Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2030ರಿಂದ ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಈ ಕಾರು ತಯಾರಕ ಕಂಪನಿ
ನಿಸ್ಸಾನ್ ಮೋಟಾರ್ ಕಂಪನಿಯು 2050ರ ವೇಳೆಗೆ ಕಂಪನಿಯನ್ನು ಪರಿಸರ ಸ್ನೇಹಿಯಾಗಿಸುವ ಗುರಿಯನ್ನು ಹೊಂದಿದೆ. ಇದರ ಅಂಗವಾಗಿ ಕಂಪನಿಯು 2030ರ ದಶಕದ ಆರಂಭದಿಂದ ಪ್ರಮುಖ ಮಾರುಕಟ್ಟೆಗಳಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಿಡುಗಡೆಗೊಳಿಸಲಿದೆ.

ನಿಸ್ಸಾನ್ ಕಂಪನಿಯು ತನ್ನ ಕಾರುಗಳಿಗಾಗಿ ಕೈಗೆಟುಕುವ ಬೆಲೆಯ ಹಾಗೂ ಪರಿಣಾಮಕಾರಿಯಾದ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಬ್ಯಾಟರಿಗಳ ಸಾಲಿಡ್ ಸ್ಟೇಟ್ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಬ್ಯಾಟರಿಯನ್ನು ಆರ್ಥಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವುದರ ಜೊತೆಗೆ ಕಾರುಗಳ ಪ್ಲಾಟ್‌ಫಾರಂ ಅನ್ನು ಸಹ ದಕ್ಷತೆಯಿಂದ ಮಾಡಲಾಗುತ್ತದೆ.

ಇದರಿಂದಾಗಿ ಕಡಿಮೆ ಶಕ್ತಿಯಲ್ಲಿ ಹೆಚ್ಚಿನ ಪರ್ಫಾಮೆನ್ಸ್ ಪಡೆಯಬಹುದು. ನಿಸ್ಸಾನ್ ಕಂಪನಿಯು ವಿಕೇಂದ್ರೀಕೃತ ಬ್ಯಾಟರಿ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಇದರ ಜೊತೆಗೆ ಮನೆ ಹಾಗೂ ಕಟ್ಟಡಗಳಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆಯೂ ಯೋಜನೆ ಸಿದ್ಧಪಡಿಸಲಾಗುತ್ತಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಇದಕ್ಕಾಗಿ ಕಂಪನಿಯು ಇಂಧನ ಉತ್ಪಾದಿಸುವ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಉತ್ಪಾದನೆಯನ್ನು ಕೈಗೆಟುಕುವಂತೆ ಮಾಡಲು, ಕಂಪನಿಯು ನಿಸ್ಸಾನ್ ಇಂಟೆಲಿಜೆಂಟ್ ಫ್ಯಾಕ್ಟರಿ ಯೋಜನೆಯನ್ನು ಆರಂಭಿಸಿದೆ.

ಈ ಯೋಜನೆಯಡಿಯಲ್ಲಿ ಕಂಪನಿಯು ತನ್ನ ಘಟಕದಲ್ಲಿ ಕಡಿಮೆ ವಿದ್ಯುತ್ ಬಳಸುವ ಉಪಕರಣಗಳು ಹಾಗೂ ಯಂತ್ರಗಳನ್ನು ಬಳಸುತ್ತದೆ. ನಿಸ್ಸಾನ್ ಕಂಪನಿಯು 2017ರಲ್ಲಿ ನಿಸ್ಸಾನ್ ಗ್ರೀನ್ ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಕಂಪನಿಯು 2022ರ ವೇಳೆಗೆ ಕೆಲವು ಮಾನದಂಡಗಳನ್ನು ಪೂರೈಸಲು ನಿರತವಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಯೋಜನೆಯಡಿಯಲ್ಲಿ ಉತ್ಪಾದನೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಳಕೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಕಡಿಮೆ ನೀರನ್ನು ಬಳಸುವ ಮೂಲಕ ಕಂಪನಿಯು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಈ ಎಸ್‌ಯುವಿಯು ಬಿಡುಗಡೆಯಾದ 45 ದಿನಗಳಲ್ಲಿ 35,000 ಯುನಿಟ್ ಬುಕ್ಕಿಂಗ್'ಗಳನ್ನು ಪಡೆದಿದೆ.

ಪ್ರತಿದಿನ 1,000 ಯುನಿಟ್ ಬುಕ್ಕಿಂಗ್'ಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಇದುವರೆಗೂ 2 ಲಕ್ಷಕ್ಕೂ ಹೆಚ್ಚು ಬಾರಿ ಈ ಎಸ್‌ಯುವಿಯ ಬಗ್ಗೆ ವಿಚಾರಣೆ ನಡೆಸಲಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕಂಪನಿಯು 720ಕ್ಕೂ ಹೆಚ್ಚು ಯುನಿಟ್ ಮ್ಯಾಗ್ನೈಟ್ ಎಸ್‌ಯುವಿಗಳನ್ನು ವಿತರಿಸಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವರದಿಗಳ ಪ್ರಕಾರ, ಹ್ಯಾಪಿ ವಿತ್ ನಿಸ್ಸಾನ್ ಸರ್ವೀಸ್ ಅಭಿಯಾನದಲ್ಲಿ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ, 60-ಪಾಯಿಂಟ್ ಫ್ರೀ ಚೆಕ್ ಅಪ್, ಫ್ರೀ ಕಾರ್ ಟಾಪ್ ವಾಶ್ ಜೊತೆಗೆ ಕರೋನಾ ಸಾಂಕ್ರಾಮಿಕದಿಂದಾಗಿ ಸರ್ವೀಸ್ ಮಾಡಿಸಲು ಸಾಧ್ಯವಾಗದ ಗ್ರಾಹಕರಿಗೆ ಫ್ರೀ ಆಯಿಲ್ ಫಿಲ್ಟರ್ ನೀಡಲಾಗುತ್ತದೆ.

ಇದರ ಜೊತೆಗೆ ವಿಶೇಷ ಬಿಡಿಭಾಗಗಳು ಹಾಗೂ ಆಕ್ಸೆಸರಿಸ್'ಗಳ ಮೇಲೆ 50%ನಷ್ಟು ರಿಯಾಯಿತಿ ಕೊಡುಗೆಗಳನ್ನು ನೀಡಲಾಗುತ್ತದೆ. ನಿಸ್ಸಾನ್ ಹಾಗೂ ದಟ್ಸನ್ ಕಾರುಗಳ ಸರ್ವೀಸ್ ಪಡೆಯುವ ಗ್ರಾಹಕರು ಲೇಬರ್ ಚಾರ್ಜ್ ಮೇಲೆ 20%ನಷ್ಟು ರಿಯಾಯಿತಿ ಪಡೆಯಬಹುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಿಸ್ಸಾನ್ ಕಂಪನಿಯ ಎಲ್ಲಾ ಶೋರೂಂ ಹಾಗೂ ಡೀಲರ್'ಗಳ ಬಳಿ ಮ್ಯಾಗ್ನೈಟ್ ಎಸ್‌ಯುವಿಯನ್ನು ಬುಕ್ ಮಾಡಬಹುದು. ಮುಂದಿನ ಸೂಚನೆ ಬರುವವರೆಗೂ ನಿಸ್ಸಾನ್ ಕಂಪನಿಯು ಈ ಎಸ್‌ಯುವಿಯನ್ನು ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಿದೆ.