ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಜನರೇಷನ್ ಸಫಾರಿ

ಟಾಟಾ ಮೋಟಾರ್ಸ್ ಕಂಪನಿಯು ಇದೇ ತಿಂಗಳು 26ರಂದು ತನ್ನ ಹೊಸ ತಲೆಮಾರಿನ ಸಫಾರಿ ಎಸ್‌ಯುವಿ ಕಾರು ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣ ಮಾಡುತ್ತಿದ್ದು, ಹೊಸ ಕಾರಿನ ಅನಾವರಣಕ್ಕೂ ಮುನ್ನ ಸಫಾರಿ ಕಾರನ್ನು ಟಾಟಾ ಕಂಪನಿಯು ದೇಶಾದ್ಯಂತ ಹರಡಿಕೊಂಡಿರುವ ತನ್ನ ಪ್ರಮುಖ ಕಾರು ಮಾರಾಟ ಮಳಿಗೆಗಳಲ್ಲಿ ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಹೊಸ ತಲೆಮಾರಿನ ಸಫಾರಿ ಮಾದರಿಯು ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹ್ಯಾರಿಯರ್ ಎಸ್‌ಯುವಿಯ ಮುಂದುವರಿದ ಭಾಗವಾಗಿರುವ ಸಫಾರಿ ಕಾರು ಮೂರನೇ ಸಾಲಿನ ಆಸನದೊಂದಿಗೆ ಫುಲ್ ಸೈಜ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ. ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಹೊಂದಿರುವ ಟಾಟಾ ಸಫಾರಿ ಎಸ್‌ಯುವಿ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

OMEGA ಕಾರು ಉತ್ಪಾದನಾ ತಂತ್ರಜ್ಞಾನದ ಮೂಲಕ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಟಾಟಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿದೆ.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಸಫಾರಿ ಎಸ್‌ಯುವಿ ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದ್ದು, ಡೀಲರ್ಸ್ ಯಾರ್ಡ್‌ನಲ್ಲಿ ಕಂಡುಬಂದ ಸಫಾರಿ ಕಾರು ಮಾದರಿಯು 6 ಸೀಟುಗಳ ಸೌಲಭ್ಯವನ್ನು ಹೊಂದಿತ್ತು.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಹೊಸ ಕಾರಿನಲ್ಲಿ ಸ್ಪೋರ್ಟಿ ಮಾದರಿಯ ಆಸನಗಳೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮೌಂಟೆಡ್, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ವಿವಿಧ ಡ್ರೈವ್ ಮೋಡ್, ಪನೊರಮಿಕ್ ಸನ್‌ರೂಫ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ ಜೋಡಣೆ ಮಾಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಫ್ರಂಟ್ ಮತ್ತು ಸೀಟ್ ಸೈಡ್‌ನಲ್ಲಿ ಕರಟೈನ್ ಏರ್‌ಬ್ಯಾಗ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಆಟೋ ಡಿಮ್ಮಿಂಗ್, 9-ಇಂಚಿನ ಟಚ್‌ಸ್ಕ್ರೀನ್ ಆಟೋಮೋಟಿವ್ ಹೆಡ್ ಯುನಿಟ್, 9 ಜೆಬಿಎಲ್ ಸಿಸ್ಟಂ ಜೊತೆ ಆ್ಯಂಪಿಯರ್ ಸ್ಪೀಕರ್ಸ್ ಮತ್ತು ಬ್ರಾಂಡ್ ನ್ಯೂ ಐರಾ ಕನೆಕ್ಟೆಡ್ ಫೀಚರ್ಸ್ ಹೊಂದಿರಲಿದೆ.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಹೊಸ ಐರಾ ಕನೆಕ್ಟೆಡ್ ಫೀಚರ್ಸ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ವಾಯ್ಸ್ ಕಮಾಂಡ್ ಸೌಲಭ್ಯವಿದ್ದು, ಒಂದೇ ಸೂರಿನಡಿ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಲ್ಲದೆ ತಾಂತ್ರಿಕ ದೋಷಗಳನ್ನು ಅತಿ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಐರಾ ಕಾರ್ ಕನೆಕ್ಟೆಡ್ ಫೀಚರ್ಸ್‌ನಲ್ಲಿ ರಿಮೋಟ್ ಕಂಟ್ರೋಲ್ ಲಾಕ್/ ಅನ್‌ಲಾಕ್, ರಿಮೋಟ್ ಹೆಡ್‌ಲೈಟ್ಸ್ ಆನ್/ಆಫ್, ರಿಮೋಟ್ ಡಿಟಿಇ, ಸ್ಟೊಲನ್ ವೆಹಿಕಲ್ ಟ್ರ್ಯಾಕಿಂಗ್, ರಿಮೋಟ್ ಇಂಮೊಬಿಲೈಝಷನ್(ವಾಹನದ ಎಂಜಿನ್ ನಿಷ್ಕಯಗೊಳಿಸಿಸುವುದು), ಎಮರ್ಜೆನ್ಸಿ ಎಸ್ಎಂಎಸ್, ಜಿಯೋ ಫೆನ್ಸಿಂಗ್, ಟೈಮ್ ಫೆನ್ಸಿಂಗ್ ಅಲರ್ಟ್ ಮತ್ತು ವ್ಯಾಲೆಟ್ ಮೋಡ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕನೆಕ್ಟೆಡ್ ಫೀಚರ್ಸ್ ಅನ್ನು ಈಗಾಗಲೇ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯಲ್ಲಿ ಪರೀಕ್ಷಾರ್ಥವಾಗಿ ಜೋಡಣೆ ಮಾಡಿದ್ದು, ಇದೀಗ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಆಲ್‌ಟ್ರೊಜ್ ಐಟರ್ಬೊ ಮತ್ತು ಸಫಾರಿ ಕಾರು ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಇನ್ನು ಹೊಸ ಸಫಾರಿ ಕಾರಿನಲ್ಲಿ ಹ್ಯಾರಿಯರ್ ಮಾದರಿಯಲ್ಲೇ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದ್ದು, ಹೊಸ ಎಂಜಿನ್‌ನಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಸಫಾರಿ

ಈ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿರುವ ಹೊಸ ಸಫಾರಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ. 23 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದ್ದು, ನಾಳೆ ನಡೆಯಲಿರುವ ಅನಾವರಣ ಕಾರ್ಯಕ್ರಮದಲ್ಲಿ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

Most Read Articles

Kannada
English summary
2021 Tata Safari Reaches Dealerships Ahead Of Unveil. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X