ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಇಕ್ಯೂಬಿ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಬ್ರ್ಯಾಂಡ್ ತನ್ನ ಪ್ರಮುಖ ಎಲೆಕ್ಟ್ರಿಕ್ ಮಾದರಿಯಾದ ಇಕ್ಯೂಎಸ್ ಅನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಇಕ್ಯೂಬಿ ಎಸ್‍ಯುವಿಯನ್ನು ಅನಾವರಣಗೊಳಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಯು ಯುರೋಪಿಯನ್ ಮಾರುಕಟ್ಟೆಯಲ್ಲಿ ಆಡಿ ಕ್ಯೂ4 ಇ-ಟ್ರಾನ್ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಹೊಸ ಇಕ್ಯೂಬಿ ಎಸ್‍ಯುವಿಯನ್ನು ಹಂಗೇರಿಯದ ಕೆಕ್ಸ್‌ಕೆಮೆಟ್‌ನಲ್ಲಿ ತಯಾರಿಸಲಾಗಿದೆ. ಇದರ ಪೆಟ್ರೋಲ್ ಚಾಲಿತ ಜಿಎಲ್‌ಬಿ ಎಸ್‍ಯುವಿಯನ್ನು ಕೂಡ ಇಲ್ಲೇ ತಯಾರಿಸಲಾಗುತ್ತಿದೆ.

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ಇಕ್ಯೂಬಿ ಎಸ್‍ಯುವಿಯ ಟಾಪ್ ವೆರಿಯೆಂಟ್ ಇಕ್ಯೂಬಿ 350 4ಮ್ಯಾಟಿಕ್ ಅನ್ನು ಮೊದಲು ಬಿಡುಗಡೆ ಮಾಡಲಿದೆ . ನಂತರ 2022ರಲ್ಲಿ ಇಕ್ಯೂಬಿ 300 4ಮ್ಯಾಟಿಕ್ ಮತ್ತು ಇಕ್ಯೂಬಿ 250 ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಜ್ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯು ಮರ್ಸಿಡಿಸ್ ಜಿಎಲ್‌ಬಿ ಮಾದರಿಗೆ ಹೆಚ್ಚಾಗಿ ಹೋಲುತ್ತದೆ. ಈ ಎರಡನ್ನೂ ಪ್ರತ್ಯೇಕಿಸಲು ಕೆಲವು ವಿಶಿಷ್ಟವಾದ ಸಣ್ಣ ಬದಲಾವಣೆಗಳಿವೆ.

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ವಿಶಿಷ್ಟವಾದ ಬಿಟ್‌ಗಳಲ್ಲಿ ಸಂಪೂರ್ಣವಾಗಿ ಗ್ಲೋಷ್-ಗ್ರಿಲ್, ಹೊಸ ಬಂಪರ್‌ಗಳು, ಎರಡು ಹೆಡ್‌ಲ್ಯಾಂಪ್‌ಗಳನ್ನು ಕನೆಕ್ಟ್ ಮಾಡುವ ಎಲ್‌ಇಡಿ ಸ್ಟ್ರಿಪ್‌ಗಳು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಶಿಷ್ಟವಾದ ಗ್ರಾಫಿಕ್ಸ್, ಅಲ್ಯೂಮಿನಿಯಮ್ ಬಿಟ್‌ಗಳಿಂದ ಸುತ್ತುವರೆದ ಎಸಿ ವೆಂಟ್ಸ್ ಗಳಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಇಕ್ಯೂಬಿ 350 4ಮ್ಯಾಟಿಕ್ ಎಸ್‍ಯುವಿಯು ಎರಡು ಎಲೆಕ್ಟ್ರಿಕ್ ಮೋಟಾರ್ ಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಮೋಟರ್‌ಗಳು ಅಸಮಕಾಲಿಕ ಮತ್ತು ಸಿಂಕ್ರೊನಸ್ ಮೋಟರ್‌ಗಳಾಗಿವೆ, ಇವುಗಳನ್ನು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ಮೇಲೆ ಜೋಡಿಸಲಾಗಿದೆ. ಒಟ್ಟಾಗಿ ಇವುಗಳು 288 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತಾರೆ.

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಜ್ ಇಕ್ಯೂಬಿ 350 4ಮ್ಯಾಟಿಕ್‌ನಲ್ಲಿನ ಡಿಸಿ ಸೆಟಪ್‌ನಲ್ಲಿ ಗರಿಷ್ಠ 100 ಕಿ.ವ್ಯಾಟ್ ಮತ್ತು ಎಸಿ ಸೆಟಪ್‌ನಲ್ಲಿ 11 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಇಕ್ಯೂಬಿ 350 4ಮ್ಯಾಟಿಕ್ ಕೇವಲ 6.0 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಆದರೆ ಪವರ್ ಉತ್ಪಾದನೆಯನ್ನು ವಿಭಿನ್ನವಾಗಿ ಉತ್ಪಾದಿಸುವ ರೀತಿ ಟ್ಯೂನ್ ಮಾಡಲಾಗಿದೆ. ಇನ್ನು ಇಕ್ಯೂಬಿ 250 ವೆರಿಯೆಂಟ್ 188 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಮೋಟರ್ ಬಳಸಿ ಮತ್ತು ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಇಕ್ಯೂಎಸ್ ಮಾದರಿಗಿಂತ ಭಿನ್ನವಾಗಿ, ಈ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬೆಸ್ಪೋಕ್ ಇವಿ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿಲ್ಲ, ಬದಲಿಗೆ ಇದು ಮರ್ಸಿಡಿಸ್ ಬೆಂಜ್ ಜಿಎಲ್‌ಬಿಯ ಮಾರ್ಪಡಿಸಿದ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್

ಇದರ ಪರಿಣಾಮವಾಗಿ, ಬೂಟ್ ಸ್ಪೇಸ್ ಸುಮಾರು 75-ಲೀಟರ್‌ಗಳಷ್ಟು ಕಡಿಮೆಯಾಗಿದೆ. ಹೆಚ್ಚಿನ ಬೂಟ್ ಸ್ಪೇಸ್ ಅಗತ್ಯವಿದ್ದರೆ ಹಿಂಭಾಗದಲ್ಲಿ ಸೀಟುಗಳನ್ನು ಮಡಿಚಿದಾಗ 1710-ಲೀಟರ್‌ಗೆ ವಿಸ್ತರಿಸಬಹುದು. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mercedes-Benz EQB Electric SUV Revealed. Read In Kannada.
Story first published: Tuesday, April 20, 2021, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X