ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಫಾಡಾ) 2021ರ ಮೇ ತಿಂಗಳ ಹೊಸ ವಾಹನ ನೋಂದಣಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಕಳೆದ ತಿಂಗಳು ಒಟ್ಟು 5,35,855 ಹೊಸ ವಾಹನಗಳು ನೋಂದಣಿಯಾಗಿವೆ.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಈ ಪ್ರಮಾಣವು 2021ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ 55%ನಷ್ಟು ಕಡಿಮೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಒಟ್ಟು 11,85,374 ಹೊಸ ವಾಹನಗಳನ್ನು ನೋಂದಾಯಿಸಲಾಗಿತ್ತು. ಕರೋನಾ ವೈರಸ್‌ ಎರಡನೇ ಅಲೆಯ ಕಾರಣಕ್ಕೆ ಭಾರತದ ಹಲವು ರಾಜ್ಯಗಳಲ್ಲಿ ಕಳೆದ ತಿಂಗಳು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಲಾಕ್‌ಡೌನ್'ನಿಂದಾಗಿ ದೇಶಾದ್ಯಂತ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಉಂಟಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ 2020ರ ಮೇ ತಿಂಗಳಿನಲ್ಲಿಯೂ ಹೊಸ ವಾಹನಗಳ ಮಾರಾಟವು ಕಡಿಮೆಯಾಗಿತ್ತು.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಆದರೆ 2021ರ ಮೇ ತಿಂಗಳ ಮಾರಾಟವನ್ನು ಕಳೆದ ವರ್ಷದ ಮೇ ತಿಂಗಳ ಮಾರಾಟದೊಂದಿಗೆ ಹೋಲಿಸುವುದು ಸೂಕ್ತವಲ್ಲ. 2020ರ ಮೇ ತಿಂಗಳಿನಲ್ಲಿ ಒಟ್ಟು 2,02,697 ಹೊಸ ವಾಹನಗಳನ್ನು ನೋಂದಾಯಿಸಲಾಗಿತ್ತು.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಇನ್ನು 2019ರ ಮೇ ತಿಂಗಳಿನಲ್ಲಿ ಒಟ್ಟು 18,22,566 ಹೊಸ ವಾಹನಗಳನ್ನು ಮಾರಾಟ ಮಾಡಲಾಗಿತ್ತು. 2021ರ ಮೇ ತಿಂಗಳ ವಾಹನ ಮಾರಾಟದ ಬಗ್ಗೆ ಫಾಡಾ ಅಧ್ಯಕ್ಷರಾದ ವಿಂಕೇಶ್ ಗುಲಾಟಿ ಮಾಹಿತಿ ನೀಡಿದ್ದಾರೆ.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಕರೋನಾ ವೈರಸ್ ಎರಡನೇ ಅಲೆ ಇಡೀ ದೇಶದ ಮೇಲೆ ಪರಿಣಾಮ ಬೀರಿದೆ. ಈ ಮಹಾಮಾರಿ ವೈರಸ್ ಯಾವುದೋ ಒಂದು ಉದ್ಯಮದ ಮೇಲೆ ಮಾತ್ರ ಪರಿಣಾಮ ಬೀರದೇ ಬಹುತೇಕ ಎಲ್ಲಾ ಉದ್ಯಮಗಳು ತತ್ತರಿಸುವಂತೆ ಮಾಡಿದೆ.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ನಗರ ಪ್ರದೇಶಗಳಲ್ಲಿರುವ ಮಾರುಕಟ್ಟೆಗಳ ಜೊತೆಗೆ ಗ್ರಾಮೀಣ ಪ್ರದೇಶದ ಮಾರುಕಟ್ಟೆ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಈಗ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ಮೇ ತಿಂಗಳ ಮಾರಾಟದಲ್ಲಿ 55%ನಷ್ಟು ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ದ್ವಿಚಕ್ರ ವಾಹನಗಳಲ್ಲಿ 53%ನಷ್ಟು, ತ್ರಿ ಚಕ್ರ ವಾಹನಗಳಲ್ಲಿ 76%ನಷ್ಟು, ವೈಯಕ್ತಿಕ ವಾಹನಗಳಲ್ಲಿ 59%ನಷ್ಟು, ಟ್ರಾಕ್ಟರುಗಳಲ್ಲಿ 57% ಹಾಗೂ ಕಮರ್ಷಿಯಲ್ ವಾಹನಗಳಲ್ಲಿ 66%ನಷ್ಟು ಕುಸಿತ ದಾಖಲಾಗಿದೆ.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಈಗ ಜಾರಿಯಲ್ಲಿರುವ ಲಾಕ್‌ಡೌನ್ 30-45 ದಿನಗಳಿಂದ ಮುಂದುವರೆದಿರುವುದರಿಂದ ಹಾಗೂ ದಕ್ಷಿಣ ಭಾರತದಲ್ಲಿ ಮುಂದುವರಿಯುತ್ತಿರುವುದರಿಂದ ಮಾರಾಟ ಪ್ರಮಾಣವು ಕಡಿಮೆಯಾಗಿ ಬಹುತೇಕ ಎಲ್ಲಾ ವಾಹನ ವಿತರಕರಿಗೆ ಆದಾಯವೆಂಬುದು ಮರೀಚಿಕೆಯಾಗಿದೆ ಎಂದು ಫಾಡಾ ಹೇಳಿದೆ.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಈ ಕಾರಣದಿಂದಾಗಿ, ವಿತರಕರು ತಮ್ಮ ಸಾಲದ ಬಾಕಿ ಕಂತುಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ವಿತರಕರಿಗೆ ವಹಿವಾಟಿನ ಮೇಲೆ ಯಾವುದೇ ಮಿತಿಯಿಲ್ಲದೆ 90 ದಿನಗಳ ಮೊರಾಟೊರಿಯಂ ನೀಡಬೇಕು ಎಂದು ಫಾಡಾ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದೆ.

ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನ ಮಾರಾಟ

ಆಟೋ ರಿಟೇಲ್ ವಹಿವಾಟು, ಹಣಕಾಸಿನ ಸಂಸ್ಥೆಗಳಿಂದ ದಾಸ್ತಾನು ಧನಸಹಾಯದ ಸಂದರ್ಭದಲ್ಲಿ 30-45 ದಿನಗಳವರೆಗೆ (ಬ್ಯಾಂಕ್‌ನಿಂದ ಬ್ಯಾಂಕ್ ಆಧಾರದಲ್ಲಿ) ವಾಹನ ಬಿಡಿ ಭಾಗ ಕಂಪನಿಗಳಿದ ವಾಹನಗಳನ್ನು ಖರೀದಿಸುವ ಅಗತ್ಯವಿರುವ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

Most Read Articles

Kannada
English summary
New vehicles sales declines in May 2021 as per FADA sales report. Read in Kannada.
Story first published: Friday, June 11, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X