ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಜನಪ್ರಿಯ ವಾಹನ ತಯಾರಕ ಕಂಪನಿಯಾದ Skoda ತನ್ನ ಬಹುನಿರೀಕ್ಷಿತ 2021ರ Kodiaq facelift ಎಸ್‍ಯುವಿಯನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಹೊಸ Skoda Kodiaq facelift ಎಸ್‍ಯುವಿಯು ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

Skoda ಕಂಪನಿಯು ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇದೀಗ ಈ ಹೊಸ Kodiaq facelift ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಈ ಎಸ್‍ಯುವಿಯ ಉತ್ಪಾದನೆಯನ್ನು ಆರಂಭಿಸಲಿದೆ. ಆದರೆ ವಿತರಣೆಗಯು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಹೊಸ Skoda Kodiaq facelift ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಪರಿಷ್ಕೃತ ಗ್ರಿಲ್ ಅನ್ನು ಹೊಂದಿದೆ. ಇದು ಹೆಚ್ಚು ನೇರವಾದ ಪ್ರೊಫೈಲ್ ನೀಡುತ್ತದೆ. ಗ್ರಿಲ್ ಅನ್ನು ಸ್ಲಿಮ್ಮರ್ ಹೆಡ್‌ಲ್ಯಾಂಪ್ ಯುನಿಟ್ ನಿಂದ ಸುತ್ತುವರಿಯಲಾಗುತ್ತದೆ. ಈ ಯುನಿಟ್ ಅಡಿಯಲ್ಲಿ ಪ್ರತ್ಯೇಕ ಎಲ್ಇಡಿ ಮಾಡ್ಯೂಲ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಹೊಸ ಹೆಡ್‌ಲ್ಯಾಂಪ್ ಸೆಟಪ್ ಹೊಸ ಫೋರ್-ಹೈಡ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿ ಕ್ರಿಸ್ಟಲ್ ಎಫೆಕ್ಟ್ ಹೊಂದಿರುವ ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಕೂಡ ಪಡೆಯುತ್ತದೆ.ಇನ್ನು ಈ ಹೊಸ Kodiaq facelift ಎಸ್‍ಯುವಿಯು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಹೊಸ ಈ ಎಸ್‍ಯುವಿಯಲ್ಲಿ 20 ಇಂಚಿನ ಹೊಸ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಗ್ಲೋಸ್ ಬ್ಲ್ಯಾಕ್‌ನಲ್ಲಿ ಹೊಸ ರಿಯರ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ, ಇದು ಬ್ರೇಕ್ ಲೈಟ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. 2021ರ Kodiaq ಮಾದರಿಯ ಕ್ಯಾಬಿನ್ ಒಳಗೆ ಹೊಸ ಅಲಂಕಾರಿಕ ಸ್ಟ್ರೀಪ್ ಗಳನ್ನು ಪಡೆಯುತ್ತದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಇದರ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಸ್ಟ್ರೀಚಿಂಗ್ ಅನ್ನು ಕೂಡ ಪಡೆಯುತ್ತದೆ. Kodiaq ಮಾದರಿಯು 7-ಸೀಟರ್ ಮಾದರಿಯಾಗಿದೆ. ಇದರಲ್ಲಿ ವೆಂಟಿಲೆಟಡ್ ಸೀಟುಗಳು ಸೇರಿದಂತೆ ಮಸಾಜ್ ಫಂಕ್ಷನ್ ಅನ್ನು ಹೊಂದಿದೆ. ಇದು ದೂರ ಪ್ರಯಾಣಗಳಲ್ಲಿ ಮಾಡುವಾಗ ಹೆಚ್ಚು ಸಹಕಾರಿಯಾಗುವ ಕೂಲ್ ಫೀಚರ್ ಇದಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಮೊದಲ ಬಾರಿಗೆ Kodiaq ಮಲ್ಟಿ-ವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆಯ ಜೊತೆ ಮಸಾಜ್ ಫಂಕ್ಷನ್ ಪಡೆದುಕೊಂಡಿದೆ. ಕ್ಯಾಂಟನ್ ಸೌಂಡ್ ಸಿಸ್ಟಂ ಮತ್ತು ಈಗ ಹತ್ತು ಸ್ಪೀಕರ್‌ಗಳನ್ನು ನೀಡುತ್ತದೆ. ಈ ಎಸ್‍ಯುವಿಯಲ್ಲಿ ವರ್ಚುವಲ್ ಕಾಕ್‌ಪಿಟ್‌ನಲ್ಲಿ 10.25-ಇಂಚಿನ ಡಿಸ್ ಪ್ಲೇ ಮತ್ತು ಇದು ನಾಲ್ಕು ವಿಭಿನ್ನ ವಿನ್ಯಾಸಗಳಿವೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಟಾಪ್-ಆಫ್-ಲೈನ್ Skoda Kodiaq ಆರ್‌ಎಸ್ ರೂಪಾಂತರದಲ್ಲಿ ಹೊಸ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 245 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಹಿಂದಿನ ಬಿಟುರ್ಬೊ ಡೀಸೆಲ್ ಎಂಜಿನ್ ಗಿಂತ 5 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಟಿಡಿಐ ಎಂಜಿನ್ ಗಿಂತ 60 ಕೆಜಿಗಿಂತ ಹೆಚ್ಚು ಹಗುರವಾಗಿದೆ. ಇನ್ನು ಇತರ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳು ಕೂಡ ಲಭ್ಯವಿದೆ. ಇದರಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಈ ಎಂಜಿನ್ 190 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ, ಇನ್ನು 2.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಕೂಡ ಹೊಂದಿರಲಿದೆ. ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ Kodiaq facelift ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಹೊಂದಿರುತ್ತದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಇನ್ನು Skoda auto Inida ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಸೆಡಾನ್ ಅನ್ನು ಬದಲಾಯಿಸಿ ಹೊಸ ಮಿಡ್‌ಸೈಜ್ ಸೆಡಾನ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಮಿಡ್ ಸೈಜ್ ಸೆಡಾನ್ ಕಾರಿಗೆ ಸ್ಲಾವಿಯಾ ಎಂಬ ಹೆಸರನ್ನು ನೀಡಬಹುದು. Skoda ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಈ ವರ್ಷದ ಅಂತ್ಯದ ಮೊದಲು ಅನಾವರಣಗೊಳಿಸಿಸಲಿದೆ ಎಂದು ಹೇಳಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

