ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಸೆಡಾನ್ ಅನ್ನು ಬದಲಾಯಿಸಿ ಹೊಸ ಮಿಡ್‌ಸೈಜ್ ಸೆಡಾನ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಮಿಡ್ ಸೈಜ್ ಸೆಡಾನ್ ಕಾರಿಗೆ 'ಸ್ಲಾವಿಯಾ' ಅಥವಾ 'ಲಾರಾ' ಎಂಬ ಹೆಸರನ್ನು ನೀಡುವ ಸಾಧ್ಯತೆಗಳಿದೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಈ ಹೊಸ ಸ್ಕೋಡಾ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.ಇನ್ನು ಸ್ಕೋಡಾ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಝಾಕ್ ಹೋಲಿಸ್ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಶೀಘ್ರದಲ್ಲೇ ರ‍್ಯಾಪಿಡ್ ಸೆಡಾನ್ ಅನ್ನು ನಿಲ್ಲಿಸಲಾಗುವುದು ಎಂದು ಬಹಿರಂಗಪಡಿಸಿದ್ದಾರೆ. ಇದರ ಬದಲು ಹೊಸ ಮಿಡ್ ಸೈಜ್ ಸೆಡಾನ್ ಅನ್ನು ಪರಿಚಯಿಸುತ್ತೇವೆ. ಇದೇ ವರ್ಷದ ಅಂತ್ಯದಲ್ಲಿ ಈ ಹೊಸ ಸೆಡಾನ್ ಅನಾವರಣಗೊಳ್ಳಲಿದೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಸದ್ಯ ಮಾರಾಟವಾಗುತ್ತಿರುವ ರ‍್ಯಾಪಿಡ್ ಕಾರು ಪಿಕ್ಯೂ 25 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ. ರ‍್ಯಾಪಿಡ್ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾದಗಿಣಿಂಅ ಮಾಡಿದಾಗಿನಿಂದ ಯಾವುದೇ ಬದಲಾಗದೆ ಉಳಿದಿವೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಮಿಡ್‌ಸೈಜ್ ಸೆಡಾನ್ ವಿಭಾಗದಲ್ಲಿ ಕಳೆದ ವರ್ಷ ಐದನೇ ತಲೆಮಾರಿನ ಹೋಂಡಾ ಸಿಟಿಯನ್ನು ಪರಿಚಯಿಸಿದ್ದರು. ಇನ್ನು ಈ ವಿಭಾಗದಲ್ಲಿ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್ ಅನ್ನು ಬೆಲ್ಟಾ ಎಂಬ ಹೆಸರಿನೊಂದಿಗೆ ಬಿಡುಗಡೆಗೊಳಿಸಲಾಗುತ್ತಿದೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಇನ್ನು ಫೋಕ್ಸ್‌ವ್ಯಾಗನ್ ಜಾಗಾತಿಕ ಮಾರುಕಟ್ಟೆಯಲ್ಲಿ ಹೊಸ ವರ್ಟಿಸ್ ಮಾದರಿ ಆಧಾರಿತ ಸೆಡಾನ್ ಅನ್ನು ಬಿಡುಗಡೆಗೊಳಿಸಲಿದೆ. ಈ ಎರಡೂ ಸೆಡಾನ್‌ಗಳು ಈಗಾಗಲೇ ಸಾರ್ವಜನಿಕ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಇದರಿಂದ ಮಿಡ್‌ಸೈಜ್ ವಿಭಾಗದಲ್ಲಿ ಹೆಚ್ಚಿನ ಪೈಪೋಟಿ ನೀಡಲು ರ‍್ಯಾಪಿಡ್ ಬದಲಿಯಾಗಿರುವ ಹೊಸ ಸೆಡಾನ್ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿರುತ್ತದೆ. ಇದರ ಒಳಭಾಗದಲಿ ಹೆಚ್ಚಿನ ಸ್ಪೇಸ್ ಅನ್ನು ಹೊಂದಿರುತ್ತದೆ. ಇದು ಅತಿದೊಡ್ಡ ಬೂಟ್‌ಸ್ಪೇಸ್ ಮತ್ತು ವಿಭಾಗದ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, ವಿದೇಶದಲ್ಲಿ ಮಾರಾಟವಾಗುವ ಮಾದರಿಗಳ ಅಂಶಗಳನ್ನು ಹೊಸ ಸೆಡಾನ್ ಹೊಂದಿರುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಬಟರ್‌ಫ್ಲೈ ಫ್ರಂಟ್ ಗ್ರಿಲ್, ಸ್ಪೋರ್ಟಿ ಫಾಗ್ ಲ್ಯಾಂಪ್‌ಗಳು ಮತ್ತು ವಿಶಾಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ತೆಳ್ಳನೆಯ ಹೆಡ್‌ಲ್ಯಾಂಪ್ ಕ್ಲಸ್ಟರ್ ಹೊಂದಿರಲಿದೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಇನ್ನು ಈ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ನಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಟರ್ಬೊ ಪೆಟ್ರೋಲ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 110 ಬಿಹೆಚ್‌ಪಿಗಿಂತ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಮಿಡ್‌ಸೈಜ್ ಸೆಡಾನ್ ಕಾರು

ಇದರೊಂದಿಗೆ ಈ ಹೊಸ ಸೆಡಾನ್ ಟಾಪ್-ಎಂಡ್ ರೂಪಾಂತರಗಳಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್, 6-ಸ್ಪೀಡ್ ಟಾರ್ಕ್ ಕರ್ನ್'ವಾಟರ್ ಮತ್ತು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

Most Read Articles

Kannada
English summary
New Skoda Midsize Sedan To Be Revealed By End-2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X