾಡಿಫೈ ಕಂಪನಿಗಳು ಥಾರ್ ಕಾರು ಮಾದರಿಗಾಗಿ ಹಲವಾರು ಮಾಡಿಫೈ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬಣ್ಣದ ಆಯ್ಕೆಯು ಥಾರ್ ಮಾಲೀಕರ ಪ್ರಮುಖ ಆಕರ್ಷಣೆಯಾಗಲಿದೆ.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಇನ್ನು ಮಾಡಿಫೈ ಸೌಲಭ್ಯಗಳಿಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ ಅದು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿದ್ದಲ್ಲಿ ದಂಡ ಕೂಡಾ ಪಾವತಿಸಿಬಹುದಾದ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಿಬೇಕಿದ್ದು, ಆದಷ್ಟು ಸ್ಟ್ಯಾಂಡರ್ಡ್ ಮಾಡಿಫೈ ಸೌಲಭ್ಯಗಳನ್ನು ಮಾತ್ರ ಬಳಕೆ ಮಾಡಬೇಕು.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಜೊತೆಗೆ ವಾಹನ ಮಾಲೀಕರು ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅತಿಯಾದ ಮಾಡಿಫೈ ಸೌಲಭ್ಯಗಳು ಕಾರುಗಳಿಗೆ ಆಕರ್ಷಣೆ ನೀಡಬಹುದಾದರೂ ವಾಹನಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಲ್ಲದೆ ಸುರಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೂ ಅಡಚಣೆ ಉಂಟು ಮಾಡಬಹುದು.

ಥಾರ್ ಕಾರಿಗೆ ಹೊಸ ಸ್ಪೋರ್ಟಿ ಲುಕ್ ನೀಡಿದ ನಾರ್ಡೊ ಗ್ರೇ ಕಲರ್

ಸದ್ಯ ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

Most Read Articles

Kannada
English summary
New-Gen Mahindra Thar Wrapped In Nardo Grey Color Looks Sporty. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X