Just In
- 47 min ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 47 min ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
- 1 hr ago ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- 2 hrs ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
Don't Miss!
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಫೆನ್ಸ್ ಕ್ಯಾಂಟಿನ್ಗಳಲ್ಲೂ ಖರೀದಿಗೆ ಲಭ್ಯ ನಿಸ್ಸಾನ್ ಮ್ಯಾಗ್ನೈಟ್ ಮತ್ತು ಕಿಕ್ಸ್
ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್ಡಿ) ಮಳಿಗೆಗಳಲ್ಲೂ ಮಾರಾಟ ಆರಂಭಿಸಿದ್ದು, ವಿಶೇಷವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಸೇನಾಧಿಕಾರಿಗಳಿಗಾಗಿ ಮಾರಾಟಗೊಳ್ಳಲಿವೆ.
ಡಿಫೆನ್ಸ್ ಕ್ಯಾಂಟಿನ್ಗಳಲ್ಲಿ ಸರ್ಕಾರವು ಸೇನಾಧಿಕಾರಿಗಳಿಗಾಗಿಯೇ ವಿಶೇಷ ರಿಯಾಯತಿ ದರದಲ್ಲಿ ದಿನನಿತ್ಯದ ಸಾಮಾಗ್ರಿಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಹೊಂದಿದ್ದು, ನಿಸ್ಸಾನ್ ಕಂಪನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ತನ್ನ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಆರಂಭಿಸಿದೆ.
ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್ಡಿ) ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ಮಾಗ್ನೈಟ್ ಮತ್ತು ಕಿಕ್ಸ್ ಕಾರುಗಳು ಸಾಮಾನ್ಯ ಡೀಲರ್ಸ್ಗಳಲ್ಲಿ ಖರೀದಿಗೆ ಲಭ್ಯವಿರುವ ಮಾದರಿಗಿಂತ ರೂ. 77 ಸಾವಿರದಿಂದ ರೂ. 1.49 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿವೆ.
ನಿಸ್ಸಾನ್ ಕಂಪನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರಿನ ಕೆಲವೇ ಆಯ್ದ ವೆರಿಯೆಂಟ್ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಮ್ಯಾಗ್ನೈಟ್ ಕಾರಿನ ಐದು ವೆರಿಯೆಂಟ್ಗಳು ಮತ್ತು ಕಿಕ್ಸ್ ಕಾರಿನ ಐದು ವೆರಿಯೆಂಟ್ಗಳು ಖರೀದಿಗೆ ಲಭ್ಯವಿವೆ.
ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುವ ಮ್ಯಾಗ್ನೈಟ್ ಕಾರು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.82 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8.20 ಲಕ್ಷಕ್ಕೆ ಮತ್ತು ಕಿಕ್ಸ್ ಕಾರು ಆರಂಭಿಕವಾಗಿ ರೂ.8.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.83 ಲಕ್ಷ ಬೆಲೆ ಹೊಂದಿದೆ.
ಕಿಕ್ಸ್ ಎಸ್ಯುವಿಯ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್ಎಲ್ ಮತ್ತು ಎಕ್ಸ್ವಿ ಆವೃತ್ತಿಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 105 ಬಿಹೆಚ್ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.
ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ಸಾಮರ್ಥ್ಯದ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 156 ಬಿಹೆಚ್ಪಿ ಪವರ್ ಮತ್ತು 254 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹಾಗೆಯೇ ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಾಗ್ನೈಟ್ ಕಾರು ಗ್ರಾಹಕರ ಬೇಡಿಕೆಯೆಂತೆ ಎಕ್ಸ್ಇ, ಎಕ್ಸ್ಎಲ್, ಎಕ್ಸ್ವಿ ಮತ್ತು ಎಕ್ಸ್ವಿ ಪ್ರೀಮಿಯಂ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದೆ.
ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.
1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ 70-ಬಿಎಚ್ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.