ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಕರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿರುವುದರಿಂದ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆಯು ಮತ್ತಷ್ಟು ವಿಳಂಬವಾಗಬಹುದು.

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದರಿಂದ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಆಗಿದೆ. ಇದೇ ಕಾರಣದಿಂದ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ ಮಾಡುವುದನ್ನು ಮುಂದೂಡಬಹುದು ಎಂದು ಸ್ಕೋಡಾ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಝಾಕ್ ಹೋಲಿಸ್ ಅವರು ಟ್ವಿಟ್ ಮಾಡಿದ್ದಾರೆ. ಇನ್ನು ಸ್ಕೋಡಾ ಕಂಪನಿಯು ಔರಂಗಾಬಾದ್‌ನ ಘಟಕದಲ್ಲಿ ತನ್ನ ಆಕ್ಟೀವಿಯಾ ಕಾರಿನ ಉತ್ಪಾದನೆಯನ್ನು ಈಗಗಾಲೇ ಪ್ರಾರಂಭಿಸಿದೆ.

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಈ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಸೈ ಚಿತ್ರಗಳು ಬಹಿರಂಗವಾಗಿವೆ. ಇದರಿಂದ ಈ ಹೊಸ ಆಕ್ಟೀವಿಯಾ ಕಾರು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹಲವರು ನಿರೀಕ್ಷಿಸಿದ್ದರು, ಆದರೆ ಕೊರೋನಾದಿಂದ ಬಿಡುಗಡೆ ತಡವಾಗಲಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಸ್ಕೋಡಾ ಆಕ್ಟೀವಿಯಾದ ಹಿಂದಿನ ತಲೆಮಾರಿನಕಾರನ್ನು 2013ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯೊಂದಿಗೆ ಉತ್ತಮ ಮಾರಾಟವನ್ನು ಕಂಡಿತ್ತು. ಇದರಿಂದ ನಾಲ್ಕನೇ ತಲೆಮಾರಿ ಸ್ಕೋಡಾ ಆಕ್ಟೀವಿಯಾ ಕಾರು ಹಲವು ಬದಲಾವಣೆಗಳೊಂದಿಗೆ ಭಾರತದಲ್ಲಿ ಮತ್ತೊಮ್ಮೆ ಬಿಡುಗಡೆಯಾಗಲಿದೆ.

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಹಿಂದಿನ ಮಾದರಿಗೆ ಹೋಲಿಸಿದರೆ ನಯವಾದ ವಿನ್ಯಾಸವನ್ನು ಹೊಂದಿದೆ. ಈ ಹೊಸ ಕಾರಿನ ಗ್ರೀಲ್ ಅಗಲವಾಗಿ ಮತ್ತು ಅಗ್ರೇಸಿವ್ ಆಗಿದೆ. ಮುಂಭಾಗದ ಬಂಪರ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಇನ್ನು ಮುಂಭಾಗದಲ್ಲಿ ವಿಶಾಲವಾದ ಏರ್ ಡ್ಯಾಮ್ ಜೊತೆಗೆ ಸಮತಲವಾದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಎರಡೂ ಬದಿಗಳಲ್ಲಿ ಇರಿಸಲಾಗಿದ್ದು, ಎರಡು ಯುನಿಟ್ ಗಳನ್ನು ಕನೆಕ್ಟ್ ಮಾಡುವ ತೆಳುವಾದ ಕ್ರೋಮ್ ಸ್ಟ್ರಿಪ್ ಇದೆ. ಇದು ಕಂಪನಿಯ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲೈಟ್ ಅನ್ನು ಕೂಡ ಒಳಗೊಂಡಿದೆ.

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಹಿಂಭಾಗದಲ್ಲಿ ಅಗ್ರೇಸಿವ್ ಆಗಿ ಕಾಣುವ ಬೂಟ್ ಲಿಡ್ ಅನ್ನು ಹೊಂದಿದೆ. ಇನ್ನು ಹೊಸ ದಪ್ಪ ಅಕ್ಷರಗಳಲ್ಲಿ ಬೂಟ್ ಲಿಡ್ ಉದ್ದಕ್ಕೆ ಸ್ಕೋಡಾ ಎಂದು ಬರೆಯಲಾಗಿದೆ. ಈ ಸೆಡಾನ್ ಹೊಸ ಅಲಾಯ್ ವೀಲ್ ವಿನ್ಯಾಸವನ್ನು ಸಹ ಪಡೆಯುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಒಳಭಾಗದಲ್ಲಿ ಹೊಸ ಕ್ಯಾಬಿನ್ ವಿನ್ಯಾಸವನ್ನು ಪಡೆಯುತ್ತದೆ. ಒಳಭಾಗದಲ್ಲಿ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಬ್ರ್ಯಾಂಡ್‌ನ ಕಾಕ್‌ಪಿಟ್ ವಿನ್ಯಾಸವನ್ನು ಒಳಗೊಂಡ 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಗಾಗಿ ಸೆಡಾನ್ ಮತ್ತೊಂದು 10.25-ಇಂಚಿನ ಡಿಸ್ ಪ್ಲೇಯನ್ನು ಕೂಡ ಹೊಂದಿರಲಿದೆ.

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ವಿಡಬ್ಲ್ಯೂ ಗ್ರೂಪ್‌ನ 2.0 ಎಲ್ ಟಿಎಸ್‌ಐ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗುತದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ಇನ್ನು ಈ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ 1.5-ಲೀಟರ್ ಟಿಎಸ್ಐ, ನಾಲ್ಕು ಸಿಲಿಂಡರ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 148 ಬಿಹೆಚ್‌ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ,

ತಡವಾಗಲಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆ

ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಉತ್ತಮ ಕಾರ್ಯಕ್ಷಮತೆಯನ್ನು ಸೆಡಾನ್ ಆಗಿರಲಿದೆ. ಇದರಿಂದ ಹೊಸ ಆಕ್ಟೀವಿಯಾ ಪರ್ಫಾಮೆನ್ಸ್ ಕಾರು ಪ್ರಿಯರನ್ನು ಕೂಡ ಸೆಳೆಯಬಹುದು. ಇನ್ನು ಯುರೋ ಎನ್‍‍‍ಸಿ‍ಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

Most Read Articles

Kannada
Read more on ಸ್ಕೋಡಾ skoda
English summary
2021 Skoda Octavia Launch Could Be Delayed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X