ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಐದು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ. ಇದರಲ್ಲಿ ಹೊಸ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್, ವಿಟಾರಾ ಬ್ರೆಝಾ, ಬೆಲೆನೊ, ಎರ್ಟಿಗಾ ಮತ್ತು ಎಕ್ಸ್‌ಎಲ್6 ಎಂಪಿವಿ ಮಾದರಿಗಳು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಆಗಸ್ಟ್ 2019 ರಲ್ಲಿ ಬಿಡುಗಡೆಯಾದ ಮಾರುತಿ ಎಕ್ಸ್‌ಎಲ್ 6 ಎಂಪಿವಿ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ ಮತ್ತು 6 ಆಸನಗಳ ವಿನ್ಯಾಸದೊಂದಿಗೆ ಬರುತ್ತದೆ. ಫೆಬ್ರವರಿ 2020 ರಲ್ಲಿ ಸುಜುಕಿ ಕಂಪನಿಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಸುಜುಕಿ ಎಕ್ಸ್‌ಎಲ್7 ಎಂಬ 7-ಸೀಟರ್ ಮಾದರಿಯನ್ನು ಅನ್ನು ಪರಿಚಯಿಸಿತು. ಇದೀಗ ವರದಿಗಳ ಪ್ರಕಾರ, 2022ರ ಮಾರುತಿ ಎಕ್ಸ್‌ಎಲ್6 ಅನ್ನು ಮುಂದಿನ ವರ್ಷದ ಆರಂಭದಲ್ಲಿ 7-ಸೀಟರ್ ಸಂರಚನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಇಂಡೋನೇಷ್ಯಾದ ಮಾದರಿಯಂತೆಯೇ, ಇಂಡಿಯಾ-ಸ್ಪೆಕ್ ಮಾದರಿಗೂ ಮಾರುತಿ ಎಕ್ಸ್‌ಎಲ್7 ಎಂದು ಹೆಸರಿಡಬಹುದು.ಮಾರುತಿ ಎಕ್ಸ್‌ಎಲ್6 ಸ್ವಲ್ಪ ಉದ್ದ (5 ಎಂಎಂ) ಮತ್ತು ಎತ್ತರ (10 ಎಂಎಂ) ಹೆಚ್ಚಾಗಿರುತ್ತದೆ. ಹೊಸ ಮಾದರಿಯಯಲ್ಲಿ ಮಧ್ಯಮ ಸಾಲಿನ ಪ್ರಯಾಣಿಕರಿಗೆ ಬೆಂಚ್ ಸೀಟ್ ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಇನ್ನು ವಿನ್ಯಾಸ ಮತ್ತು ಸ್ಟೈಲಿಂಗ್ ವಿಷಯದಲ್ಲಿ, ಮಾರುತಿ ಎಕ್ಸ್‌ಎಲ್7 ಮಾದರಿಯು ಎಕ್ಸ್‌ಎಲ್6 ಅನ್ನು ಹೋಲುತ್ತದೆ ಎಕ್ಸ್‌ಎಲ್6 ಕಾರಿನಲ್ಲಿರುವ ಹೆಚ್ಚಿನ ಪೀಚರ್ಸ್ ಗಳನ್ನು ಎಕ್ಸ್‌ಎಲ್7 ಮಾದರಿಯು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

2022ರ ಮಾರುತಿ ಎಕ್ಸ್‌ಎಲ್6 7-ಸೀಟರುಗಳ ಮಾದರಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳೊಂದಿಗೆ ಸ್ವಲ್ಪ ಅಗಲವಾದ ಟೈರ್‌ಗಳೊಂದಿಗೆ ನೀಡಬಹುದು. ಇನ್ನು ಟೈಲ್‌ಗೇಟ್‌ನಲ್ಲಿರುವ ಕಾಂಟ್ರಾಸ್ಟ್ ಬ್ಲ್ಯಾಕ್ ರೂಫ್, ರಿಯರ್ ಸ್ಪಾಯ್ಲರ್ ಮತ್ತು ಎಕ್ಸ್‌ಎಲ್ 7 ಬ್ಯಾಡ್ಜ್ ಇದನ್ನು ಎಕ್ಸ್‌ಎಲ್6 ನಿಂದ ಮತ್ತಷ್ಟು ಪ್ರತ್ಯೇಕಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಇಂಡೋನೇಷ್ಯಾ-ಸ್ಪೆಕ್ ಎಕ್ಸ್‌ಎಲ್7 ಸ್ವಲ್ಪ ದೊಡ್ಡದಾದ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ರೇರ್ ಕ್ಯಾಮೆರಾ, ಐಆರ್‌ವಿಎಂ ಮತ್ತು ಬೆಂಝ್ ಮಾದರಿಯ ಮಧ್ಯಮ ಸಾಲು ದೀಟೂಗಳನ್ನು ಮಡಿಚಬಹುದಾದ ಆರ್ಮ್‌ಸ್ಟ್ರೆಸ್ಟ್ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಮಾರುತಿ ಎಕ್ಸ್‌ಎಲ್7 ಎಂಪಿವಿಯಲ್ಲಿ 803-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಮೂರನೇ ಮತ್ತು ಎರಡನೇ ಸಾಲಿನ ಮಡಿಸಿದ.550-ಲೀಟರ್ ಹೆಚ್ಚುವರಿ ಸ್ಪೇಸ್ ಲಭಿಸುತ್ತದೆ. ನವೀಕರಿಸಿದ ಎಂಪಿವಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳು ಮತ್ತು ವೈಶಿಷ್ಟ್ಯ ನವೀಕರಣಗಳಿಗೆ ಸಹ ಸಾಕ್ಷಿಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಇನ್ನು 2022ರ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿಯಲ್ಲಿ ಅದೇ 1.5 ಎಲ್ ಕೆ 15 ಬಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರುತ್ತದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಎಕ್ಸ್‌ಎಲ್6 7-ಸೀಟರ್ ಎಂಪಿವಿ

ಇದರೊಂದಿಗೆ 1.5 ಎಲ್ ಡೀಸೆಲ್ ಎಂಜಿನ್ ಅನ್ನು ಪರಿಚಯಿಸಬಹುದು ಎಂದು ವರದಿಗಳಾಗಿದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

Most Read Articles

Kannada
English summary
Maruti XL6 7-seater MPV India Launch Timeline Revealed. Read In Kannada.
Story first published: Monday, July 26, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X