ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ತನ್ನ ಮಾರ್ವೆಲ್ ಎಕ್ಸ್ನ ರೀಬ್ಯಾಡ್ಜ್ ಮಾಡಲಾದ ಮಾದರಿಯನ್ನು ಭಾರತಕ್ಕೆ ತರಲು ಯೋಜಿಸುತ್ತಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾರತದಲ್ಲಿ ಅನಾವರಣಗೊಳಿಸಲಾಯಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಈ ಹೊಸ ಎಂಜಿ ಮಾರ್ವೆಲ್ ಆರ್ ಅನ್ನು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿತು. ಕ್ರ್ಯಾಶ್ ಟೆಸ್ಟ್‌ನಲ್ಲಿ ಎಂಜಿ ಮಾರ್ವೆಲ್ ಎಲೆಕ್ಟ್ರಿಕ್ ಎಸ್‍ಯುವಿಯು ನಾಲ್ಕು-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯಿತು. ಯುರೋ ಎನ್‌ಸಿಎಪಿಯ ಕ್ರ್ಯಾಶ್ ಟೆಸ್ಟ್‌ನಲ್ಲಿ, ಎಂಜಿ ಮಾರ್ವೆಲ್ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದ ಆಫ್‌ಸೆಟ್ ಟೆಸ್ಟ್‌ ಸಮಯದಲ್ಲಿ ಮಾರ್ವೆಲ್ ಆರ್‌ನ ಪ್ರಯಾಣಿಕ ವಿಭಾಗವು ಸ್ಥಿರವಾಗಿರುವುದನ್ನು ಗಮನಿಸಲಾಗಿದೆ. ಎಸ್‍ಯುವಿಯ ಚಾಲಕ ಮತ್ತು ಪ್ರಯಾಣಿಕ ಇಬ್ಬರ ಮೊಣಕಾಲುಗಳು ಮತ್ತು ತೊಡೆಗಳ ಯೋಗ್ಯ ರಕ್ಷಣೆಯನ್ನು ಪ್ರದರ್ಶಿಸಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಆದರೆ ಚಾಲಕನ ಎದೆಯ ರಕ್ಷಣೆಯನ್ನು ಕನಿಷ್ಠ ಎಂದು ರೇಟ್ ಮಾಡಲಾಗಿದೆ. ಹೆಚ್ಚುವರಿಯಾಗಿ, ಡ್ಯಾಶ್‌ಬೋರ್ಡ್‌ನ ರಚನೆಯು ವಿಭಿನ್ನ ಗಾತ್ರದ ಪ್ರಯಾಣಿಕರಿಗೆ ಗಾಯದ ಅಪಾಯವನ್ನು ಉಂಟುಮಾಡಬಹುದು ಎಂದು ಸಹ ಉಲ್ಲೇಖಿಸಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಪೂರ್ಣ-ಅಗಲದ ಕಟ್ಟುನಿಟ್ಟಿನ ತಡೆಗೋಡೆ ಪರೀಕ್ಷೆಯಲ್ಲಿ, ಮಾರ್ವೆಲ್ ಆರ್ ಪ್ರಯಾಣಿಕರ ಎಲ್ಲಾ ನಿರ್ಣಾಯಕ ದೇಹದ ಭಾಗಗಳಿಗೆ ಸಾಕಷ್ಟು ಅಥವಾ ಉತ್ತಮ ಪ್ರಮಾಣದ ರಕ್ಷಣೆಯನ್ನು ಒದಗಿಸಿದೆ ಎಂದು ಯುರೋ ಎನ್‌ಸಿಎಪಿ ವರದಿಗಳು ಹೇಳಿವೆ. ಹಿಂಭಾಗದ ಪ್ರಯಾಣಿಕರ ಸೊಂಟದ ಭಾಗವು ಇತರರಿಗಿಂತ ಸ್ವಲ್ಪ ಹೆಚ್ಚು ಗಾಯಗೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಇದಲ್ಲದೆ ಎಸ್‍ಯುವಿ ಸೈಡ್ ಬ್ಯಾರಿಯರ್ ಕ್ರ್ಯಾಶ್ ಪರೀಕ್ಷೆಯಲ್ಲಿ ಲಭ್ಯವಿರುವ ಗರಿಷ್ಠ ಅಂಕಗಳನ್ನು ಗಳಿಸಿತು, ಈ ಪರೀಕ್ಷೆಯಲ್ಲಿ ಎಲ್ಲಾ ನಿರ್ಣಾಯಕ ದೇಹದ ಪ್ರದೇಶಗಳ ರಕ್ಷಣೆಯನ್ನು ಉತ್ತಮ ಎಂದು ರೇಟ್ ಮಾಡಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ರೋವೆ ಮಾರ್ವೆಲ್ ಆರ್ ಸುಧಾರಿತ ಇಕಾಲ್ ಸಿಸ್ಟಂ ಅನ್ನು ಹೊಂದಿದ್ದು, ವಾಹನವು ಡಿಕ್ಕಿ ಹೊಡೆದರೆ ತುರ್ತು ಸೇವೆಗಳನ್ನು ಎಚ್ಚರಿಸುತ್ತದೆ. ಇದು ಆಕ್ಟಿವ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು ಅಪಘಾತದ ಸಂದರ್ಭದಲ್ಲಿ ಹೆಚ್ಚಿನ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಮಾರ್ವೆಲ್ ಆರ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳು ಆರು ಹೈ-ವೋಲ್ಟೇಜ್ ಸರ್ಕ್ಯೂಟ್ ಸುರಕ್ಷತಾ ನಿರ್ವಹಣಾ ತಂತ್ರಗಳು ಮತ್ತು ಉತಮ ರಕ್ಷಣಾ ಮಟ್ಟವನ್ನು ಹೊಂದಿರುವ IP67 ಬ್ಯಾಟರಿಯನ್ನು ಒಳಗೊಂಡಿವೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ವಿಸ್ತಾರವಾದ 19.4-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಮತ್ತು 12.3-ಇಂಚಿನ ಡಿಜಿಟಲ್ ಡಿಸ್ ಪ್ಲೇಯಂತಹ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗುತ್ತದೆ ಮತ್ತು ಲೈವ್ ಟ್ರಾಫಿಕ್ ಮಾಹಿತಿ, ಕ್ಲೈಮೇಂಟ್ ಕಂಟ್ರೋಲ್ ಮತ್ತು ಅಮೆಜಾನ್ ಮ್ಯೂಸಿಕ್ ಹೊಂದಾಣಿಕೆ ಸೇರಿದಂತೆ ಇತರ ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಹೆಚ್ಚುವರಿಯಾಗಿ, ಇದು ಸುಧಾರಿತ ಡ್ರೈವಿಂಗ್ ಅಸಿಸ್ಟ್ ಸೂಟ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪ್ರೈವೆಸಿ ಗ್ಲಾಸ್, ಪನರೋಮಿಕ್ ಸನ್‌ರೂಫ್, ಪಾರ್ಟ್-ಲೆದರ್ ಅಪ್ಹೋಲ್‌ಸ್ಟರಿ ಮತ್ತು ಆರು-ಮಾರ್ಗದ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಸಹ ಪಡೆಯುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಪವರ್‌ಟ್ರೇನ್‌ಗಾಗಿ, ಮಾರ್ವೆಲ್ ಆರ್ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ಮೇಲೆ ಅಳವಡಿಸಲಾಗಿದೆ. ಎಸ್‍ಯುವಿ ಪ್ರಸ್ತುತ ಚೀನೀ ಮಾರುಕಟ್ಟೆಯಲ್ಲಿ ಎಡಬ್ಲ್ಯುಡಿ ಮತ್ತು 2ಡಬ್ಲ್ಯುಡಿ ಸಂರಚನೆಯ ಆಯ್ಕೆಗಳೊಂದಿಗೆ ಲಭ್ಯವಿದೆ.