Skoda salvia ಸೆಡಾನ್ ಮಾದರಿಯನ್ನು ಹೊಸ ವಿನ್ಯಾಸ ರೂಪದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಮಿಡ್ ಸೆಡಾನ್ ವಿನ್ಯಾಸಗೊಳಿಸಲು ಉದಯೋನ್ಮುಖ ಭಾರತೀಯ ವಿನ್ಯಾಸಕರನ್ನು ಆಹ್ವಾನಿಸಿದ್ದಾರೆ. ಮುಂಬರುವ ಮಿಡ್ ಸೈಜ್ ಸೆಡಾನ್‌ನ ವಿನ್ಯಾಸ ರೇಖಾಚಿತ್ರವನ್ನು ಕಂಪನಿಯು ಬಿಡುಗಡೆ ಮಾಡಿದೆ. ಮುಂಬರುವ ಸ್ಲಾವಿಯಾ ಸೆಡಾನ್ ಇಂಡಿಯನ್ 2.0 ಕಾರ್ಯತಂತ್ರದ ಅಡಿಯಲ್ಲಿ ಬಿಡುಗಡೆಯಾದ ಬ್ರಾಂಡ್‌ನ ಎರಡನೇ ಮಾದರಿಯಾಗಿದೆ. ಇದರ ಪರಿಣಾಮವಾಗಿ ಸೆಡಾನ್ ಅದೇ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ Skoda Kodiaq facelift ಎಸ್‍ಯುವಿಯ ಉತ್ಪಾದನೆ

ಈ Skoda Kodiaq facelift ಎಸ್‍ಯುವಿಯು ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ. ಈ ಹೊಸ Skoda Kodiaq facelift ಎಸ್‍ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‌ಯುವಿಗಳಲ್ಲಿ ಕೂಡ ಒಂದಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
New skoda kodiaq facelift suv production to start from december 2021 details
Story first published: Saturday, August 21, 2021, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X