ಓರಿಕ್ಸ್ ಮತ್ತು ಜೂಮ್‌ಕಾರ್ ಜೊತೆಗೂಡಿ ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಕೋವಿಡ್ ಪರಿಣಾಮ ವಿವಿಧ ಉದ್ಯಮ ವ್ಯವಹಾರಗಳು ಪರಿಸ್ಥಿತಿಗೆ ಅನುಗುಣವಾಗಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಆಟೋ ಕಂಪನಿಗಳು ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ವಾಹನಗಳ ಮೇಲೆ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿವೆ.

ಓರಿಕ್ಸ್ ಮತ್ತು ಜೂಮ್‌ಕಾರ್ ಜೊತೆಗೂಡಿ ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಹೊಸ ವಾಹನ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿರುವ ವಿವಿಧ ಆಟೋ ಕಂಪನಿಗಳು ಕಾರುಗಳ ಮೇಲಿನ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿದ್ದು, ನಿಸ್ಸಾನ್ ಮತ್ತು ದಟ್ಸನ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ಪರಿಚಯಿಸಿವೆ.

ಓರಿಕ್ಸ್ ಮತ್ತು ಜೂಮ್‌ಕಾರ್ ಜೊತೆಗೂಡಿ ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಆಟೋ ಕಂಪನಿಗಳಿಗೆ ಕೋವಿಡ್‌ನಿಂದಾಗುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಾರ್ ಸಬ್‌ಸ್ಕೈಬ್ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿದ್ದು, ನಿಸ್ಸಾನ್ ಇಂಡಿಯಾ ಮತ್ತು ದಟ್ಸನ್ ಕಂಪನಿಗಳು ಕೂಡಾ ತನ್ನ ತನ್ನ ಪ್ರಮುಖ ಕಾರು ಮಾದರಿಗಳನ್ನು ಕಾರ್ ರೆಂಟಲ್‌ ಕಂಪನಿಗಳಲ್ಲಿ ಆಸಕ್ತ ಗ್ರಾಹಕರಿಗೆ ಸಬ್‌ಸ್ಕ್ರೈಬ್ ಆಯ್ಕೆ ಪರಿಚಯಿಸಿವೆ.

ಕಾರ್ ಸಬ್‌ಸ್ಕ್ರೈಬ್ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಓರಿಕ್ಸ್ ಮತ್ತು ಜೂಮ್‌ಕಾರ್‌ ಕಂಪನಿಗಳು ಕೂಡಾ ಇದೀಗ ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಆಯ್ಕೆಗೆ ಅವಕಾಶ ನೀಡಿದ್ದು, ಆಸಕ್ತ ಗ್ರಾಹಕರ ಇದೀಗ ವಿವಿಧ ಕಾರು ಮಾದರಿಗಳ ಜೊತೆ ನಿಸ್ಸಾನ್ ಮತ್ತು ದಟ್ಸನ್ ಕಾರುಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ.

ಓರಿಕ್ಸ್ ಮತ್ತು ಜೂಮ್‌ಕಾರ್ ಜೊತೆಗೂಡಿ ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಗ್ರಾಹಕರು ಹೊಸ ಕಾರು ಮಾದರಿಯನ್ನು 12, 24, 36 ತಿಂಗಳ ಅವಧಿಗೆ ಮಾಲೀಕತ್ವ ಪಡೆದುಕೊಳ್ಳಬಹುದಾಗಿದ್ದು, ಕಾರುಗಳು ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳ ಲೀಸ್ ದರ ಅನ್ವಯವಾಗುತ್ತದೆ.

ಓರಿಕ್ಸ್ ಮತ್ತು ಜೂಮ್‌ಕಾರ್ ಜೊತೆಗೂಡಿ ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಓರಿಕ್ಸ್ ಕಾರ್ ಸಬ್‌ಸ್ಕ್ರೈಬ್ ಆಯ್ಕೆಯಲ್ಲಿ ಹೊಸ ಕಾರುಗಳ ಚಂದಾದಾರಿಕೆಯು ಕನಿಷ್ಠ 12 ತಿಂಗಳು ನಿಗದಿಪಡಿಸಿದ್ದರೆ ಜೂಮ್‌ಕಾರ್ ಕಂಪನಿಯು ದಿನಗಳ ಲೆಕ್ಕಾಚಾರದಲ್ಲೂ ಬಾಡಿಗೆಗೆ ಒದಗಿಸುತ್ತದೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಲೀಸ್ ಪಡೆದ ಕಾರುಗಳ ಚಂದಾ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿರುವ ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 12 ರಿಂದ 24, 36 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಕಾರ್ ಸಬ್‌ಸ್ಕ್ರೈಬ್ ಆಯ್ಕೆಯಲ್ಲಿ ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಯು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ಸಾಮಾನ್ಯ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಕಂಪನಿಯು ಬಂಪರ್ ಟು ಬಂಪರ್ ಸುರಕ್ಷೆಗೆಗಾಗಿ ದುಬಾರಿ ಬೆಲೆಯ ಸಮಗ್ರ ವಿಮಾ ಪಾಲಿಸಿ ಹೊಂದಿರಲಿದ್ದು, ಲೀಸ್ ಸಂದರ್ಭದಲ್ಲಿ ಕಾರುಗಳ ಚಾಲನೆಗೆ ಪ್ರತಿ ತಿಂಗಳು ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿರುತ್ತದೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಲೀಸ್‌ಗೆ ಪಡೆದ ಕಾರುಗಳು ವಾರ್ಷಿಕವಾಗಿ ನಿಗದಿಪಡಿಸಿದ ಕಿ.ಮೀಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಇಂತಿಷ್ಟು ಹೆಚ್ಚುವರಿ ಪಾವತಿ ಮಾಡಬೇಕಿದ್ದು, ತುರ್ತು ಸಂದರ್ಭಗಳಲ್ಲಿ ರೋಡ್ ಅಸಿಸ್ಟ್ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ಚಂದಾದಾರಿಕೆಯ ನಂತರ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಗ್ರಾಹಕರು ವಿವಿಧ ಕಂಪನಿಗಳ ಪಾಲಿಸಿಗಳಿಗೆ ಅನುಗುಣವಾಗಿ ಗ್ರಾಹಕರು ಕನಿಷ್ಠ 12 ತಿಂಗಳುಗಳ ಕಾಲ ಕಾರ್ ