ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಬಹುನೀರಿಕ್ಷಿತ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಸ್ಕೋಡಾ ಕಂಪನಿಯು ಇದೇ ತಿಂಗಳು 28ರಂದು ಬಿಡುಗೊಳಿಸುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರು ವಿವಿಧ ಎಂಜಿನ್ ಆಯ್ಕೆ, ಅತ್ಯುತ್ತಮ ಫೀಚರ್ಸ್ ಒಳಗೊಂಡಂತೆ ಬೆಲೆ ವಿಚಾರದಲ್ಲೂ ಗಮನಸೆಳೆಯಲಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಸ್ಕೋಡಾ ಹೊಸ ಕುಶಾಕ್ ಕಾರು ಮಾದರಿಯನ್ನು ಕಂಪನಿಯು ತನ್ನ ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಜೊತೆಗಿನ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆಯಡಿ ಅಭಿವೃದ್ದಿಗೊಳಿಸಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಕ್ಯೂಬಿ ಎ0 ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳುವ ಮೂಲಕ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ, ಕುಶಾಕ್ ಕಾರು ಮಾದರಿಯು ಆಕ್ಟಿವ್, ಆಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಮ್ಯಾನುವಲ್, ಆಟೋಮ್ಯಾಟಿಕ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿರಲಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಹೊಸ ಕುಶಾಕ್ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಪ್ರತಿ ವೆರಿಯೆಂಟ್‌ನಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಜೋಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿರಲಿದ್ದು, ಪ್ರತಿ ಮಾದರಿಗಳಲ್ಲೂ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಕುಶಾಕ್ ಕಾರಿನ ಆರಂಭಿಕ ಮಾದರಿಗಳಲ್ಲಿರುವ 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌‌ಬಾಕ್ಸ್ ಆಯ್ಕೆ ಹೊಂದಿದ್ದು, ಆರಂಭಿಕ ಮಾದರಿಯು 108-ಬಿಎಚ್‌ಪಿ, 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಹೈ ಎಂಡ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 148-ಬಿಎಚ್‍‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಈ ಮೂಲಕ ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಲಿರುವ ಕುಶಾಕ್ ಕಾರು ಮಾದರಿಯಲ್ಲಿ ಆಕರ್ಷಕ ಗ್ರಿಲ್ ಮತ್ತು ಬಲಿಷ್ಠ ವಿನ್ಯಾಸದ ಬಂಪರ್, ಡ್ಯುಯಲ್ ಹೆಡ್‍ಲ್ಯಾಂಪ್‍, ಎಲ್ಇಡಿ ಡಿಆರ್‌ಎಲ್ಎಸ್, ಏರ್ ಇನ್‍‍ಟೆಕ್ ಮತ್ತು ಸ್ಕಫ್ ಪ್ಲೇಟ್ ಜೋಡಿಸಲಾಗಿದ್ದು, ಹಲವಾರು ಸ್ಪೋರ್ಟಿ ಫೀಚರ್ಸ್ ಮತ್ತು ಶಾರ್ಪ್ ಎಡ್ಜ್‌ಗಳನ್ನು ನೀಡಲಾಗಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ವೀಂಡೋಗಳ ಸುತ್ತಲೂ ಕ್ರೋಮ್ ಸ್ಟ್ರೀಪ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್, ರೂಫ್ ಮೌಟೆಂಡ್ ಸ್ಪಾಯ್ಲರ್, ಎಲ್ಇಡಿ ಸ್ಟಾಪ್ ಲ್ಯಾಂಪ್ ಜೊತೆಗೆ ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಕೂಡಾ ಆಕರ್ಷಕವಾಗಿವೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ವರ್ಚುವಲ್ ಕಾಕ್‌ಪಿಟ್ ಹೊಂದಿರುವ ಹೊಸ ಕಾರಿನ ಒಳಭಾಗದಲ್ಲಿ ಆ್ಯಂಬಿಯೆಂಟ್ ಲೈಟಿಂಗ್ಸ್, ಆರಾಮದಾಯಕ ವೆಂಟೆಲೆಟೆಡ್ ಆಸನಗಳು, ಸೆಂಟರ್ ಕನ್ಸೊಲ್, 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಮಲ್ಟಿ ಫಂಕ್ಷನಲ್ ಟು ಸ್ಪೋಕ್ ಸ್ಟಿರಿಂಗ್ ವೀಲ್ಹ್ ಹೊಂದಿದೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ವೈರ್‌ಲೆಸ್ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ಸಿ ಫೋರ್ಟ್ ವೈರ್‌ಲೆಸ್ ಚಾರ್ಜರ್ ಸೌಲಭ್ಯ ಸೇರಿದಂತೆ ಸುರಕ್ಷತೆಗಾಗಿ ಬೆಸ್ ವೆರಿಯೆಂಟ್‌ನಲ್ಲಿ 4 ಏರ್‌ಬ್ಯಾಗ್, ಟಾಪ್ ಎಂಡ್ ಮಾದರಿಯಲ್ಲಿ 6 ಏರ್‌ಬ್ಯಾಗ್ ಸೌಲಭ್ಯಗಳಿವೆ.

ಈ ತಿಂಗಳು 28ರಂದು ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್‌ಗಳಿದ್ದು, ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
Skoda Kushaq Variants & Engine Options Leaked Ahead Of India Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X