ಆಲ್-ವೀಲ್-ಡ್ರೈವ್ ಮಾದರಿಯು 297 ಬಿಹೆಚ್‍ಪಿ ಪವರ್ ಮತ್ತು 665 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 2ಡಬ್ಲ್ಯುಡಿ ಮಾದರಿಯು 183 ಬಿಹೆಚ್‍ಪಿ ಪವರ್ ಮತ್ತು 410 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಜಿ ಮಾರ್ವೆಲ್ ಆರ್ ಎಲೆಕ್ಟ್ರಿಕ್ ಎಸ್‍ಯುವಿಯು 500 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಡಿಸಿ ಫಾಸ್ಟ್ ಚಾರ್ಜರ್‌ನೊಂದಿಗೆ ಕೇವಲ 40 ನಿಮಿಷಗಳಲ್ಲಿ ಎಸ್‍ಯುವಿಯು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದಾದ ವೇಗದ ಚಾರ್ಜಿಂಗ್ ಅನ್ನು ಇದು ಬೆಂಬಲಿಸುತ್ತದೆ ಎಂಬ ಅಂಶವನ್ನು ಪರಿಗಣಿಸಿ ಇದು ಇನ್ನಷ್ಟು ಪ್ರಭಾವಶಾಲಿಯಾಗಿದೆ. ಇನ್ನು ಈ ಮಾರ್ವೆಲ್ ಆರ್ ಕೇವಲ ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯು 180 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಎಲೆಕ್ಟ್ರಿಕ್ ಕಾರು

ಎಂಜಿ ಮಾರ್ವೆಲ್ ಆರ್ ಎಲೆಕ್ಟ್ರಿಕ್ ಭಾರತದಲ್ಲಿ ಬಿಡುಗಡೆಗೊಳಿಸುವ ಅವದಿಯ ಬಗ್ಗೆ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಉತ್ತಮವಾಗಿ ಮಾರಾಟವಾಗುವುದರಿಂದ ಈ ಎಸ್‍ಯುವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Most Read Articles

Kannada
English summary
New mg marvel r pure ev suv gets 4 star safety rating in euro ncap details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X