Just In
- 8 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 10 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 10 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 12 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ನಿಸ್ಸಾನ್ ಕಿಕ್ಸ್ ಎಸ್ಯುವಿ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ಇಂಡಿಯಾ ತನ್ನ ಕಿಕ್ಸ್ ಎಸ್ಯುವಿ ಖರೀದಿ ಮೇಲೆ ಬಂಪರ್ ಆಫರ್ ಅನ್ನು ಘೋಷಿಸಿದೆ. ನಿಸ್ಸಾನ್ ಕಂಪನಿಯು ತನ್ನ ಕಿಕ್ಸ್ ಎಸ್ಯುವಿ ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಕಿಕ್ಸ್ ಎಸ್ಯುವಿಯ ಮೇಲೆ ರೂ.90,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಆನ್ಲೈನ್ ಬುಕ್ಕಿಂಗ್ ಕೂಡ ಸೇರಿದೆ. ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಈ ರಿಯಾಯಿತಿಗಳು ರೂಪಾಂತರಗಳು ಮತ್ತು ಸ್ಥಳಗಳಲ್ಲಿ ಬದಲಾಗುತ್ತದೆ. ಸ್ಟಾಕ್ ಇರುವವರೆಗೆ ಅನ್ವಯವಾಗುತ್ತದೆ.
ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ಪ್ರಕಾರ, ನಿಸ್ಸಾನ್ ಕಿಕ್ಸ್ ಎಸ್ಯುವಿಯ ಮೇಲೆ ರೂ.15,000 ನಗದು ರಿಯಾಯಿತಿ ಮತ್ತು ರೂ.70,000 ವರೆಗಿನ ವಿನಿಮಯ ಬೋನಸ್ ಅನ್ನು ನೀಡಲಾಗುತ್ತದೆ. ಇನ್ನು ಈ ನಿಸ್ಸಾನ್ ಕಿಕ್ಸ್ ಎಸ್ಯುವಿಯನ್ನು ಬ್ರ್ಯಾಂಡ್ನ ವೆಬ್ಸೈಟ್ ಮೂಲಕ ಆನ್ಲೈನ್ ಬುಕ್ಕಿಂಗ್ ಮಾಡಿದರೆ ರೂ.5,000 ಬೋನಸ್ ಅನ್ನು ಪಡೆಯಬಹುದು.
ಕಂಪನಿಯು ಗ್ರಾಹಕರಿಗೆ ವಿಶೇಷ ಶೇ .7.99 ರ ಬಡ್ಡಿದರವನ್ನು ಸಹ ಒದಗಿಸುತ್ತಿದೆ. ಓಣ್ಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನಗಳನ್ನು ಒದಗಿಸುತ್ತಿದ್ದಾರೆ. ಇದು ಶೇ,7.99 ROI (ಬಡ್ಡಿ ದರ) ಮತ್ತು 2 ಗ್ರಾಂ ಚಿನ್ನದ ನಾಣ್ಯದೊಂದಿಗೆ ರೂ.90,000 ವರೆಗೂ ಇದೇ ರೀತಿಯ ಪ್ರಯೋಜನಗಳನ್ನು ಒಳಗೊಂಡಿದೆ.
ಇನ್ನು ಈ ನಿಸ್ಸಾನ್ ಕಿಕ್ಸ್ ಎಸ್ಯುವಿಗ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್ಎಲ್ ಮತ್ತು ಎಕ್ಸ್ವಿ ಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 105 ಬಿಹೆಚ್ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.
ಇನ್ನು ನಿಸ್ಸಾನ್ ಕಿಕ್ಸ್ ಎಸ್ಯುವಿಯ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 156 ಬಿಹೆಚ್ಪಿ ಪವರ್ ಮತ್ತು 254 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಅಥವಾ ಬ್ರ್ಯಾಂಡ್ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.
