ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಅಮೆರಿಕಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಪೋರ್ಡ್ ಹಲವಾರು ಜನಪ್ರಿಯ ಎಸ್‍ಯುವಿಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೋರ್ಡ್ ಎಸ್‍ಯುವಿಗಳು ಭರ್ಜರಿ ಬೇಡಿಕೆಯೊಂದಿಗೆ ಉತ್ತಮವಾಗಿ ಮಾರಾಟವಾಗುತ್ತಿವೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಜೀಪ್ ಬ್ರ್ಯಾಂಡ್ ಬಳಿಕ ಫೋರ್ಡ್ ಕೂಡ ಹಲವು ಜನಪ್ರಿಯ ಆಫ್-ರೋಡ್ ಎಸ್‍ಯುವಿಗಳನ್ನು ಹೊಂದಿವೆ. ಇದೀಗ ಫೋರ್ಡ್ ಚೀನಾ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ಜಾಗತಿಕ ಮಾಟದ ದೈತ್ಯ ಕಂಪನಿಯಾದ ಪೋರ್ಡ್ ಚೀನಾ ಮಾರುಕಟ್ಟೆಯಲ್ಲಿ ಸ್ಥಳೀಯ ಕಂಪನಿಯ ಜೊತೆ ಕೈಜೋಡಿಸಿ ತನ್ನ ಹೊಸ ಕಾರುಗಳನ್ನು ತಯಾರಿಸುತ್ತಿದೆ. ಚೀನಾದಲ್ಲಿ ಸ್ಥಳೀಯವಾಗಿ ಈ ಎರಡು ಕಂಪನಿಗಳು ಜಂಟಿಯಾಗಿ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಇತರ ಕಂಪನಿಗಳು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವಲ್ಲಿ ಹೆಚ್ಚಿನ ಹೂಡಿಕೆ ಮಾಡುವಾಗ ಫೋರ್ಡ್ ಇತ್ತೀಚೆಗೆ ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದೆ. ಪೋರ್ಡ್ ಚೀನಾದಲ್ಲಿ ಬ್ಲೂ ಓವಲ್ ಈಕ್ವೇಟರ್ ಎಂದು ಕರೆಯಲ್ಪಡುವ ಮೂರು-ಸಾಲಿನ 7-ಸೀಟರ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಫೋರ್ಡ್ ಈಕ್ವೇಟರ್ ಎಸ್‍ಯುವಿಯು 4,905 ಮಿ.ಮೀ ಉದ್ದ, 1,930 ಮಿ.ಮೀ ಅಗಲ ಮತ್ತು 1,755 ಮಿ.ಮೀ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ 2,865 ಮಿ.ಮೀ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಈ ಎಸ್‍ಯುವಿಯು ಎಂಡೀವರ್ ಮಾದರಿಗಿಂತ ದೊಡ್ಡದಾಗಿದೆ. ಆದರೆ ಎಕ್ಸ್‌ಪ್ಲೋರರ್ ಎಸ್‍ಯುವಿಗಿಂತ ಸ್ವಲ್ಪ ಚಿಕ್ಕದಾಗಿದೆ. ಈ ಮಾದರಿಯು ಚೀನಾ ಮಾರುಕಟ್ಟೆಯಲ್ಲಿ ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಫೋರ್ಡ್ ಈಕ್ವೇಟರ್ ಎಸ್‍ಯುವಿಯು ದೊಡ್ಡ ಯು-ಆಕಾರದ ಬ್ಲ್ಯಾಕ್ ಮುಂಭಾಗದ ಗ್ರಿಲ್, ಬೂಮರಾಂಗ್ ಆಕಾರದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ನೊಂದಿಗೆ ವಿಭಜಿತ ಎಲ್ಇಡಿ ಹೆಡ್ಲ್ಯಾಂಪ್ ಕ್ಲಸ್ಟರ್, ಬಂಪರ್ ನಲ್ಲಿ ಅಳವಡಿಸಲಾದ ಟ್ರೈ-ಬೀಮ್ ಹೆಡ್ ಲ್ಯಾಂಪ್, ಲೋ ಏರ್ ಟೆಕ್ ಒಳಗೊಂಡಿದೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಇನ್ನು ಈ ಎಸ್‍ಯುವಿಯು ಸ್ಕಿಡ್ ಪ್ಲೇಟ್ ಅಪ್ ಫ್ರಂಟ್ ಮತ್ತು ರಿಯರ್, ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳು, ಕ್ರೋಮ್ಡ್ ವಿಂಡೋ ಲೈನ್, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಇತ್ಯಾದಿ ಫೀಚರ್ ಗಳನ್ನು ಹೊಂದಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಇನ್ನು 12.3-ಇಂಚಿನ ಡಿಸ್ ಪೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಇದರ ಒಳಭಾಗ ಡ್ಯುಯಲ್-ಟೋನ್ ಥೀಮ್ ನೊಂದಿಗೆ ಐಷಾರಾಮಿ ಲುಕ್ ಅನ್ನು ಹೊಂದಿದೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಈಕ್ವೇಟರ್ ನಲ್ಲಿ ಡ್ಯುಯಲ್-ಪೇನ್ ಸನ್‌ರೂಫ್, ಮಧ್ಯದ ಸಾಲಿಗೆ ವೈಯಕ್ತಿಕ ಆರ್ಮ್‌ಸ್ಟ್ರೆಸ್ಟ್, ಕ್ವಿಲ್ಟೆಡ್ ಡ್ಯಾಶ್ ಸ್ಟಿಚಿಂಗ್, ಲೆದರ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಇನ್ನು ಹೊಸ ಫೋರ್ಡ್ ಈಕ್ವೇಟರ್ ಎಸ್‍ಯುವಿಯಲ್ಲಿ 2.0-ಲೀಟರ್ ನಾಲ್ಕು-ಪಾಟ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 221 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಡೀವರ್ ಮಾದರಿಗಿಂತ ದೊಡ್ಡದಾದ ಹೊಸ 7-ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ಫೋರ್ಡ್

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರಲ್ಲಿ ಆಲ್-ವ್ಹೀಲ್-ಡ್ರೈವ್ ಕಾನ್ಫಿಗರೇಶನ್ ಅನ್ನು ಆಯ್ಕೆಯಾಗಿ ಪಡೆಯಬಹುದು.

Most Read Articles

Kannada
Read more on ಫೋರ್ಡ್ ford
English summary
Seven-Seater Ford Equator SUV Unveiled. Read In Kannada.
Story first published: Friday, March 19, 2021, 21:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X