ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಜರ್ಮನಿ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಸರಣಿಯಲ್ಲಿ ಹಲವಾರು ಜನಪ್ರಿಯ ಕಾರುಗಳನ್ನು ಹೊಂದಿದೆ. ಆದರೆ ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಅಮರೋಕ್ ಪಿಕ್ಅಪ್ ಟ್ರಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇದರ ಭಾಗವಾಗಿ ಇದೀಗ ಫೋಕ್ಸ್‌ವ್ಯಾಗನ್ ಇದೀಗ ಹೊಸ ಅಮರೋಕ್ ಪಿಕ್ಅಪ್ ಟ್ರಕ್ ಮಾದರಿಯ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕೆಸರು ನೀರುಗಳಲ್ಲಿ ಮುನ್ನುಗುವ ಟೀಸರ್ ಚಿತ್ರವು ಆಕರ್ಷಕವಾಗಿದೆ. ಟೀಸರ್ ಚಿತ್ರದಲ್ಲಿ ಕಾಣುವಂತೆ ಪವರ್ ಫುಲ್ ಮಾದರಿಯಾಗಿರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪಿಕ್ಅಪ್ ಟ್ರಕ್ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಈ ಹೊಸ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಈ ಹೊಸ ಫೋಕ್ಸ್‌ವ್ಯಾಗನ್ ಅಮರೋಕ್ ಮಾದರಿಯು ಹೊಸ ಫೋರ್ಡ್ ರೇಂಜರ್ ಪಿಕ್ಅಪ್ ಟ್ರಕ್ ಅನ್ನು ಆಧರಿಸಿದೆ. ಇತ್ತೀಚೆಗೆ ಫೋರ್ಡ್ ಕಂಪನಿಯು ಹೊಸ ನವೀಕರಣಗಳೊಂದಿಗೆ ರೇಂಜರ್ ಪಿಕ್ಅಪ್ ಟ್ರಕ್ ಅನ್ನು ಅನಾವರಣಗೊಳಿಸಲಾಗಿತ್ತು.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಹೊಸ ಫೋಕ್ಸ್‌ವ್ಯಾಗನ್ ಪಿಕ್ಅಪ್ ಟ್ರಕ್ ಟೀಸರ್ ಚಿತ್ರದಲ್ಲಿ ವೃತ್ತಾಕಾರದ ಆಕಾರದಲ್ಲಿ ಕಂಪನಿಯ ಲೋಗೋದೊಂದಿಗೆ ಅಗಲವಾದ ಮುಂಭಾಗದ ಗ್ರಿಲ್, ಬಾನೆಟ್‌ನಲ್ಲಿ ಟ್ವಿನ್ ಕ್ರೀಸ್‌ಗಳು, ಬದಿಯಲ್ಲಿ ವಿಸ್ತರಿಸಿದ ಅಕ್ಷರ ಸಾಲುಗಳು. ಮತ್ತು ಮುಂಭಾಗದ ಫೆಂಡರ್‌ಗಳನ್ನು ಹೊಂದಿವೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇದರೊಂದಿಗೆ ದಪ್ಪನಾದ ಸೈಡ್ ಬಾಡಿ ಕ್ಲಾಡಿಂಗ್, ಪ್ರಮುಖ ರೂಫ್ ರೈಲ್‌ಗಳು, ವ್ಹೀಲ್ ಅರ್ಚಾಸ್ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಟೋಯಿಂಗ್ ವುಕ್ ಗಳನ್ನು ಹೊಂದಿವೆ. ಒಳಭಾಗದಲ್ಲಿಯೂ ಸಹ, ವೋಕ್ಸ್‌ವ್ಯಾಗನ್ ಡಾರ್ಕ್ ಅಪ್ಹೋಲ್ಸ್ಟರಿ ಶೇಡ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮುಖ್ಯ ಸ್ಕ್ರೀನ್ ಪೋರ್ಟ್ರೇಟ್ ಮೋಡ್‌ನಲ್ಲಿದೆ ಮತ್ತು ಅದರ ಅಡಿಯಲ್ಲಿ ಫಿಸಿಕಲ್ ಬಟನ್‌ಗಳನ್ನು ನೀಡಿದೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಪಿಕ್ಅಪ್ ಟ್ರಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಮಾದರಿಯಲ್ಲಿ ಎಲ್ಇಡಿ ಹೆಡ್‌ಲೈಟ್‌ಗಳು, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್ ಮತ್ತು ಪವರ್ ಸಾಕೆಟ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇದರೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ. ಇನ್ನು ಇದರಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಕಫ್ ಪ್ಲೇಟ್‌ಗಳು, ಅಂಬೈಟ್ ಲೈಟಿಂಗ್, ಎಲೆಕ್ಟ್ರಾನಿಕ್ ಶಿಫ್ಟ್-ಆನ್-ಫ್ಲೈ ಸಿಸ್ಟಮ್ ಅಥವಾ ಹೆಚ್ಚು ಅತ್ಯಾಧುನಿಕ ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಸಿಸ್ಟಮ್ ಅನ್ನು ಎರಡು ಫ್ಹೋರ್-ವ್ಹೀಲ್-ಡ್ರೈವ್ ಸೆಟಪ್‌ಗಳಿಂದ ಆಯ್ಕೆ ಮಾಡುವ ಆಯ್ಕೆಯನ್ನು ಕೂಡ ನೀಡಬಹುದು.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇನ್ನು ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಹೊಸ ಫೋಕ್ಸ್‌ವ್ಯಾಗನ್ ಅಮರೋಕ್ ಪಿಕ್ಅಪ್ ಟ್ರಕ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ ಆದರೆ ಸ್ಪೆಕ್ಸ್ ಅನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇಂಜಿನ್ ಆಯ್ಕೆಗಳನ್ನು ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಮತ್ತು ಆಯ್ಕೆಯ 10-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್ ಅನ್ನು ಜೋಡಿಸಬಹುದು ಎಂದು ವರದಿಗಳು