ನಿಸ್ಸಾನ್ ಸರಣಿಯಲ್ಲಿ ಅತಿ ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಕಿಕ್ಸ್ ಎಸ್ಯುವಿಯನ್ನು ಒಳಗೊಂಡಿದೆ. ಈ ನಿಸ್ಸಾನ್ ಕಿಕ್ಸ್ ಎಸ್ಯುವಿಯಲ್ಲಿ ಹಲವಾರು ಫೀಚರ್ಗಳನ್ನು ಹೊಂದಿವೆ. ಈ ನಿಸ್ಸಾನ್ ಕಿಕ್ಸ್ ಟಾಪ್ ಅಂಡ್ ಕಾರುಗಳು ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ಸ್ ಗಳನ್ನು ಹೊಂದಿದೆ.
ಈ ಎಸ್ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್ಗಳು, ಆಟೋಮ್ಯಾಟಿಕ್ ಹೆಡ್ಲ್ಯಾಂಪ್ಗಳು ಮತ್ತು ವೈಪರ್, ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಒಳಗೊಂಡಿದೆ.
ನಿಸ್ಸಾನ್ ಇಂಡಿಯಾ ಕಂಪನಿಯು ವಿವಿಧ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳ ವಿಸ್ತರಣೆಯೊಂದಿಗೆ ಸರ್ವಿಸ್ ಸೆಂಟರ್ಗಳನ್ನು ಸಹ ಹೆಚ್ಚಿಸುತ್ತಿದೆ. ಹೊಸ ಖರೀದಿಗೆ ಪ್ರಮುಖ ಅಂಶವಾಗಿರುವ ಸರ್ವಿಸ್ ಕೇಂದ್ರಗಳ ಲಭ್ಯತೆ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಮುಂದಾಗಿರುವ ನಿಸ್ಸಾನ್ ಕಂಪನಿಯು ದೇಶಾದ್ಯಂತ 18 ಹೊಸ ಅಧಿಕೃತ ಸರ್ವಿಸ್ ಸೆಂಟರ್ಗಳನ್ನು ತೆರೆದಿದೆ. ಇದರ ಸರ್ವಿಸ್ ಸೆಂಟರ್ಗಳ ಮೂಲಕ ಕಂಪನಿಯು ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.
ಭಾರತದಿಂದಲೇ ನಿಸ್ಸಾನ್ ಕಂಪನಿಯು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಮ್ಯಾಗ್ನೈಟ್ ಸೇರಿದಂತೆ ವಿವಿಧ ಕಾರುಗಳನ್ನು ರಫ್ತು ಕೈಗೊಳ್ಳುತ್ತಿದೆ. ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿರುವ ರೈಟ್ ಹ್ಯಾಂಡ್ ಮಾದರಿಯ ಜೊತೆಗೆ ಲೆಫ್ಟ್ ಹ್ಯಾಂಡ್ ಮಾದರಿಯನ್ನು ರಫ್ತು ಆರಂಭಿಸಿದ್ದು, ಹೊಸದಾಗಿ ನೇಪಾಳ, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮಾರಾಟ ಪ್ರಕ್ರಿಯೆ ಆರಂಭಗೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ನಿಸ್ಸಾನ್ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ಆರಂಭಿಸಿದ್ದು, ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ಕಾರ್ ರೆಂಟಲ್ ಕಂಪನಿಗಳಲ್ಲಿ ಆಸಕ್ತ ಗ್ರಾಹಕರು ಸಬ್ಸ್ಕ್ರೈಬ್ ಮಾಡಿಕೊಳ್ಳಬಹುದಾಗಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದೆ.
ಉತ್ಪಾದನಾ ಸಾಮರ್ಥ್ಯದ ಮೇಲೆ ಇದುವರೆಗೆ ಹೊಸ ಕಾರಿನ 15 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಣೆ ಮಾಡಲಾಗಿದೆ. ಇನ್ನು ನಿಸ್ಸಾನ್ ಕಿಕ್ಸ್ ಪವರ್ ಫುಲ್ ಎಂಜಿನ್ ಮತ್ತು ನೂತನ ಫೀಚರ್ ಗಳನ್ನು ಒಳಗೊಂಡಿರುವ ಎಸ್ಯುವಿಯಾಗಿದೆ. ಈ ನಿಸ್ಸಾನ್ ಕಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.