ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯನ್ನು 2020ರ ಮಾರ್ಚ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಟಿ-ರಾಕ್ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿತ್ತು.

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯಲ್ಲಿ ಐಷಾರಾಮಿ ಫೀಚರ್ಸ್ ಹೊಂದಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಎಸ್‍‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಭಾರತದಲ್ಲಿ ಟಿ-ರಾಕ್ ಎಸ್‍ಯುವಿಯ ಮೊದಲ ಬ್ಯಾಚ್ ಆಗಿ 1,000 ಯು‍‍ನಿ‍‍ಟ್‍ಗಳನ್ನು ಬಿಡುಗಡೆಗೊಳಿಸಿದ್ದರು. ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಎಲ್ಲಾ ಯು‍‍ನಿ‍‍ಟ್‍ಗಳು ಕಡಿಮೆ ಅವಧಿಯಲ್ಲಿ ಮಾರಾಟಗೊಳಿಸಿತ್ತು. ಇದರಿಂದ ಫೋಕ್ಸ್‌ವ್ಯಾಗನ್ ಕಂಪನಿಯು ಟಿ-ರಾಕ್ ಎಸ್‍ಯುವಿಯ ಬುಕ್ಕಿಂಗ್ ಸ್ವೀಕಿರಿಸುವುದನ್ನು ನಿಲ್ಲಿಸಲಾಗಿತ್ತು.

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಮೊದಲ ಬ್ಯಾಚ್‌ನ ಯು‍‍ನಿ‍‍ಟ್‍ಗಳು ಮಾರಾಟವಾಗಿರುವುದರಿಂದ ಎರಡನೇ ಬ್ಯಾಚ್ ಆಮದುಮಾಡಿಕೊಳ್ಳಲಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಎರಡನೇ ಬ್ಯಾಚ್‌ನಲ್ಲಿ 2,500 ಯು‍‍ನಿ‍‍ಟ್‍ಗಳನ್ನು ಸಿಬಿಯು ಮಾರ್ಗದ ಮೂಲಕ ಆಮದುಮಾಡಿಕೊಳ್ಳಬಹುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಇದೀಗ ಫೋಕ್ಸ್‌ವ್ಯಾಗನ್ ಕಂಪನಿ ತನ್ನ ಟಿ-ರಾಕ್ ಎಎಸ್‍ಯುವಿ ಖರೀದಿಗೆ ಬುಕ್ಕಿಂಗ್ ಪುನಾರಂಭಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಕಳೆದ ವರ್ಷ 2020ರಲ್ಲಿ ರೂ.19.99 ಲಕ್ಷಕ್ಕೆ ಈ ಟಿ-ರಾಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಇದರ ಬೆಲೆಯನ್ನು ರೂ. 1.36 ಲಕ್ಷದವರೆಗೂ ಹೆಚ್ಚಿಸಿದೆ ಎಂದು ವರಿದಿಯಾಗಿದೆ.

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಟಿ-ರಾಕ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ ಮತ್ತು ಮುಂಭಾಗದ ಎರಡೂ ಬದಿಯಲ್ಲಿ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ. ಈ ಎಸ್‍‍ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್‍‍ಟೇಕ್ ಅನ್ನು ಹೊಂದಿದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಈ ಎಸ್‍‍ಯುವಿಯ ಮುಂಭಾಗದಲ್ಲಿ ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಸಹ ಅಳವಡಿಸಲಾಗಿದೆ. ಹೊಸ ಟಿ-ರಾಕ್ ಎಸ್‍‍ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್‍ಇಡಿ ಟೈಲ್‍ ಲೈಟ್‍‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್‍‍ಗಳನ್ನು ನೀಡಿದೆ.

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍‍ಯುವಿಯ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍‍ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 148 ಬಿ‍ಹೆಚ್‍ಪಿ ಪವರ್ ಮತ್ತು 250 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಹೊಸ ಟಿ-ರಾಕ್ ಎಸ್‍ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್‍ನ ಟಿ-ರಾಕ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಫೋಕ್ಸ್‌ವ್ಯಾಗನ್‍ನ ಟಿ-ರಾಕ್ ಖರೀದಿಸಲು ಬಯಸುವವರು ಹತ್ತಿರದ ಫೋಕ್ಸ್‌ವ್ಯಾಗನ್‍ನ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Volkswagen T-Roc Price Hiked. Read In Kannada.
Story first published: Friday, March 5, 2021, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X