ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಮಧ್ಯಮ ಗಾತ್ರದ ಸೆಡಾನ್ ಕಾರು ಮಾದರಿಯಾದ ಆಕ್ಟೀವಿಯಾ ಆವೃತ್ತಿಯ 2021ರ ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ಹೊಸ ಕಾರು ವಿನೂತನ ವಿನ್ಯಾಸ ಮತ್ತು ಪರ್ಫಾಮೆನ್ಸ್ ಪ್ರೇರಿತ ಎಂಜಿನ್ ಆಯ್ಕೆಯೊಂದಿಗೆ ಎಂಟ್ರಿ ಲೆವಲ್ ಐಷಾರಾಮಿ ಸೆಡಾನ್ ಕಾರುಗಳ ವಿಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಸ್ಟೈಲ್ ಮತ್ತು ಲೊರಿನ್ ಅಂಡ್ ಕ್ಲೆಮೆಂಟ್ ಎನ್ನುವ ಪ್ರಮುಖ ಎರಡು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಟೈಲ್ ಮಾದರಿಯು ರೂ. 25.99 ಲಕ್ಷ ಮತ್ತು ಲೊರಿನ್ ಅಂಡ್ ಕ್ಲೆಮೆಂಟ್ ಮಾದರಿಯು ರೂ. 28.99 ಲಕ್ಷ ಬೆಲೆ ಹೊಂದಿದ್ದು, ಬ್ರಿಲಿಯಂಟ್ ಸಿಲ್ವರ್, ಮ್ಯಾಪಲ್ ಬ್ರೌನ್, ಕ್ಯಾಂಡಿ ವೈಟ್, ಲಾವಾ ಬ್ಲೂ ಹಾಗೂ ಮ್ಯಾಜಿಕ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆ ಹೊಂದಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

2002ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದ ಆಕ್ಟೀವಿಯಾ ಕಾರು ತನ್ನ ವಿನೂತನ ವೈಶಿಷ್ಟ್ಯತೆ ಮತ್ತು ಪರ್ಫಾಮೆನ್ಸ್ ಮೂಲಕ ಜನಪ್ರಿಯತೆ ಕಾಯ್ದುಕೊಂಡಿದ್ದು, ಆಕ್ಟೀವಿಯಾದ ಎರಡನೇ ತಲೆಮಾರಿನ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾರಾ ಹೆಸರಿನಲ್ಲಿ ಬಿಡುಗಡೆ ಮಾಡಿದಾಗಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿತ್ತು.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ತದನಂತರ ಸ್ಕೋಡಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಭಾರತದಲ್ಲಿ ಹೊಸ ವಿನ್ಯಾಸದೊಂದಿಗೆ ಮೂರನೇ ತಲೆಮಾರಿನ ಆವೃತ್ತಿಯನ್ನು ಮತ್ತೆ ಆಕ್ಟೀವಿಯಾ ಹೆಸರಿನಲ್ಲಿ ಮರು ಬಿಡುಗಡೆಗೊಳಿಸಿತ್ತು. ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ಆಕ್ಟೀವಿಯಾ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿ ಹಾಗೂ ಶಾರ್ಪ್ ಎಡ್ಜ್ ಪಡೆದುಕೊಂಡಿದ್ದು, ಕ್ರಿಸ್ಟಲ್ ಲೈಟಿಂಗ್ ಹೊಂದಿರುವ ಸ್ಲೀಕ್ ಹೆಡ್ ಲ್ಯಾಂಪ್ ಯುನಿಟ್, ಹೈ ಹಾಗೂ ಲೋ ಬೀಮ್'ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ಮತ್ತು 600-ಲೀಟರ್ ಸಾಮರ್ಥ್ಯದ ಬೂಟ್‌ಸ್ಪೆಸ್ ಹೊಂದಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ಎಲ್ ಅಂಡ್ ಕೆ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್‌ಗಳಿದ್ದು, ಏರೋ ಬ್ಲ್ಯಾಕ್ 17 ಇಂಚಿನ ಮಲ್ಟಿ ಸ್ಪೋಕ್ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌, ವಿಂಡೋ ಟ್ರಿಮ್ ಸುತ್ತಲೂ ಕ್ರೋಮ್ ಅಸೆಂಟ್, ಹೆಡ್‌ಲೈಟ್‌ನಿಂದ ಟೇಲ್‌ಲೈಟ್‌ವರೆಗೆ ಬಾಡಿ ಲೈನ್ಸ್ ಮತ್ತು ಆಟೋ ಪಾರ್ಕ್ ಫೀಚರ್ಸ್ ಪ್ರಮುಖವಾಗಿವೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ಹೊಸ ಕಾರಿನ ಕ್ಯಾಬಿನ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಲೆದರ್ ಹಾಗೂ ಅಲ್ಕಾಂಟರಾ ಹೊಂದಿದ್ದ, ಡ್ಯುಯಲ್ ಟೋನ್ ಬಣ್ಣದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸರ್ಪೊಟ್ ಮಾಡುವ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟ್, ಟೂ-ಸ್ಪೀಕ್ ಸ್ಟೀಯರಿಂಗ್ ವ್ಹೀಲ್ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ಸುರಕ್ಷತೆಗಾಗಿ ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ಫ್ರಂಟ್ ಹಾಗೂ ರೇರ್ ಏರ್‌ಬ್ಯಾಗ್‌, ಡ್ರೈವರ್ ಹಾಗೂ ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಕರ್ಟೇನ್ ಏರ್‌ಬ್ಯಾಗ್‌ ಸೇರಿದಂತೆ ಎಂಟು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಎಬಿಎಸ್, ಇಬಿಡಿ, ಪಾರ್ಕ್ ಅಸಿಸ್ಟ್, ಇಬುಜ್ ಫ್ಯಾಟಿಗ್ ಅಲರ್ಟ್, ಮಲ್ಟಿ-ಕೊಲಿಷನ್ ಬ್ರೇಕ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

2021 ಆಕ್ಟೀವಿಯಾ ಕಾರ್ ಅನ್ನು ಸ್ಟೈಲ್ ಹಾಗೂ ಎಲ್ ಅಂಡ್ ಕೆ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದ್ದು, 2.0 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸ್ಕೋಡಾ ಆಕ್ಟೀವಿಯಾ ಬಿಡುಗಡೆ

ಹೊಸ ಕಾರಿನ 2.0-ಲೀಟರ್ ಎಂಜಿನ್ ಮಾದರಿಯು ಏಳು ಸ್ಪೀಡಿನ ಡಿಎಸ್‌ಜಿ ಗೇರ್ ಬಾಕ್ಸ್‌ನೊಂದಿಗೆ 4,180 ಆರ್‌ಪಿ‌ಎಂನಲ್ಲಿ 187.4 ಬಿ‌ಹೆಚ್‌ಪಿ ಪವರ್ ಹಾಗೂ 1,500 - 3,990 ಆರ್‌ಪಿ‌ಎಂನಲ್ಲಿ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಕಾರಿನಲ್ಲಿ ಶಿಫ್ಟ್-ಬೈ-ವೈರ್ ಟೆಕ್ನಾಲಜಿ ಬಳಕೆ ಮಾಡಲಾಗಿದ್ದು, ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
New Skoda Octavia Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X