ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ನ್ಯೂ ಜನರೇಷನ್ ಪೊಲೊ ಜಿಟಿಐ ಕಾರನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಕಾರಿನ ಫಸ್ಟ್ ಲುಕ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಫೋಕ್ಸ್‌ವ್ಯಾಗನ್ ಹೊಸ ಪೊಲೊ ಜಿಟಿಐನ ಸ್ಕೇಚ್ ಚಿತ್ರದಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ವೋಕ್ಸ್‌ವ್ಯಾಗನ್ ಕಂಪನಿಯು ಇತ್ತೀಚೆಗೆ ಫೋಕ್ಸ್‌ವ್ಯಾಗನ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಆರನೇ ತಲೆಮಾರಿನ ಪೊಲೊ ಕಾರಿನ ಫೇಸ್‌ಲಿಫ್ಟೆಡ್ ಮಾದರಿಯನ್ನು ಅನಾವರಣಗೊಳಿಸಿತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಹೊಸ ಫೋಕ್ಸ್‌ವ್ಯಾಗನ್ ಜಿಟಿಐ ಕಾರನ್ನು ಅಧಿಕೃತವಾಗಿ ಮುಂದಿನ ತಿಂಗಳ ಅಂತ್ಯದಲ್ಲಿ ಅನಾವರಣಗೊಳಿಸುತ್ತದೆ. ಪೊಲೊ ಜಿಟಿಐ ಅದೇ ಎಂಕ್ಯೂಬಿ ಎ0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಈ ಕಾರು 4.05 ಮೀಟರ್ ಉದ್ದ, 1.75 ಮೀಟರ್ ಅಗಲ ಮತ್ತು 1.45 ಮೀಟರ್ ಎತ್ತರವನ್ನು ಹೊಂದಿರುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ವ್ಹೀಲ್‌ಬೇಸ್ ಸಾಮಾನ್ಯ ಪೊಲೊ ಕಾರಿನಂತೆ 256 ಮೀಟರ್‌ ಇರುತ್ತದೆ ಇನ್ನು ಕಾರಿನ ಲಗೇಜ್ ಸ್ಪೇಸ್ ಸಾಮರ್ಥ್ಯವು 351 ಲೀಟರ್ ಆಗಿರುತ್ತದೆ. ವಿನ್ಯಾಸದ ವಿಷಯದಲ್ಲಿ, ಪೋಲೊ ಜಿಟಿಐ ಗಾಲ್ಫ್ ಜಿಟಿಐನಲ್ಲಿ ಕಂಡುಬರುವ ಅದೇ ವಿನ್ಯಾಸ ಶೈಲಿಯನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಸ್ಕೆಚ್ ಚಿತ್ರದಲ್ಲಿ ಪೊಲೊ ಜಿಟಿಐ ಅಗ್ರೇಸಿವ್ ಲುಕ್ ಅನ್ನು ಹೊಂದಿರುತ್ತದೆ. ಮುಂಭಾಗ ಹನಿಕಾಬ್ ಏರ್ ಡ್ಯಾಮ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಮತ್ತು ಹೆಡ್ ಲೈಟ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಇನ್ನು ಗ್ರಿಲ್ ನಲ್ಲಿ ವಿಶಿಷ್ಟವಾದ ಜಿಟಿಐ ಲೋಗೊವನ್ನು ಹೊಂದಿದೆ. ಹಿಂಭಾಗದಲ್ಲಿ ಡಿಫ್ಯೂಸರ್, ಸ್ಪಾಯ್ಲರ್ ಮತ್ತು ಡಬಲ್ ರೌಂಡ್ ಟೈಲ್‌ಪೈಪ್‌ಗಳಿವೆ. ಪೋಲೊ ಜಿಟಿಐನಲ್ಲಿನ ಅಲಾಯ್ ವ್ಹೀಲ್ ಗಳನ್ನು ಗಾತ್ರವು 17 ಇಂಚುಗಳಷ್ಟು ಇರಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಪೊಲೊದ ಸ್ಪೋರ್ಟ್ ಆವೃತ್ತಿಯು ಹೊಸ ಪೊಲೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ ಮತ್ತು ಇದು ತನ್ನ ಸರಣಿಯಲ್ಲಿ ಪ್ರೀಮಿಯಂ ಆವೃತ್ತಿಯಾಗಲಿದೆ. ಇದು ಹೆಚ್ಚಿನ ಟಾರ್ಕ್ ಫ್ರಂಟ್-ವ್ಹೀಲ್ ಡ್ರೈವ್ ಮತ್ತು ಹೊಂದಿಸಲಾದ ಸ್ಪೋರ್ಟ್ಸ್ ಚಾಸಿಸ್ ಪಡೆಯುವ ಸಾಧ್ಯತೆಯಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಇದಲ್ಲದೆ ಇತರ ಪೋಲೊ ರೂಪಾಂತರಗಳಿಗೆ ಹೋಲಿಸಿದರೆ ಇದು ಉತ್ತಮ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸಹ ಭರವಸೆ ನೀಡುತ್ತದೆ. ಒಟ್ಟಾರೆ ಪೊಲೊ ಜಿಟಿಐ ಕಾರಿನ ವಿನ್ಯಾಸವು ಅಗ್ರೇಸಿವ್ ಮತ್ತು ಸ್ಪೋರ್ಟಿ ಆಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಈ ಸಾಮಾನ್ಯ ನ್ಯೂ ಜನರೇಷನ್ ಪೊಲೊ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 80 ಬಿಹೆಚ್‍ಪಿ ಪವರ್ ಮತ್ತು 93 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಎಂಟಿ ಜೊತೆ ಜೋಡಿಸಲ್ಪಟ್ಟಿದೆ. ಇನ್ನು 1.0-ಲೀಟರ್ ಟಿಎಸ್ಐ ಎಂಜಿನ್ ಅನ್ನು ನೀಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು

ಪೊಲೊ ಜಿಟಿಐ ಕಾರಿನ ಒಳಭಾಗದಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ನಿಂದ ಭಿನ್ನವಾಗಿರಲು ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ. ಪೊಲೊ ಜಿಟಿಐ ಸ್ಪೋರ್ಟಿ ಲೆದರ್ ಸ್ಟೀರಿಂಗ್ ವ್ಹೀಲ್ ಮತ್ತು ಗೇರ್ ಸೆಲೆಕ್ಟರ್ ಪಡೆಯುವ ಸಾಧ್ಯತೆಯಿದೆ.

Most Read Articles

Kannada
English summary
2021 Polo GTI Hatchback To Launch Soon. Read In Kannada.
Story first published: Monday, May 10, 2021, 21:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X