ಸೂಚಿಸುತ್ತವೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇದರೊಂದಿಗೆ ಫೋಕ್ಸ್‌ವ್ಯಾಗನ್ ತನ್ನ ಹೊಸ ಪೊಲೊ ಟ್ರ್ಯಾಕ್ ಕಾರನ್ನು ಕೂಡ ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಪೊಲೊ ಟ್ರ್ಯಾಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಪೊಲೊ ಟ್ರ್ಯಾಕ್ ಮಾದರಿಯು ಫೋಕ್ಸ್‌ವ್ಯಾಗನ್ ಕಂಪನಿಯಿಂದ ಮಾರುಕಟ್ಟೆಗೆ ಮೊದಲ ಕಾಂಪ್ಯಾಕ್ಟ್ ಫ್ಯಾಮಿಲಿ ಕಾರ್ ಆಗಿರುತ್ತದೆ. ಫೋಕ್ಸ್‌ವ್ಯಾಗನ್ ದಕ್ಷಿಣ ಅಮೆರಿಕಾದಲ್ಲಿ ಸುಮಾರು 1 ಬಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿತು.2013 ರಲ್ಲಿ ಹೆಚ್ಚಿನ ಆರ್ಥಿಕ ಹಿಂಜರಿತದ ನಂತರ, ಈ ಹೂಡಿಕೆಯು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಪುನರಾಗಮನವನ್ನು ಸೂಚಿಸುತ್ತದೆ ಎಂದು ಕಂಪನಿ ಹೇಳಿದೆ. ವಾಹನ ತಯಾರಕರು 2021 ರ ಹಣಕಾಸು ವರ್ಷದಲ್ಲಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಟಿಗ್ವಾನ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್(Volkswagen Tiguan) ಎಸ್‍ಯುವಿ ಮಿಡ್-ಲೈಫ್ ಫೇಸ್‌ಲಿಫ್ಟ್‌ ನವೀಕರಣವನ್ನು ಪಡೆದುಕೊಂಡಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್‌ ಎಸ್‍ಯುವಿಯ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.31.99 ಲಕ್ಷವಾಗಿದೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಈ ಹೊಸ ಟಿಗ್ವಾನ್ 5-ಸೀಟರ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಭಾರತದಾದ್ಯಂತ ಎಲ್ಲಾ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಪ್ರಾರಂಭಿಸಿದೆ. ಈ ಪ್ರೀಮಿಯಂ ಎಸ್‌ಯುವಿಯ ಟೆಸ್ಟ್ ಡ್ರೈವ್‌ಗಳು ಡಿಸೆಂಬರ್ 10 ರಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಪ್ರಾರಂಭವಾಗಲಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಇತ್ತೀಚೆಗೆ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯನ್ನು ಭಾರತದಲ್ಲಿ ಸ್ಥಗಿತಗೊಳಿಸಿದೆ. ಇದಿಗ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಟಿಗ್ವಾನ್ 5-ಸೀಟರ್ ಅನ್ನು ಹೊಸ ಪ್ರಮುಖ ಎಸ್‌ಯುವಿಯನ್ನಾಗಿ ಮಾಡಿದೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಔರಂಗಾಬಾದ್ ನಲ್ಲಿರುವ ಘಟಕದಲ್ಲಿ ಹೊಸ ಟಿಗ್ವಾನ್ ಮಾದರಿಯ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಹೊಸ ಟಿಗ್ವಾನ್ ಫೇಸ್‌ಲಿಫ್ಟ್‌ ಎಸ್‌‍ಯುವಿಯು ತೀಕ್ಷ್ಣವಾದ ವಿನ್ಯಾಸ, ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಟಿಗ್ವಾನ್ MQB ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ 5-ಸೀಟರ್ ಎಸ್‍ಯುವಿ ಮಾದರಿಯಾಗಿದೆ. ಈ ಹೊಸ ಎಸ್‌ಯುವಿ ಡೀಸೆಲ್ ಎಂಜಿನ್ ಅನ್ನು ಕೈಬಿಡುತ್ತದೆ ಮತ್ತು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ.

ಬಿಡುಗಡೆಯಾಗಲಿದೆ ಹೊಸ Volkswagen Amarok ಪಿಕ್ಅಪ್ ಟ್ರಕ್

ಹೊಸ ಅಮರೋಕ್‌ನ ಅಧಿಕೃತ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ನಿಗದಿಪಡಿಸಲಾಗಿದೆ ಮತ್ತು ವಾಹನವನ್ನು ದಕ್ಷಿಣ ಆಫ್ರಿಕಾದ ವೋಕ್ಸ್‌ವ್ಯಾಗನ್ ಸ್ಥಾವರದಲ್ಲಿ ದಕ್ಷಿಣ ಅಮೇರಿಕಾ, ಯುರೋಪ್ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗಾಗಿ ತಯಾರಿಸಲಾಗುವುದು. ಈ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪಿಕ್ಅಪ್ ಟ್ರಕ್ ಮಾದರಿಗಳಿಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ.

Most Read Articles

Kannada
English summary
New volkswagen amarok teased features design spec find here more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X