ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಮಹೀಂದ್ರಾ(Mahindra) ಕಂಪನಿಯು ತನ್ನ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಮೂಲಕ ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಕಂಪನಿಯು ಹೊಸ ಕಾರಿನ ವಿತರಣೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಹೊಸ ಎಕ್ಸ್‌ಯುವಿ700 ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ ಮೊದಲ ದಿನವೇ 25 ಸಾವಿರ ಬುಕ್ಕಿಂಗ್ ಮತ್ತು ಎರಡನೇ ದಿನದ ಬುಕ್ಕಿಂಗ್ ಅವಧಿಯಲ್ಲಿ ಮತ್ತೆ 25 ಸಾವಿರ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಇದುವರೆಗೆ ಮಹೀಂದ್ರಾ ಕಂಪನಿಯು ಬರೋಬ್ಬರಿ 65 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಇದೀಗ ಹೊಸ ಕಾರಿನ ಮೊದಲ ಯುನಿಟ್ ವಿತರಣೆ ಮಾಡುವ ಮೂಲಕ ಮಾರಾಟ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಕಂಪನಿಯು ಮೊದಲ ಹಂತವಾಗಿ ಹೊಸ ಕಾರಿನ ಪೆಟ್ರೋಲ್ ಮಾದರಿಯನ್ನು ವಿತರಣೆ ಆರಂಭಿಸಿದ್ದು, ನವೆಂಬರ್ ಕೊನೆಯಲ್ಲಿ ಡೀಸೆಲ್ ಮಾದರಿಗಳನ್ನು ವಿತರಣೆ ಮಾಡುವ ಯೋಜನೆ ಹೊಂದಿದೆ. ಯೋಜನೆಯಂತೆ ಮೊದಲ ಹಂತವಾಗಿ ಪೆಟ್ರೋಲ್ ಮಾದರಿಯ ವಿತರಣೆ ಆರಂಭವಾಗಿದ್ದು, ಮೋಹೊನಿಶ್ ಗಾಂಧಿ ಎನ್ನುವವರು ಎಕ್ಸ್‌ಯುವಿ700 ಮಾದರಿಯ ಮೊದಲ ಗ್ರಾಹಕರಾಗಿದ್ದಾರೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಹೊಸ ಕಾರಿನ ಬೆಲೆಯು ಮೊದಲ 25 ಸಾವಿರ ಯುನಿಟ್ ಪಡೆಯುವ ಗ್ರಾಹಕರಿಗೆ ಒಂದು ಬೆಲೆಯಾದರೆ 25 ಸಾವಿರ ನಂತರ ಬುಕ್ಕಿಂಗ್ ನಂತರ ಕಾರು ಖರೀದಿಸಲು ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಬೆಲೆಯು ತುಸು ದುಬಾರಿಯಾಗಿರಲಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

50 ಸಾವಿರ ಯುನಿಟ್ ನಂತರ ಬುಕ್ಕಿಂಗ್ ದಾಖಲಿಸುತ್ತಿರುವ ಗ್ರಾಹಕರಿಗೆ ಹೊಸ ಕಾರು ಮತ್ತಷ್ಟು ದುಬಾರಿಯಾಗಿರುವ ಬಗ್ಗೆ ಕಂಪನಿಯೇ ಮಾಹಿತಿ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಎರಡು ಎಂಜಿನ್ ಆಯ್ಕೆಯೊಂದಿಗೆ ಬರೋಬ್ಬರಿ 21 ವೆರಿಯೆಂಟ್ ಹೊಂದಿರುವ ಹೊಸ ಕಾರಿನ ಮೊದಲ 25 ಸಾವಿರ ಯುನಿಟ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷಕ್ಕೆ ವಿತರಣೆಯಾಗಲಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

25 ಸಾವಿರ ಯುನಿಟ್ ನಂತರ ಹೊಸ ಕಾರು ವಿತರಣೆ ಪಡೆದುಕೊಳ್ಳಲಿರುವ ಗ್ರಾಹಕರಿಗೆ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.99 ಲಕ್ಷ ಅನ್ವಯವಾಗಲಿದ್ದು, 50 ಸಾವಿರ ಯುನಿಟ್ ನಂತರ ಕಾರು ಖರೀದಿಸುವ ಗ್ರಾಹಕರಿಗೆ ಇನ್ನಷ್ಟು ದುಬಾರಿಯಾಗಲಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಹೊಸ XUV700 ಎಸ್‌ಯುವಿ ಕಾರಿನ ವಿತರಣೆ ಆರಂಭಿಸಿದ Mahindra

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.

Most Read Articles

Kannada
English summary
New mahindra xuv700 suv deliveries commence details
Story first published: Monday, October 25, 2021, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X