ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಬಹುಬೇಡಿಕೆಯ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರು ಮಾದರಿಗಳ ಮೇಲೆ ವಿಶೇಷ ಆಫರ್ ಒಂದನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಹೊಸದಾಗಿ ಕಾರು ಖರೀದಿಸಿದ ಗ್ರಾಹಕರಿಗೆ ಮಾತ್ರವಲ್ಲ ಅಸ್ತಿತ್ವದಲ್ಲಿರುವ ಕಾರು ಮಾಲೀಕರಿಗೂ ಕೂಡಾ ಅನ್ವಯಿಸುತ್ತದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಹೊಸ ಆಫರ್‌ಗಳಲ್ಲಿ ನಿಸ್ಸಾನ್ ಕಂಪನಿಯು ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ನಿಸ್ಸಾನ್ ಸರ್ಕಲ್ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು, ನಿಸ್ಸಾನ್ ಸರ್ಕಲ್‌ನಲ್ಲಿ ನೋಂದಾಣಿಯಿಸಿಕೊಳ್ಳುವ ಕಾರು ಮಾಲೀಕರಿಗೆ ಕಂಪನಿಯು ಪ್ರತಿ ತಿಂಗಳು ವಿಶೇಷ ಉಡುಗೊರೆಗಳನ್ನು ಪ್ರಕಟಿಸಲಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ನಿಸ್ಸಾನ್ ಪ್ರಕಟಿಸುವ ವಿಶೇಷ ಉಡುಗೊರೆಗಳನ್ನು ಅಂಕಗಳ ರೂಪದಲ್ಲಿ ಮಾಲೀಕರ ಸದಸ್ಯತ್ವ ಕಾರ್ಡಗಳಿಗೆ ವರ್ಗಾವಣೆ ಮಾಡಲಿದ್ದು, ಕಾರು ಮಾಲೀಕರು ಸದಸ್ಯತ್ವದ ಕಾರ್ಡ್ ಮೂಲಕ ದೇಶಾದ್ಯಂತ ನಿಸ್ಸಾನ್ ಕಂಪನಿಯ ಯಾವುದೇ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಬಳಕೆ ಮಾಡಬಹುದಾಗಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ನಿಸ್ಸಾನ್ ಸರ್ಕಲ್‌ನಲ್ಲಿ ದೊರೆಯುವ ರಿವಾರ್ಡ್ ಪಾಯಿಂಟ್‌ಗಳನ್ನು ಗ್ರಾಹಕರು ನಿಸ್ಸಾನ್ ಅಧಿಕೃತ ಬಿಡಿಭಾಗಗಳನ್ನು ಖರೀದಿ ಮಾಡಲು ಅಥವಾ ಯಾವುದೇ ರೀತಿಯ ಮೌಲ್ಯವರ್ಧಿತ ಸೇವೆಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಹೊಸ ಯೋಜನೆ ಅಡಿ ನೋಂದಣಿಯಾಗಲು ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರು ನಿಸ್ಸಾನ್ ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳನ್ನು ಪೂರೈಸಿ ನೋಂದಣಿಯಾಗಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಆಯ್ದ ಗ್ರಾಹಕರು ಹೆಚ್ಚುವರಿ ಬೋನಸ್ ಅನ್ನು ಸಹ ಸ್ವೀಕರಿಸಲಿದ್ದಾರೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಇನ್ನು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ನಿಸ್ಸಾನ್ ಮ್ಯಾಗ್ನೈಟ್(Nissan Magnite) ಕಾರು ಮಾದರಿಯು ಬಿಡುಗಡೆಯ ನಂತರ ಹಲವಾರು ಹೊಸ ದಾಖಲೆಗೆ ಕಾರಣವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಬರೋಬ್ಬರಿ 30 ಸಾವಿರ ಯುನಿಟ್ ವಿತರಣೆಯಾಗಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

2020ರ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ನಿಸ್ಸಾನ್ ಮಾಗ್ನೈಟ್ ಕಾರು ಮಾದರಿಯು ಇದುವರೆಗೆ ಸುಮಾರು 72 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್ ದಾಖಲಾಗಿದ್ದು, ಇದರಲ್ಲಿ 30 ಸಾವಿರ ಯುನಿಟ್ ಕಾರುಗಳನ್ನು ವಿತರಣೆ ಮಾಡಿದೆ. ಹೊಸ ಕಾರು ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಕಂಪಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆಯುತ್ತಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಮ್ಯಾಗ್ನೈಟ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಡುತ್ತಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಹೊಸ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10.15 ಲಕ್ಷ ಬೆಲೆ ಪಡೆದುಕೊಂಡಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಬಿಡಿಭಾಗಗಳ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ಹೊಸ ಕಾರು ಬಿಡುಗಡೆಯ ಎರಡು ಬಾರಿ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರವು ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ದರದಲ್ಲಿ ಮಾರಾಟಗೊಳ್ಳುತ್ತಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ಹೊಸ ಕಾರು ಶೀಘ್ರದಲ್ಲೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಆವೃತ್ತಿಯನ್ನು ಪಡೆದುಕೊಳ್ಳಲಿದೆ.

ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರು ಮಾಲೀಕರಿಗೆ ಹೊಸ ಆಫರ್ ಘೋಷಿಸಿದ ನಿಸ್ಸಾನ್

ಮ್ಯಾಗ್ನೈಟ್ ಕಾರು ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಹೊಸ ಕಾರು ಬಿಡುಗಡೆಯ ಮೊದಲ ವರ್ಷದ ಸಂಭ್ರಮಕ್ಕಾಗಿ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಮ್ಯಾಗ್ನೈಟ್ ಎಕ್ಸ್‌ವಿ ಎಕ್ಸಿಕ್ಯೂಟಿವ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Most Read Articles

Kannada
English summary
Nissan india launches nissan circle program details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X