ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್ ಕಾರು

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು 2021ರ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು ಡೀಲರ್‌ಶಿಪ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಸ್ಪೈ ಚಿತ್ರಗಳನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಈ ಹೊಸ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ, ಈ ಕಾರು ವೈಟ್ ಮತ್ತು ಬ್ಲ್ಯಾಕ್ ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳನ್ನು ಒಳಗೊಂಡಿರುತ್ತದೆ. ಹೊಸ ಟಾಟಾ ಟಿಯಾಗೋ ಎನ್‌ಆರ್‌ಜಿ ಎಂಟ್ರಿ ಲೆವೆಲ್ ಮಾದರಿಯನ್ನು 2018 ಮತ್ತು 2020ರ ನಡುವೆ ಬುಚ್, ಕ್ರಾಸ್‌ಒವರ್ ಮಾದರಿಯಾಗಿ ಮಾರಾಟದಲ್ಲಿತ್ತು.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

2020ರ ಆರಂಭದಲ್ಲಿ ಟಿಯಾಗೋ ಫೇಸ್‌ಲಿಫ್ಟ್ ಮಾರಾಟಕ್ಕೆ ಬಂದಾಗ ಕಂಪನಿಯು ತನ್ನ ಎನ್‌ಆರ್‌ಜಿ ಮಾದರಿಯನ್ನು ಸಾಲಿನಿಂದ ಕಾರನ್ನು ಕೈಬಿಟ್ಟಿತು. ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್ ಕಾರು ಒರಟು ಲುಕ್ ಹಾಗೂ ಎಸ್‌ಯುವಿ ಸ್ಟೈಲಿಂಗ್ ಅಂಶಗಳನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಟಾಟಾ ಟಿಯಾಗೋ ಎನ್‌ಆರ್‌ಜಿ ಬಾಡಿ ಕ್ಲಾಡಿಂಗ್, ಟೇಲ್‌ಗೇಟ್‌ನಲ್ಲಿ ಬ್ಲಾಕ್ ಪ್ಲಾಸ್ಟಿಕ್ ಅಂಶ ಹಾಗೂ ಎಸ್‌ಯುವಿಯಂತೆ ಕಾಣಲು ರಿ-ಡಿಸೈನ್ ಮಾಡಲಾದ ವ್ಹೀಲ್'ಗಳನ್ನು ಪಡೆಯುವ ಸಾಧ್ಯತೆಗಳಿವೆ. ಈ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಹೊಸ ಟಿಯಾಗೋದ ಸ್ಟ್ಯಾಂಡರ್ಡ್ ಮಾದರಿಯು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಹೊಸ ಮಾದರಿಯ ವಿನ್ಯಾಸವು ಸ್ಟಾಂಡರ್ಡ್ ಟಾಟಾ ಟಿಯಾಗೊ ಮಾದರಿಯನ್ನು ಹೋಲುತ್ತದೆ. ಆದರೆ ಟಿಯಾಗೋ ಎನ್‌ಆರ್‌ಜಿ ಆವೃತ್ತಿಯು ಎಸಿ ವೆಂಟ್ಸ್ ಹಾಗೂ ಗೇರ್ ಲಿವರ್ ಸುತ್ತ ಕಾಂಟ್ರಾಸ್ಟ್ ಆರೆಂಜ್ ಕಲರ್ ಫಿನಿಶಿಂಗ್ ಹೊಂದಿರಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಹೊಸ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟ್ ಕಾರು ಅಪ್ ಹೊಲೆಸ್ಟರಿ ಇರಲಿದ್ದು, ಫ್ಯಾಬ್ರಿಕ್ ಮೇಲೆ ಟ್ರೈ ಆರೋ ವಿನ್ಯಾಸ ಅಂಶಗಳನ್ನು ಬಳಸಬಹುದು. ಫೀಚರ್'ಗಳ ದೃಷ್ಟಿಯಿಂದಲೂ ಹೊಸ ಮಾದರಿಯು ಸ್ಟಾಂಡರ್ಡ್ ಮಾದರಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಇದರಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಹರ್ಮನ್ ಸೌಂಡ್ ಸಿಸ್ಟಂ, ರಿಮೋಟ್ ಲಾಕಿಂಗ್/ಅನ್ ಲಾಕಿಂಗ್ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಟಾಟಾ ಮೋಟಾರ್ಸ್ ಕಂಪನಿಯು 1.2 ಲೀಟರ್ ರೆವೊಟ್ರಾನ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 86 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ಫೇಸ್‌ಲಿಫ್ಟೆಡ್ ಕಾರು

ಇನ್ನು ಸುರಕ್ಷತಾ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ ಈ ಕಾರು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಕ್ಯಾಮರಾ ಹೊಂದಿರುವ ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಪಡೆಯುವ ಸಾಧ್ಯತೆಗಳಿವೆ.

Most Read Articles

Kannada
English summary
Tata Tiago NRG Facelift Spotted At Dealership. Read In Kannada.
Story first published: Friday, July 30, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X