ದೀಪಾವಳಿ ಸಂಭ್ರಮ- Nissan ಕಾರುಗಳ ಮಾಲೀಕರಿಗೆ ವಿಶೇಷ ಆಫರ್!

ಕೋವಿಡ್-19 ಪರಿಣಾಮ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಪ್ರಮುಖ ಆಟೋ ಕಂಪನಿಗಳು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನ ಸೆಳೆಯುತ್ತಿವೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಎರಡನೇ ಅಲೆಯ ಕೋವಿಡ್ ನಿರ್ಬಂಧಗಳಿಂದಾಗಿ ಕಳೆದ ಏಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿ ಭಾರೀ ಪ್ರಮಾಣದ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಇದೀಗ ಸಾಕಷ್ಟು ಸುಧಾರಣೆ ಕಂಡಿದ್ದು, ಇದೀಗ ಆರಂಭವಾಗಿರುವ ಹಬ್ಬದ ಋತುಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಲ್ಲಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಪ್ರಮುಖ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ನಿಸ್ಸಾನ್ ಕೂಡಾ ತನ್ನ ಗ್ರಾಹಕರಿಗೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಹೊಸ ಆಫರ್‌ಗಳಲ್ಲಿ ಈಗಾಗಲೇ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಘೋಷಣೆ ಮಾಡಿರುವ ನಿಸ್ಸಾನ್ ಕಂಪನಿಯು ಇದೀಗ ದೀಪಾವಳಿ ವಿಷೇಶವಾಗಿ ಆಕ್ಸೆಸರಿಸ್‌ ಮತ್ತು ವಿವಿಧ ಗ್ರಾಹಕರ ಸೇವೆ ಮೇಲೆ ಆಫರ್ ನೀಡುತ್ತಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ದೀಪಾವಳಿ ವಿಶೇಷವಾಗಿ ನಿಸ್ಸಾನ್ ಗ್ರಾಹಕರಿಗೆ ಉಚಿತವಾಗಿ ಕಾರ್ ವಾಶ್, ವಿವಿಧ ಗ್ರಾಹಕರ ಸೇವಾ ಶುಲ್ಕದಲ್ಲಿ ಶೇ.20ರಷ್ಟು ರಿಯಾಯ್ತಿ, ಆಕ್ಸೆಸರಿಸ್‌ಗಳ ಮೇಲೆ ವಿಶೇಷ ರಿಯಾಯ್ತಿ, ಉಚಿತವಾದ ತಾಂತ್ರಿಕ ಅಂಶಗಳ ತಪಾಸಣೆ, ಉಚಿತವಾದ ಆಯಿಲ್ ಫಿಲ್ಟರ್ ಅಳವಡಿಸಿಕೊಳ್ಳಲಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಹೊಸ ಕಾರುಗಳ ಖರೀದಿ ಮೇಲೆ ಮಾತ್ರ ಈಗಾಗಲೇ ಕಾರು ಖರೀದಿಸಿರುವ ಗ್ರಾಹಕರಿಗೆ ದೀಪಾವಳಿ ಆಫರ್ ನೀಡಿರುವ ನಿಸ್ಸಾನ್ ಕಂಪನಿಯು ಗ್ರಾಹಕರ ಸೇವೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಭರವಸೆ ನೀಡಿದ್ದು, ಅಕ್ಟೋಬರ್ 1ರಿಂದಲೇ ಆರಂಭವಾಗಿರುವ ಹೊಸ ಆಫರ್ ಡಿಸೆಂಬರ್ 31ರ ತನಕವು ಲಭ್ಯವಿರುತ್ತದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಇನ್ನು ಭಾರತದಲ್ಲಿ ಜಂಟಿಯಾಗಿ ಕಾರು ಉತ್ಪಾದನೆ ಮತ್ತು ಮಾರಾಟ ಸೌಲಭ್ಯವನ್ನು ಹೊಂದಿರುವ ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಪೆಟ್ರೋಲ್ ಕಾರು ಮಾದರಿಗಳ ಮಾರಾಟವನ್ನು ಮಾತ್ರ ಹೊಂದಿದ್ದು, ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ನಿಸ್ಸಾನ್ ಕಂಪನಿಯು ಸದ್ಯ ಭಾರತದಲ್ಲಿ ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಎರಡು ಕಾರು ಮಾದರಿಗಳು ಕೂಡಾ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಕಿಕ್ಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಆವೃತ್ತಿಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಕಿಕ್ಸ್ ಕಾರಿನ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ಸಾಮರ್ಥ್ಯದ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಈ ಎಂಜಿನ್‌ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅಥವಾ ಬ್ರ್ಯಾಂಡ್‌ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದ್ದು, ನಿಸ್ಸಾನ್ ಸರಣಿಯಲ್ಲೇ ಟರ್ಬೊ ಎಂಜಿನ್ ಅತಿ ಹೆಚ್ಚು ಪವರ್ ಫುಲ್ ಮಾದರಿಯಾಗಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಹಾಗೆಯೇ ಮ್ಯಾಗ್ನೈಟ್ ಕಾರು ಮಾದರಿಯು ಕೂಡಾ ಉತ್ತಮ ಬೇಡಿಕೆಯೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಯೊಂದಿಗೆ ಮಾರಾಟಗೊಳ್ಳುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ತಾಂತ್ರಿಕ ಸೌಲಭ್ಯಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.15 ಲಕ್ಷ ಬೆಲೆ ಹೊಂದಿದ್ದು, ಮ್ಯಾಗ್ನೈಟ್ ಕಾರಿನಲ್ಲಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ದೀಪಾವಳಿ ಆಫರ್- Nissan ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಈ ಮೂಲಕ ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ನಾಲ್ಕು ಸ್ಟಾರ್ ರೇಟಿಂಗ್ ಪಡೆದಕೊಂಡಿರುವುದು ಕೂಡಾ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Most Read Articles

Kannada
English summary
Nissan festive offer utsav details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X