8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಇತ್ತೀಚೆಗೆ ಹೊಸ ಕಾರುಗಳನ್ನು ಖರೀದಿಸ ಬಯಸುವ ಗ್ರಾಹಕರು ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ ಕಾರುಗಳ ಬದಲಿಗೆ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಮಾರುತಿ ಸುಜುಕಿ ಇಗ್ನಿಸ್, ರೆನಾಲ್ಟ್ ಕ್ವಿಡ್, ಮಾರುತಿ ಸುಜುಕಿ ಎಸ್ ಪ್ರೆಸ್ಸೊ ಸೇರಿದಂತೆ ಹಲವು ಕಾರುಗಳು ಎಂಟ್ರಿ ಲೆವೆಲ್ ಎಸ್‌ಯುವಿ ಸೆಗ್'ಮೆಂಟಿನಲ್ಲಿ ಮಾರಾಟವಾಗುತ್ತವೆ. ಮುಂಬರುವ ದಿನಗಳಲ್ಲಿ ಹಲವು ಹೊಸ ಎಸ್‌ಯುವಿಗಳು ಈ ಸೆಗ್'ಮೆಂಟಿನಲ್ಲಿ ಬಿಡುಗಡೆಯಾಗಲಿವೆ. ಅವುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ:

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಟಾಟಾ ಹೆಚ್‌ಬಿಎಕ್ಸ್

ಟಾಟಾ ಮೋಟಾರ್ಸ್ 2021ರ ಮೂರನೇ ತ್ರೈಮಾಸಿಕದಲ್ಲಿ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಯ ಉತ್ಪಾದನಾ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

3,840 ಎಂಎಂ ಉದ್ದ, 1822 ಎಂಎಂ ಅಗಲ, 1635 ಎಂಎಂ ಎತ್ತರ ಮತ್ತು 2450 ಎಂಎಂ ವ್ಹೀಲ್ ಬೇಸ್ ಹೊಂದಿರುವ ಈ ಎಸ್‌ಯುವಿಯು ಮಾರುತಿ ಸುಜುಕಿ ಇಗ್ನಿಸ್ ಎಸ್‌ಯುವಿಗೆ ಪೈಪೋಟಿ ನೀಡಲಿದೆ.

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಈ ಎಂಟ್ರಿ ಲೆವೆಲ್ ಎಸ್‌ಯುವಿಯಲ್ಲಿ ಟಿಯಾಗೊ ಹಾಗೂ ಆಲ್ಟ್ರೋಜ್ ಕಾರುಗಳಲ್ಲಿರುವಂತಹ ಹೊಸ 1.2 ಲೀಟರ್ ಮೂರು ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 86 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಈ ಎಸ್‌ಯುವಿಯು 100 ಬಿಹೆಚ್‌ಪಿ ಪವರ್ ಉತ್ಪಾದಿಸುವ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹ ಹೊಂದಿರಲಿದೆ. ಟ್ರಾನ್ಸ್'ಮಿಷನ್ ಆಯ್ಕೆಗಳಲ್ಲಿ ಐದು ಸ್ಪೀಡ್ ಮ್ಯಾನುವಲ್ ಹಾಗೂ ಐದು ಸ್ಪೀಡ್ ಎಎಂಟಿ ಸೇರಿರಲಿವೆ.

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಹ್ಯುಂಡೈ ಎಎಕ್ಸ್ 1

ಹ್ಯುಂಡೈ ಕಂಪನಿಯು ಎಎಕ್ಸ್ 1 ಎಂಬ ಕೋಡ್ ನೇಮ್ ಚಿಕ್ಕ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ದಕ್ಷಿಣ ಕೊರಿಯಾದಲ್ಲಿ ಪರೀಕ್ಷಿಸುತ್ತಿದೆ. ಈ ಹೊಸ ಎಸ್‌ಯುವಿಯು ಹೊಸ ಗ್ರ್ಯಾಂಡ್ ಐ 10 ನಿಯೋಸ್ ಪ್ಲಾಟ್‌ಫಾರಂ ಅನ್ನು ಆಧರಿಸಿದ್ದು, ಸ್ಯಾಂಟ್ರೊ ಜೊತೆಗೆ ಹ್ಯುಂಡೈ ತಂಡದಲ್ಲಿ ಸ್ಥಾನ ಪಡೆಯಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಹ್ಯುಂಡೈ ಕಂಪನಿಯ ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಗ್ನಿಸ್ ಹಾಗೂ ಟಾಟಾ ಹೆಚ್‌ಬಿಎಕ್ಸ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ. ಈ ಎಸ್‌ಯುವಿಯ ವಿನ್ಯಾಸವು ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಫೂರ್ತಿ ಪಡೆದಿದೆ.

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಈ ಎಸ್‌ಯುವಿಯಲ್ಲಿರುವ 1.2-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಹಾಗೂ 114 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಾನ್ಸ್'ಮಿಷನ್ ಆಯ್ಕೆಗಳಿಗಾಗಿ ಐದು ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್‌ಬಾಕ್ಸ್'ಗಳಿರಲಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಸಿಟ್ರನ್ ಸಿ 21

ಸಿಟ್ರನ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2021ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸಲಿದೆ. ಸಿ 21 ಕೋಡ್ ನೇಮ್ ಹೊಂದಿರುವ ಹೊಸ ಮೈಕ್ರೋ ಎಸ್‌ಯುವಿಯು ರೆನಾಲ್ಟ್ ಕಿಗರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಈ ಎಸ್‌ಯುವಿಯು ಪುಶೊ 208ನ ಕಾಮನ್ ಮಾಡ್ಯುಲರ್ ಪ್ಲಾಟ್‌ಫಾರಂನ ಸರಳೀಕೃತ ಆವೃತ್ತಿಯನ್ನು ಆಧರಿಸಿದೆ. ಈ ಮೈಕ್ರೋ ಎಸ್‌ಯುವಿಯನ್ನು ಚೆನ್ನೈನ ಸಿಕೆ ಬಿರ್ಲಾ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು. ಸಿ 21 ಎಸ್‌ಯುವಿಯಲ್ಲಿ ಅಳವಡಿಸಿರುವ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 99 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಮಹೀಂದ್ರಾ ಎಕ್ಸ್‌ಯುವಿ 100

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಭಾರತದಲ್ಲಿ ಕೆಯುವಿ 100 ಸ್ಥಾನದಲ್ಲಿ ಎಕ್ಸ್‌ಯು‌ವಿ 100 ಅನ್ನು ಬಿಡುಗಡೆಗೊಳಿಸಲಿದೆ. ಈ ಎಸ್‌ಯುವಿಯು ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಈ ಎಸ್‌ಯುವಿಯು ಮಾರುತಿ ಸುಜುಕಿ ಇಗ್ನಿಸ್ ಹಾಗೂ ಟಾಟಾ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು

ಈ ಎಸ್‌ಯುವಿಯು ಹೊಸ ಮಾದರಿ ಕೆಯುವಿ 100ನ ಅಪ್'ಡೇಟೆಡ್ ಆವೃತ್ತಿಯಾಗಿರುವ ಸಾಧ್ಯತೆಗಳಿವೆ. ಈ ಎಸ್‌ಯುವಿಯಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
New micro SUVs to be sold in India under Rs.8 lakhs. Read in Kannada.
Story first published: Saturday, April 17, 2021, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X