ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಟಾಟಾ ಮೋಟಾರ್ಸ್ ನಿರ್ಮಾಣದ ನೆಕ್ಸಾನ್ ಎಲೆಕ್ಟ್ರಿಕ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿ ಇದೇ ತಿಂಗಳಾಂತ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಮೊದಲ ವರ್ಷದ ಸಂಭ್ರಮಕ್ಕಾಗಿ ಕಂಪನಿಯು ನೆಕ್ಸಾನ್ ಕಾರು ಮಾದರಿಯ ಮೇಲೆ ವಿವಿಧ ಆಫರ್‌ಗಳನ್ನು ಘೋಷಿಸಿದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನಕ್ಕೇರಿರುವ ಟಾಟಾ ನೆಕ್ಸಾನ್ ಕಾರು ಮಾದರಿಯು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರಿನ ಬೇಡಿಕೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ. ಈ ಹಿನ್ನಲೆಯಲ್ಲಿ ಹೊಸ ಕಾರು ಖರೀದಿದಾರರಿಗೆ ವಿವಿಧ ಆಫರ್ ಘೋಷಣೆ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಎಕ್ಸ್‌ಚೆಂಜ್ ಆಫರ್ ಮತ್ತು ಹೆಚ್ಚುವರಿ ವಾರಂಟಿ ಘೋಷಣೆ ಮಾಡಿದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ನೆಕ್ಸಾನ್ ಇವಿ ಕಾರು ಖರೀದಿಗೆ ರೂ.15 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ಲಭ್ಯವಿದ್ದು, ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿನ ಖರೀದಿ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧಾರದ ಮೇಲೆ ಬ್ಯಾಟರಿ ವಾರಂಟಿ ಲಭ್ಯಲಾಗಲಿದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಹೊಸ ನೆಕ್ಸಾನ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರು ಮಾರಾಟವಾದ ನಂತರ ಇದುವರೆಗೆ ಸುಮಾರು 2,700 ಯುನಿಟ್ ಮಾರಾಟಗೊಂಡಿದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರಿನ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಪ್ರಮುಖ ಮೂರು ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.16.25 ಲಕ್ಷ ಬೆಲೆ ಪಡೆದುಕೊಂಡಿದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಎ‍ಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಇಕೋ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ವಿವಿಧ ಡ್ರೈವಿಂಗ್ ಮೋಡ್‌ಗಳಲ್ಲಿ ಚಾಲನೆ ಮಾಡಿದಾಗ ಕನಿಷ್ಠ 250 ಕಿ.ಮೀ ನಿಂದ 280 ಕಿ.ಮೀ ವರೆಗೂ ಮೈಲೇಜ್ ಸುಲಭವಾಗಿ ನೀಡುತ್ತದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಇನ್ನು ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಸಾಮಾನ್ಯ ಮಾದರಿಯ ನೆಕ್ಸಾನ್ ಫೇಸ್‍‍ಲಿಫ್ಟ್ ಸ್ಟ್ಯಾಂಡರ್ಡ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ.

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಇನ್ನು ದೇಶಾದ್ಯಂತ ಸದ್ಯ ಎಲೆಕ್ಟ್ರಿಕ್ ವಾಹನ ಮಾರಾಟವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದರೂ ಸಹ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯಿಂದಾಗಿ ಬಹುತೇಕ ಎಲೆಕ್ಟ್ರಿಕ್ ವಾಹನ ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್

ಈ ವಿಚಾರವಾಗಿ ಮಹತ್ವದ ನಿರ್ಣಯ ಕೈಗೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ 300ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳಿಗೆ ಚಾಲನೆ ನೀಡಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಟಿಯಾಗೋ ಮತ್ತು ನೆಕ್ಸಾನ್ ಇವಿ ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

Most Read Articles

Kannada
English summary
Nexon Electric Going To Celebrate 1st Anniversary, Tata Announced Discount Offer. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X