ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ದೇಶದ ಅತಿ ದೊದ್ದ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಜಿಮ್ನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಉತ್ಪಾದನಾ ಘಟಕದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವುಕ್ಕೆ ಇತ್ತೀಚೆಗೆ ಪ್ರಾರಂಭಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

5-ಡೋರ್ ಸುಜುಕಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯ ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ಮಾಹಿತಿಗಳ ಪ್ರಕಾರ, ಈ ಜಿಮ್ನಿ ಎಸ್‌ಯುವಿಯು ಒಟ್ಟಾರೆ 3,850 ಎಂಎಂ ಉದ್ದ, 1,645 ಎಂಎಂ ಅಗಲ ಮತ್ತು 1,730 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ 2,550 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಸಾಮಾನ್ಯ 3-ಡೋರಿನ ರೂಪಾಂತರಕ್ಕೆ ಹೋಲಿಸಿದರೆ, ಒಟ್ಟಾರೆ ಉದ್ದವು 300 ಎಂಎಂ ಮತ್ತು ವ್ಹೀಲ್‌ಬೇಸ್ ಉದ್ದವು 300 ಎಂಎಂ ನಷ್ಟು ಹೆಚ್ಚಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ಈ ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, 5-ಡೋರ್ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಕೆ-ಸೀರಿಸ್ ಇನ್-ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಲಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗಿದ್ದು, ನಾಲ್ಕು-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಆಯ್ಕೆಯನ್ನು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ಇದು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗಕ್ಕೆ ಸೇರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

5-ಡೋರ್ ಜಿಮ್ನಿ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಿರುತ್ತದೆ, ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ಮತ್ತು ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ಸದ್ಯ ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದೇ ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಸುಜುಕಿ ಜಿಮ್ನಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯು 2018ದಿಂದ ಮಾರಾಟವಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ

2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದರು. ಇದು ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು. ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

Most Read Articles

Kannada
English summary
Maruti Suzuki Jimny 5-door Specs Leaked Ahead Of India Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X