2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಫೋಕ್ಸ್‌ವ್ಯಾಗನ್ ತನ್ನ 2021ರ ಪೊಲೊ ಕಾರನ್ನು ಜಾಗಾತಿಕವಾಗಿ ಪರಿಚಯಿಸಲು ಸಜ್ಜಾಗಿದೆ. ಇದರ ಭಾಗವಾಗಿ ಪೊಲೊ ಕಾರಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ಪೊಲೊ ಕಾರಿನ ಹೊಸ ಬಣ್ಣದ ಆಯ್ಕೆ ಮತ್ತು ನವೀಕರಿಸಿದ ಹೆಡ್‌ಲ್ಯಾಂಪ್ ಮಾಹಿತಿಯನ್ನು ಬಹಿರಂಗಪಡಿಸುತ್ತದೆ.

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಸೀಟ್ ಇತ್ತೀಚೆಗೆ ನವೀಕರಿಸಿದ ಐಬಿಜಾ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ, ಇದು ಪೋಲೊ ಹ್ಯಾಚ್‌ಬ್ಯಾಕ್‌ನೊಂದಿಗೆ ಸಾಕಷ್ಟು ಹಂಚಿಕೊಳ್ಳುತ್ತದೆ. ಮಿಡ್-ಲೈಫ್ ಫೇಸ್‌ಲಿಫ್ಟ್ ಪಡೆದಿರುವುದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ನ ಬೇಡಿಕೆ ಹೆಚ್ಚಿಸುತ್ತದೆ. ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ನೊಂದಿಗೆ ತೀಕ್ಷ್ಣವಾದ ಬೈ-ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಎಲ್ಇಡಿ ಸ್ಟ್ರಿಪ್ ಇದೆ, ಅದು ದೊಡ್ಡ ವಿಡಬ್ಲ್ಯೂ ಬ್ಯಾಡ್ಜ್ ನೊಂದಿಗೆ ಗ್ರಿಲ್ ಮೂಲಕ ವಿಸ್ತರಿಸಿದೆ. ಟೀಸರ್‌ನಲ್ಲಿ ಪೊಲೊ ನೇರಳೆ ಬಣ್ಣವನ್ನು ಹೊಂದಿದೆ. ಇನ್ನು ಈ ಕಾರಿನ ಲೈಟ್ ಬಾರ್ ದೊಡ್ಡ ಗಾಲ್ಫ್ ಮಾದರಿಗೆ ಹೋಲುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ನವೀಕರಿಸಿದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ ಲ್ಯಾಂಪ್ ಕ್ಲಸ್ಟರ್ ಮತ್ತು ಮುಂತಾದವುಗಳನ್ನು ಹೊಂದಿರುತ್ತದೆ.

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಒಳಭಾಗದಲ್ಲಿ ಹೊಸ ಬಿಟ್‌ಗಳು ಮತ್ತು ತುಣುಕುಗಳನ್ನು ಹೊಂದುವ ನಿರೀಕ್ಷೆಯಿದೆ. ಇನ್ನು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇತ್ತೀಚಿನ ಕಾರು ಕನೆಕ್ಟಿವಿಟಿ ಫೀಚರ್ ಗಳೊಂದಿಗೆ ಲಭ್ಯವಿರುತ್ತದೆ ಮತ್ತು ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಸಹ ಪರಿಷ್ಕರಿಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಪೊಲೊ ಕಾರು ಕಾಂಪ್ಯಾಕ್ಟ್ ಮಾಡ್ಯುಲರ್ ಎಮ್‌ಕ್ಯೂಬಿ ಎ 0 ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿರಬಹುದು. ಫೋಕ್ಸ್‌ವ್ಯಾಗನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಆಶಿಶ್ ಗುಪ್ತಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ. ಭಾರತದಲ್ಲಿ ಪೊಲೊ ಬಿಡುಗಡೆಯ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದರ ಬೇಡಿಕೆಯ ಪರಿಗಣಿಸಿ ಬಿಡುಗಡೆಗೊಳಿಸಲು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಇಂಡಿಯಾ-ಸ್ಪೆಕ್ ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರು ಸಬ್-4 ಮೀಟರ್ ಉದ್ದವಿರುತ್ತದೆ ಮತ್ತು ಇದು ಸ್ಥಳೀಯ ಎಂಕ್ಯೂಬಿ-ಅಒ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ತಯಾರಿಸಲಾಗುತ್ತದೆ. ಪೊಲೊ ಕಾರು ಹಲವಾರು ಫೀಚರ್ಸ್ ಗಳು ಮತ್ತು ಸುರಕ್ಷತಾ ತಂತ್ರಜ್ಙಾನಗಳನ್ನು ಹೊಂದಿರುತ್ತದೆ.

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಇದು ಹೆಚ್ಚಿನ ಸಾಮರ್ಥ್ಯದ ಉಕ್ಕುಗಳನ್ನು ಬಳಸುತ್ತದೆ. ಅದು ಗಮನಾರ್ಹವಾಗಿ ಹಗುರವಾಗಿರುತ್ತದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಪೊಲೊ ಕಾರಿನ ಹೊರಭಾಗದ ವಿನ್ಯಾಸವು ಜಾಗತಿಕ ಮಾದರಿಯಂತೆಯೇ ಇರಬಹುದು ಎಂದು ನಿರೀಕ್ಷಿಸುತ್ತೇವೆ.

2021ರ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಪೊಲೊ ಕಾರು ನಮ್ಮ ಮಾರುಕಟ್ಟೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಹುಬೇಡಿಕೆಯಿಂದ ಮಾರಾಟವಾಗುತ್ತಿರುವ ಮಾದರಿಯಾಗಿದೆ. ಒಟ್ಟಾರೆಯಾಗಿ ನ್ಯೂ ಜನರೇಷನ್ ಫೋಕ್ಸ್‌ವ್ಯಾಗನ್ ಪೊಲೊ ಹೊಸ ಅವತರದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಪೊಲೊ ಮಾದರಿಯು ಭಾರತದಲ್ಲಿ ಬಿಡುಗಡೆಯಾದರೆ ಹ್ಯುಂಡೈ ಐ20 ಮತ್ತು ಟಾಟಾ ಆಲ್ಟ್ರೊಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 Volkswagen Polo Teased With Illuminated Light Bar. Read In Kananda.
Story first published: Monday, April 19, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X