ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆಫ್-ರೋಡರ್ ಎಸ್‍ಯುವಿಯನ್ನು ಪರಿಚಯಿಸಲಿದೆ. ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಯಾಗಿದೆ.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಈ ಜಿಮ್ನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.ವರದಿಗಳ ಪ್ರಕಾರ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯು ಮುಂದಿನ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಉತ್ಪಾದನೆಗೆ ಸಿದ್ಧಗೊಂಡಿರುವ ಮಾದರಿಯನ್ನು ಮುಂದಿನ ವರ್ಷ ನಡೆಯುವ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಈ ಜಿಮ್ನಿ ಎಸ್‌ಯುವಿಯು ಒಟ್ಟಾರೆ 3,850 ಎಂಎಂ ಉದ್ದ, 1,645 ಎಂಎಂ ಅಗಲ ಮತ್ತು 1,730 ಎಂಎಂ ಎತ್ತರವನ್ನು ಹೊಂದಿದೆ.ಇನ್ನು ಈ ಎಸ್‍ಯುವಿ 2,550 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಸಾಮಾನ್ಯ 3-ಡೋರಿನ ರೂಪಾಂತರಕ್ಕೆ ಹೋಲಿಸಿದರೆ, ಒಟ್ಟಾರೆ ಉದ್ದವು 300 ಎಂಎಂ ಮತ್ತು ವ್ಹೀಲ್‌ಬೇಸ್ ಉದ್ದವು 300 ಎಂಎಂ ನಷ್ಟು ಹೆಚ್ಚಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಇನ್ನು ಜಿಮ್ನಿ 5-ಡೋರ್ ಎಸ್‍ಯುವಿಯು ರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಈ ಜಿಮ್ನಿ ಮೈಲ್ಡ್ ಹೈಬ್ರಿಡ್ ಸಿಸ್ಟಂ ಹೊಂದಿರುವ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. ಹೊಸ ಮಾದರಿಯು ಜಿಮ್ನಿ ಸಿಯೆರಾವನ್ನು ಆಧರಿಸಿದೆ.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಇನ್ನು 5-ಡೋರ್ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಕೆ-ಸೀರಿಸ್ ಇನ್-ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗಿದ್ದು, ನಾಲ್ಕು-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಆಯ್ಕೆಯನ್ನು ನೀಡಲಾಗಿದೆ. ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಇದು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗದಲ್ಲಿ ಇರಿಸಬಹುದು.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

5-ಡೋರ್ ಜಿಮ್ನಿ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಿರುತ್ತದೆ, ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ಮತ್ತು ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗುತ್ತದೆ. 2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದಾಗ ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು.

ಪವರ್‌ಫುಲ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಜಿಮ್ನಿ

ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಬಹುನಿರೀಕ್ಷಿತ ಸುಜುಕಿ 5-ಡೋರ್ ಜಿಮ್ನಿ ಎಸ್‍‍ಯುವಿಯು 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಮಾದರಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

Most Read Articles

Kannada
English summary
5-Door Suzuki Jimny LWB To Get Powerful Turbo-Petrol Engine. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X