2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಎಂಜಿ ಮೋಟಾರ್ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಮೊದಲ ಬಾರಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

2018ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಹೆಕ್ಟರ್ ಮಾದರಿಯು ಈ ವರ್ಷದ ಆರಂಭದಲ್ಲಿ ಫೇಸ್‌ಲಿಫ್ಟ್ ಮಾದರಿಯನ್ನು ಪಡೆದುಕೊಂಡಿದ್ದು, ಹೊಸ ಎಸ್‌ಯುವಿ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಪ್ಯಾಕೇಜ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದೀಗ ಹೊಸ ಕಾರಿಗಾಗಿ ಇದೀಗ ಮತ್ತೊಂದು ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆಗೊಂಡಿದ್ದು, ಸುಮಾರು ರೂ.40 ಸಾವಿರ ಮೌಲ್ಯದ ಹೆಚ್ಚುವರಿ ಫೀಚರ್ಸ್ ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ಹೊಸ ಕಾರಿನ ಬಲಿಷ್ಠತೆ ಹೆಚ್ಚಿಸಲು ಪೂರಕವಾಗಿವೆ.

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಎಂಜಿ ಕಂಪನಿಯು ಹೆಕ್ಟರ್ ಫೇಸ್‌ಲಿಫ್ಟ್‌ ಮಾದರಿಯ ಹೊರಭಾಗದಲ್ಲಿ ಮತ್ತು ಇಂಟಿರಿಯರ್‌ನಲ್ಲಿ ಹಲವಾರು ಫೀಚರ್ಸ್ ಹಾಗೂ ಎಕ್ವಿಪ್‌ಮೆಂಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದರೂ ಆಕ್ಸೆಸರಿಸ್ ಫೀಚರ್ಸ್‌‌ಗಳು ಹೊಸ ಕಾರಿನ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸ್ಟ್ಯಾಂಡರ್ಡ್ ಫೀಚರ್ಸ್‌ಗಳ ಬಾಳ್ವಿಕೆಯನ್ನು ಹೆಚ್ಚಿಸಲಿವೆ.

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಹೆಕ್ಟರ್ ಫೇಸ್‌ಲಿಫ್ಟ್ ಕಾರು ಮಾದರಿಗಾಗಿ ನೀಡಲಾಗಿರುವ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ರೂ.40 ಸಾವಿರ ಮೌಲ್ಯದಲ್ಲಿ ಫ್ರಂಟ್ ಲೈನರ್, ಲೋವರ್ ಸರೌಂಡ್ ಫ್ರಂಟ್ ಕ್ರೋಮ್, ಬಂಪರ್ ಕಾರ್ನರ್ ಪ್ರೊಟೆಕ್ಟರ್, ಹುಡ್ ಸ್ಕೂಪ್, ಮೊರಿಸ್ ಗ್ಯಾರೇಜ್ ಬ್ಯಾಡ್ಜ್, ವೀಂಡ್ ಡಿಫ್ಲೆಕ್ಟರ್ ಕ್ರೊಮ್ ಸೌಲಭ್ಯಗಳಿವೆ.

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಜೊತೆಗೆ ಸೈಡ್ ಸ್ಟೆಪ್ ಬೋರ್ಡ್, ಡೋರ್ ಪ್ರೊಟೆಕ್ಟರ್, ರಿಯರ್ ಮೊರಿಸ್ ಗ್ಯಾರೇಜ್ ಬ್ಯಾಡ್ಜ್, ರಿಯರ್ ಬಂಪರ್ ಕಾರ್ನರ್ ಪ್ರೊಟೆಕ್ಟರ್, ಕ್ರೋಮ್ ಟೈಲ್ ಗೇಟ್, ರಿಯರ್ ಎಂಟ್ರಿ ಸಿಲ್ ಪ್ಲೇಟ್ ಸೌಲಭ್ಯಗಳಿದ್ದು, ಹೊಸ ಕಾರಿನಲ್ಲಿ ಕಂಪನಿಯು ಸಹ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಡಿ ಜೋಡಣೆ ಮಾಡಿದೆ.

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ ಎಸ್‌ಯುವಿಯು ಒಟ್ಟು ನಾಲ್ಕು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಹೊಸ ಕಾರು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.86 ಲಕ್ಷ ಬೆಲೆ ಹೊಂದಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಹೊಸ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದ್ದು, ಕಂಪನಿಯು ಹೊಸ ಕಾರಿನಲ್ಲಿ ಮೊದಲ ಬಾರಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಯಲ್ಲಿ ಸದ್ಯ ಎಂಜಿ ಮೋಟಾರ್ ಕಂಪನಿಯು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಟರ್ಬೊ ಪೆಟ್ರೋಲ್ ಮಾದರಿಗಳಿಗಾಗಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಕಾರುಗಳಲ್ಲಿ ಕಂಪನಿಯು ಇದೀಗ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇಕೋ ಮತ್ತು ಸ್ಪೋಟ್ ಮೋಡ್‌ಗಳನ್ನು ಹೊಸದಾಗಿ ಪರಿಚಯಿಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2021ರ ಎಂಜಿ ಹೆಕ್ಟರ್ ಕಾರು ಮಾದರಿಯ ಆಕ್ಸೆಸರಿಸ್ ಬಿಡುಗಡೆ

ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ಹೈ ಎಂಡ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆರಂಭಿಕ ಪೆಟ್ರೋಲ್ ಮಾದರಿಗಳಿಗಾಗಿ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

Most Read Articles

Kannada
English summary
2021 MG Hector Genuine Accessories Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X