ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರನ್ನು ಅನಾವರಣಗೊಳಿಸಿದೆ. ಜಿಟಿಐ ಸರಣಿಯ ಆರನೇ ವಾರ್ಷಿಕೋತ್ಸವದ ಭಾಗವಾಗಿ ಲಿಮಿಟೆಡ್ ಎಡಿಷನ್ ಆಗಿ ಈ ಮಾದರಿಯನ್ನು ಪರಿಚಯಿಸಲಾಗುತ್ತದೆ.

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಫೋಕ್ಸ್‌ವ್ಯಾಗನ್ ಕಂಪನಿಯು 1996ರಿಂದ ಇಲ್ಲಿಯವರೆಗೂ ಪ್ರತಿ ಪ್ರತಿ ಐದು ವರ್ಷಗಳಿಗೊಮ್ಮೆ ಇದೇ ರೀತಿಯ ಲಿಮಿಟೆಡ್ ಎಡಿಷನ್ ಅನ್ನು ಪರಿಚಯಿಸುತ್ತಾರೆ. ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರಿನ ಮಾರಾಟವನ್ನು ಮುಂದಿನ ತಿಂಗಳು ಪ್ರಾರಂಭಿಸಬಹುದು. ಈ ಕಾರಿನಲ್ಲಿ 45 ಎಂಬ ಬ್ಯಾಡ್ಜ್ ಅನ್ನು ಹಲವು ಕಡೆಗಳಲ್ಲಿ ನೀಡಲಾಗಿದೆ.

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರಿನಲ್ಲಿ 19-ಇಂಚಿನ 'ಸ್ಕಾಟ್ಸ್‌ಡೇಲ್' ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಐಕಾನಿಕ್ ಜಿಟಿಐ ಮಾದರಿಗಳಿಗೆ ಗೌರವವಾಗಿ ರಿಮ್‌ನ ಸುತ್ತಲೂ ಕಿರಿದಾದ ಕೆಂಪು ಪಿನ್‌ಸ್ಟ್ರೈಪ್ ಅನ್ನು ನೀಡಿದೆ. ಸ್ಟೀಯರಿಂಗ್ ವ್ಹೀಲ್ ನಲ್ಲಿ 45 ಬ್ಯಾಡ್ಜ್ ಅನ್ನು ಆಳವಡಿಸಲಾಗಿದೆ.

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಈ ಕ್ಲಬ್‌ಸ್ಪೋರ್ಟ್ ಸ್ಪೆಷಲ್ ಎಡಿಷನ್ ನಲ್ಲಿ 2.0-ಲೀಟರ್, ನಾಲ್ಕು-ಸಿಲಿಂಡರ್ ಟರ್ಬೊ-ಪೆಟ್ರೋಲ್‌ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 300 ಬಿಹೆಚ್‍ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಇನ್ನು ಈ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು ಕೇವಲ 5.6 ಸೆಕೆಂಡುಗಳಲ್ಲಿ 0 ದಿಂದ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು ವಿಶೇಷ ರೇಸ್ ಪ್ಯಾಕೇಜ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಸಜ್ಜುಗೊಂಡಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಇದು ಇತರ ಜಿಟಿಐ ಮಾದರಿಗಳಲ್ಲಿ ಇದು ಲಭ್ಯವಿಲ್ಲ, ಅಕ್ರಾಪೊವಿಕ್ ಸ್ಪೋರ್ಟ್ಸ್ ಎಕ್ಸಾಸ್ಟ್ ಸಿಸ್ಟಂ ಅನ್ನು ತರುತ್ತದೆ. ಇನ್ನು ಈ ಕಾರಿನ ಟಾಪ್ ಸ್ಪೀಡ್ ಅನ್ನು ಗಂಟೆಗೆ 250 ಕಿ.ಮೀ.ಗೆ ಸೀಮಿತಗೊಳಿಸಿದ್ದಾರೆ. ಈ ಜಿಟಿಐ ಕ್ಲಬ್‌ಸ್ಪೋರ್ಟ್ ಕಾರಿನ ಟಾಪ್-ವೆರಿಯೆಂಟ್ ನಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳನ್ನು ಅನ್ನು ಅಳವಡಿಸಿದ್ದಾರೆ.

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಇನ್ನು ಭಾರತೀಯ ಮಾರುಕಟ್ಟೆಗೆ ಸಂಬಂದಿಸಿದಂತೆ, ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಟಿಗ್ವಾನ್ ಫೇಸ್‍‍ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟಿಗ್ವಾನ್ ಎಸ್‍ಯುವಿಯು ಭಾರತದಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಫೋಕ್ಸ್‌ವ್ಯಾಗನ್ ಕಂಪನಿ ಈ ಹೊಸ ಟಿಗ್ವಾನ್ 5 ಸೀಟರ್ ಅನ್ನು ಇದೇ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ಟಿಗ್ವಾನ್ ಫೇಸ್‌ಲಿಫ್ಟ್ ಅನ್ನು 2020ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕೃತವಾಅನಾವರಣಗೊಳಿಸಲಾಯಿತು. ಹಿಂದಿನ ಮಾದರಿ ಟಿಗ್ವಾನ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಾಗ 6 ದಶಲಕ್ಷಕ್ಕೂ ಹೆಚ್ಚಿನ ಯುನಿಟ್ ಗಳು ಮಾರಾಟವಾಗಿತ್ತು.

ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರು

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್‌ಸ್ಪೋರ್ಟ್ 45 ಕಾರನ್ನು ಭಾರತೀಯ ಮಾರುಕಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಆದರೆ ಮುಂದಿನ ತಿಂಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಈ ಸ್ಪೆಷಲ್ ಎಡಿಷನ್ ಅನ್ನು ಮಾರಟಗೊಳಿಸಲಾಗುತದೆ.

Most Read Articles

Kannada
English summary
Volkswagen Golf GTI Clubsport 45 Revealed In Kananda. Read In Kannada.
Story first published: Saturday, March 6, 2021, 21:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X