Just In
- 11 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 11 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 13 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 14 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತಷ್ಟು ತಡವಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನ ಬಿಡುಗಡೆ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಈ 2021ರ ಮಾರುತಿ ಸುಜುಕಿ ಸೆಲೆರಿಯೊ ಕಾರು ಪ್ರಮುಖ ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಸೆಲೆರಿಯೊ ಹ್ಯಾಚ್ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಭಾರತದಲ್ಲಿ ಹಲವು ಬಾರಿ ರೋಡ್ ಟೆಸ್ಟ್ ನಡೆಸಿದೆ.
ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್ಬ್ಯಾಕ್ ಅನ್ನು 2021ರ ಏಪ್ರಿಲ್-ಮೇ ತಿಂಗಳುಗಳ ಅವಧಿಯ ನಡುವೆ ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ಕರೋನಾ ಸೋಂಕಿನ ಹೆಚ್ಚಳದಿಂದ ಈಗ ವಿಳಂಬವಾಗಿದೆ. ಈ ಹೊಸ ಸೆಲೆರಿಯೊ ಕಾರನ್ನು 2021ರ ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಆದರೆ ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 2021ರ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹರ್ಟೆಕ್ಟ್ ಪ್ಲಾಟ್ಫಾರ್ಮ್ ನಡಿಯಲ್ಲಿ ಇದನ್ನು ಅಭಿವೃದ್ದಿಪಡಿಸಲಾಗುತ್ತದೆ.
ಇನ್ನು 2021ರ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಎಂಜಿನ್ ಅನ್ನು ಬದಲಾಯಿಸಲಾಗಿದೆ. ಇದರಲ್ಲಿ ಹೊಸ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಇದರೊಂದಿಗೆ 1.0ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಬಹುದು. ಈ ಎಂಜಿನ್ 68 ಬಿಹೆಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.
ಈ ಮಾರುತಿ ಸುಜುಕಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ. ಮುಂಭಾಗದಲ್ಲಿ ಸಣ್ಣ ಗ್ರಿಲ್ ಮತ್ತು ಏರ್ ಡ್ಯಾಮ್, ಹ್ಯಾಲೊಜೆನ್ ಹೆಡ್ಲ್ಯಾಂಪ್ಗಳು, ಹೊಸ ಡೋರ್ ಹ್ಯಾಂಡಲ್ಗಳು, ನವೀಕರಿಸಿದ ಬಂಪರ್ ಮತ್ತು ಟ್ವೀಕ್ಡ್ ಟೈಲ್ಲ್ಯಾಂಪ್ಗಳನ್ನು ಒಳಗೊಂಡಿರುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
2021ರ ಸೆಲೆರಿಯೊ ಹ್ಯಾಚ್ಬ್ಯಾಕ್ ನಲ್ಲಿ 7.0-ಇಂಚಿನ ಸ್ಮಾರ್ಟ್ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಒಳಗೊಂಡಿರಬಹುದು.
ಇನ್ನು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಡ್ಯಾಶ್ಬೋರ್ಡ್, ಸ್ಟೀಯರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗುತ್ತದೆ. 2021ರ ಮಾರುತಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು ಹೆಚ್ಚಿನ ಪ್ರೀಮಿಯಂ ಫೀಚರ್ ಗಳನ್ನು ಹೊಂದಿರಬಹುದು.
ಈ ಸೆಲೆರಿಯೊ ಸ್ಟ್ಯಾಂಡರ್ಡ್ ಸೀಟ್ಬೆಲ್ಟ್ ಅಲರ್ಟ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡೆಲವೆರಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸರ್ಗಳು ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ ಅನ್ನು ಕೂಡ ಹೊಂದಿರುತ್ತದೆ. ಮಾರುತಿ ಸುಜುಕಿ ಸೆಲೆರಿಯೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.