ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ಕೇವಲ 18 ಗಂಟೆಗಳಲ್ಲಿ 25.54 ಕಿ.ಮೀ ಸಿಂಗಲ್ ಲೇನ್ ರಸ್ತೆಯನ್ನು ನಿರ್ಮಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದೆ. ವಿಜಯಪುರ ಹಾಗೂ ಸೋಲಾಪುರ ನಡುವೆ ಎನ್‌ಹೆಚ್ -52 ರಲ್ಲಿ ನಿರ್ಮಿಸಲಾಗುತ್ತಿರುವ ನಾಲ್ಕು ಪಥದ ಹೆದ್ದಾರಿಯಲ್ಲಿ ಎನ್‌ಹೆಚ್‌ಎಐ ಈ ಸಾಧನೆ ಮಾಡಿದೆ.

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ಈ ಹೆದ್ದಾರಿಯಲ್ಲಿ ಕೇವಲ 18 ಗಂಟೆಗಳಲ್ಲಿ 25 ಕಿ.ಮೀಗಿಂತ ಹೆಚ್ಚು ವಿಸ್ತಾರವಾದ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ರಸ್ತೆಗೆ ಸಂಬಂಧಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎನ್‌ಹೆಚ್‌ಎಐನ ಈ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿಸಬೇಕು ಎಂದು ಗಡ್ಕರಿ ಹೇಳಿದ್ದಾರೆ.

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಹಾಗೂ ನೌಕರರನ್ನು ಅಭಿನಂದಿಸಿರುವ ನಿತಿನ್ ಗಡ್ಕರಿ, ಅವರ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದಾಗಿ ಈ ಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ವಿಜಯಪುರ ಹಾಗೂ ಸೋಲಾಪುರ ನಡುವೆ 110 ಕಿ.ಮೀ ಉದ್ದದ 4 ಪಥದ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಈ ಹೆದ್ದಾರಿ ಕಾಮಗಾರಿಯು 2021ರ ಅಕ್ಟೋಬರ್‌ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ.

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ಈ ಹೆದ್ದಾರಿ ಬೆಂಗಳೂರು, ವಿಜಯಪುರ, ಔರಂಗಾಬಾದ್ ಹಾಗೂ ಗ್ವಾಲಿಯರ್ ನಡುವೆ ನಿರ್ಮಿಸಲಾಗುತ್ತಿರುವ ಕಾರಿಡಾರ್‌ನ ಒಂದು ಭಾಗವಾಗಿದೆ. ಈ ಹೆದ್ದಾರಿಯು ವಿಜಯಪುರ ಹಾಗೂ ಸೋಲಾಪುರ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ಇದಕ್ಕೂ ಮುನ್ನ ದೆಹಲಿ - ಮುಂಬೈ ನಡುವಿನ 8 ಪಥದ ಎಕ್ಸ್‌ಪ್ರೆಸ್‌ವೇಯಲ್ಲಿರುವ ಪಟೇಲ್ ಮೂಲಸೌಕರ್ಯವು 24 ಗಂಟೆಗಳಲ್ಲಿ ನಿರ್ಮಾಣವಾದ ಅತಿ ಉದ್ದದ ರಸ್ತೆ ಎಂಬ ಹಿರಿಮೆಗೆ ಪಾತ್ರವಾಗಿತ್ತು.

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ದಾಖಲಿಸಲಾಗಿದೆ. ಎನ್‌ಹೆಚ್‌ಎಐ ದೇಶಾದ್ಯಂತ ಹಲವಾರು ಹೆದ್ದಾರಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ದೇಶದ ಹಲವು ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸಲು ಹಾಗೂ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಹೆದ್ದಾರಿಗಳನ್ನು ಹಾಗೂ ಎಕ್ಸ್‌ಪ್ರೆಸ್ ಹೈವೇಗಳನ್ನು ನಿರ್ಮಿಸಲಾಗುತ್ತಿದೆ.

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಭಾರತ್ ಮಾಲಾ ಅಡಿಯಲ್ಲಿ ಅನೇಕ ಗ್ರೀನ್ ಹಾಗೂ ಎಕಾನಾಮಿಕ್ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾರಿಡಾರ್‌ಗಳು ಸಾರಿಗೆ ಸಮಯ ಹಾಗೂ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ದೆಹಲಿಯಿಂದ ಮುಂಬೈ ನಡುವೆ ನಿರ್ಮಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳು ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ಚಲಿಸಬಹುದು. ಈ ಎಕ್ಸ್‌ಪ್ರೆಸ್‌ವೇ ಈ ಎರಡು ನಗರಗಳ ಸಂಚಾರದ ಅವಧಿಯನ್ನು ಕಡಿಮೆ ಮಾಡುತ್ತದೆ. 1,275 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.

ಹೊಸ ವಿಶ್ವ ದಾಖಲೆ ಬರೆದ ವಿಜಯಪುರ - ಸೋಲಾಪುರ ಹೆದ್ದಾರಿ ಕಾಮಗಾರಿ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯನ್ನು ಭಾರತ್ ಮಾಲಾ ಯೋಜನೆಯಲ್ಲಿ ಸೇರಿಸಲಾಗಿದೆ. ಭಾರತ್ ಮಾಲಾ ಯೋಜನೆಯಡಿ ದೇಶಾದ್ಯಂತ 28,000 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ಹೆದ್ದಾರಿಗಳು ಹಾಗೂ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ.

Most Read Articles

Kannada
English summary
NHAI creates new world record by constructing around 26 kms road in 18 hours. Read in Kannada.
Story first published: Monday, March 1, 2021, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X