ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ದುಬೈನಂತಹ ಶ್ರೀಮಂತ ರಾಷ್ಟ್ರದ ಪೊಲೀಸ್ ಪಡೆಯ ಬಳಿ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರುಗಳಿವೆ. ಇದೀಗ ದುಬೈ ಪೊಲೀಸ್ ಪಡೆಯ ಕಾರುಗಳ ಸರಣಿಗೆ ಐಕಾನಿಕ್ ಆಫ್-ರೋಡ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಹೊಸ ಮಾದರಿಯು ಕೂಡ ಸೇರಿಕೊಂಡಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಜಪಾನ್ ಮೂಲದ ಟೊಯೊಟಾ ಕಂಪನಿಯು ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(300 ಸೀರಿಸ್) ಎಸ್‍ಯುವಿಯನ್ನು ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿತ್ತು. ಇನ್ನು ದುಬೈ ಪೊಲೀಸ್ ಪಡೆ ಸೇರಿದ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ 300 ಚಿತ್ರದಲ್ಲಿ, ಇದರ ಬಾನೆಟ್ ಮಧ್ಯದಲ್ಲಿ ಹಸಿರು ಬಣ್ಣವನ್ನು ನೀಡಲಾಗಿದೆ. ಇನ್ನು ಇದರ ಮುಂಭಾಗ ಮತ್ತು ಸೈಡ್ ಫ್ರೊಪೈಲ್ ನಲ್ಲಿ ಪೊಲೀಸ್ ಎಂದು ಬರೆಯಲಾಗಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ದುಬೈ ಸೇರಿದಂತೆ ಇತರ ಅರಬ್ ರಾಷ್ಟ್ರಗಳಲ್ಲಿ ಲ್ಯಾಂಡ್ ಕ್ರೂಸರ್ ಎಸ್‍ಯುವಿಗೆ ಭರ್ಜರಿ ಬೇಡಿಕೆಯನ್ನು ಹೊಂದಿದೆ. ಈ ಅತ್ಯುತ್ತಮ ಆಫ್-ರೋಡ್ ವಾಹನವಾಗಿರುವ ಲ್ಯಾಂಡ್ ಕ್ರೂಸರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ವರ್ಗವಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಲ್ಯಾಂಡ್ ಕ್ರೂಸರ್ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ಎಸ್‍ಯುವಿಗಳಲ್ಲಿ ಒಂದಾಗಿದೆ. ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ನ್ಯೂ ಜನರೇಷನ್ ಮಾದರಿಯನ್ನು ಹಿಂದಿನದಕ್ಕಿಂತ ಹೆಚ್ಚು ಆಧುನಿಕ ಮತ್ತು ಪ್ರೀಮಿಯಂ ಮಾದರಿಯಾಗಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಲ್ಯಾಂಡ್ ಕ್ರೂಸರ್ ಬ್ರ್ಯಾಂಡ್ ಹೆಸರು ಇಂದಿಗೂ ಜನಪ್ರಿಯ ಬ್ರ್ಯಾಂಡ್ ಆಗಿದೆ. ಟೊಯೊಟಾ ಕಂಪನಿಯು ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ಇದುವರೆಗೂ 170 ದೇಶಗಳಲ್ಲಿ ಲ್ಯಾಂಡ್ ಕ್ರೂಸರ್‌ನ 1.04 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಬ್ರ್ಯಾಂಡ್‌ನ ಹೊಸ ಪ್ರಮುಖ ಎಸ್ಯುವಿ ಹೆಚ್ಚು ಪ್ರಮುಖವಾದ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್‌ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಕೂಡ ಪಡೆಯುತ್ತದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ ದೊಡ್ಡ ಟ್ಯಾಬ್ಲೆಟ್ ಶೈಲಿಯ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಪ್ರಸ್ತುತ ಮಾದರಿಯಂತಲ್ಲದೆ 4ಹೈ ಮತ್ತು 4ಲೋ ಮೋಡ್‌ಗಳನ್ನು ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಇದರೊಂದಿಗೆ ಫಿಸಿಕಲ್ ಡಯಲ್‌ಗಳನ್ನು ಹೊಂದಿರುವ ಗೇಜ್ ಕ್ಲಸ್ಟರ್ ಮತ್ತು ಇನ್ಫೋ ಡಿಸ್ ಪ್ಲೇ, ಹೀಟಡ್ ಸೀಟುಗಳು, ಜೆಬಿಎಲ್ ಆಡಿಯೋ, ಟೊಯೊಟಾ ಸೇಫ್ಟಿ ಸೆನ್ಸ್ ಪ್ಯಾಕೇಜ್ ಮತ್ತು ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ವಿಶ್ವದ ಮೊದಲ ಎಲೆಕ್ಟ್ರಾನಿಕ್ ಕೈನೆಟಿಕ್ ಡೈನಾಮಿಕ್ ಸಸ್ಪೆಂಕ್ಷನ್ ಸಿಸ್ಟಂ (ಇ-ಕೆಡಿಎಸ್ಎಸ್) ಅನ್ನು ಒಳಗೊಂಡಿದೆ. ಮಲ್ಟಿ-ಟೆರೈನ್ ಮಾನಿಟರ್ ಅನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ,

ದುಬೈ ಪೊಲೀಸ್ ಪಡೆ ಸೇರಿದ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ

2022ರ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ. ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

Most Read Articles

Kannada
Read more on ಟೊಯೊಟಾ toyota
English summary
New Toyota Land Cruiser 300 Added To Dubai Police Fleet. Read In Kannada.
Story first published: Monday, June 21, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X