2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 2021ರ ಎಸ್-ಕ್ಲಾಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ಎಸ್-ಕ್ಲಾಸ್ ಕಾರಿನ ಅಧಿಕೃತ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಇದೇ ತಿಂಗಳ 17 ರಂದು ಬಾರತದಲ್ಲಿ ಬಿಡುಗಡೆಯಾಗಲಿದೆ. ಈ ಎಸ್-ಕ್ಲಾಸ್ ಕಾರನ್ನು ಸ್ಥಳೀಯವಾಗಿ ಜೋಡಿಸಲಾಗುವುದು ಆದರೆ ಆರಂಭಿಕ ಹಂತದಲ್ಲಿ ಇದರ ಯುನಿಟ್ ಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಬಹುದು. 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು 34 ಎಂಎಂ ಉದ್ದ, 51 ಎಂಎಂ ಅಗಲ ಮತ್ತು 12 ಎಂಎಂ ಎತ್ತರವನ್ನು ಹೊಂದಿದೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಐಷಾರಾಮಿ ಕಾರಿನ ವ್ಹೀಲ್ ಬೇಸ್ ಅನ್ನು ಕೂಡ ಹೆಚ್ಚಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಕ್ಯಾಬಿನ್ ಸ್ಪೇಸ್ ಇರುತ್ತದೆ. ಈ ಸೆಡಾನ್ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಈಗ ಹೊಸ ಡಿಜಿಟಲ್ ಲೈಟ್ ತಂತ್ರಜ್ಞಾನದೊಂದಿಗೆ ಪಡೆಯುತ್ತವೆ,

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಮತ್ತೊಂದು ದೊಡ್ಡ ಬದಲಾವಣೆಯೆಂದರೆ ಎಸ್-ಕ್ಲಾಸ್‌ನಲ್ಲಿ ಏರ್ ಫ್ಲೋ ಅತ್ಯುತ್ತಮವಾಗಿಸಲು ಹೊಸ ಫ್ಲಶ್-ಫಿಟ್ಟಿಂಗ್ ಅನ್ನು ನೀಡಿದೆ. ಇದರ ಇಂಟಿರಿಯರ್ ನಲ್ಲಿ ಹಲವಾರು ಐಷಾರಾಮಿ ಮತ್ತು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಕಾರಿನಲ್ಲಿ ಡಿಜಿಟಲ್ ಕನ್ಸೋಲ್ ಜೊತೆಗೆ ಸೆಂಟ್ರಲ್ 2.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಹೊಸ ಎಸ್-ಕ್ಲಾಸ್ ಕಾರಿನಲ್ಲಿ ಮೌಂಟಡ್ ಕಂಟ್ರೋಲ್ ನೊಂದಿಗೆ ಹೊಸ ಸ್ಟೀಯರಿಂಗ್ ವ್ಜೀಲ್ ಅನ್ನು ಅಳವಡಿಸಲಾಗಿದೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಬರ್ಮೆಸ್ಟರ್ ಹೈ-ಎಂಡ್ 4ಡಿ ಸೌಂಡ್ ಸಿಸ್ಟಂ, ಕ್ಯಾಬಿನ್ ಮೂಲಕ 263 ಕ್ಕೂ ಹೆಚ್ಚು ಆಪ್ಟಿಕ್ ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿರುವ ಆಂಬಿಯೆಂಟ್ ಲೈಟಿಂಗ್, ವಾಯ್ಸ್ ಕಮಾಂಡ್, ಮತ್ತು ಇನ್ನೂ ಹೆಚ್ಚಿನ ಪೀಚರ್ಸ್ ಗಳನ್ನು ಒಳಗೊಂಡಿವೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಇದರಲ್ಲಿ ಸುರಕ್ಷತೆಗಾಗಿ ಎರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ ಮತ್ತು ನೈಟ್ ವಿಷನ್ ಕ್ಯಾಮೆರಾವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮಾದರಿಯು ಭಾರತದಲ್ಲಿ ಬ್ರ್ಯಾಂಡ್ ನ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಡೀಸೆಲ್ 400ಡಿ 4 ಮ್ಯಾಟಿಕ್ ಮತ್ತು ಪೆಟ್ರೋಲ್ 450 4 ಮ್ಯಾಟಿಕ್ ಎಂಬ ಎರಡು ರೂಪಾಂತರಗಳನ್ನು ಹೊಂದಿರುತ್ತದೆ. ಇದರಲ್ಲಿ ಎಸ್ 400 ಡಿ ಭಾರತದ ಇತರ ಹೊಸ ಹೊಸ ಮರ್ಸಿಡಿಸ್‌ನಲ್ಲಿ ಬಳಸಲಾಗುವ ಪರಿಚಿತ ಒಎಂ 656 ಇನ್-ಲೈನ್-ಆರು ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಎಂಜಿನ್ 326 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಸ್ 450 ಪೆಟ್ರೋಲ್ ಸಹ ಇನ್-ಲೈನ್-ಆರು ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 362 ಬಿಹೆಚ್‌ಪಿ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಎರಡೂ ರೂಪಾಂತರಗಳಲ್ಲಿ ಆಲ್-ವ್ಹೀಲ್ ಡ್ರೈವ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಒಟ್ಟಿನಲ್ಲಿ ಈ ಬಹುನಿರೀಕ್ಷಿತ ಐಷಾರಾಮಿ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಇದೇ ತಿಂಗಳ 17 ರಂದು ಬಾರತದಲ್ಲಿ ಬಿಡುಗಡೆಯಾಗಲಿದೆ

Most Read Articles

Kannada
English summary
New-Generation Mercedes-Benz S-Class India Launch Date Confirmed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X