ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪಾಲುದಾರ ಸಿಪ್ರಾಡಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನೇಪಾಳದಲ್ಲಿ ನೆಕ್ಸನ್ ಇವಿ ಬಿಡುಗಡೆಗೊಳಿಸಿದೆ. ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಬಿಡುಗಡೆಯಾಗಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ನೇಪಾಳದಲ್ಲಿ ಬಿಡುಗಡೆಗೊಂಡ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎನ್‌ಪಿಆರ್ 35.99 ಲಕ್ಷವಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸಾಮಾನ್ಯ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಟೈಲಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಕೆಲವು ಕಾಸ್ಮೆಟಿಕ್ ನವೀಕರಣವನ್ನು ನಡೆಸಿದ್ದಾರೆ. 2020ರ ಜನವರಿಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಪರಿಚಯಿಸಿದರು.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ನೆಕ್ಸಾನ್ ಎಲೆಕ್ಟ್ರಿಕ್ ಭಾರತದಲ್ಲಿ ಹೆಚ್ಚು ಮಾರಾಟವಾದ ಪ್ರಯಾಣಿಕರ ಎಲೆಕ್ಟ್ರಿಕ್ ಕಾರು ಆಗಿದೆ. ಅಲ್ಲದೇ ಇದು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿದ ಮೊದಲ ವಾಹನವಾಗಿದ್ದು, ಮುಂಬರುವ ಟಾಟಾ ಇವಿಗಳಿಗೆ ಕಾರಣವಾಗಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೆಕ್ಸಾನ್ ಇವಿ ಶೇ.6.8 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸಿದೆ. ಈಗಗಾಲೇ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯ 4,500 ಯುನಿಟ್ ಗಳನ್ನು ಮಾರಾಟಗೊಳಿಸಿವೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಈ ಹೊಸ ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್‌ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಲಾ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ ಅಂಡ್ ಗೋ, ಕೂಲ್ಡ್ ಗ್ಲೋವ್ ಬಾಕ್ಸ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ಇದರಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಅನ್ನು ಹೊಂದಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಎಸ್‌ಯುವಿ ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ಹೊಂದಿದೆ.

ನೇಪಾಳದಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಈ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಝಡ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ನೇಪಾಳದ ಮಾರುಕಟ್ಟೆಯ ಎಲೆಕ್ಟ್ರಿಕ್ ವಿಭಾಗದಲ್ಲಿ ನೆಕ್ಸಾನ್ ಇವಿ ಹೊಸ ಸಂಚಲವನ್ನು ಸೃಷ್ಟಿಸಬಹುದು.

Most Read Articles

Kannada
English summary
Tata Nexon EV Launched In Nepal. Read In Kannada.
Story first published: Wednesday, July 28, 2021, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X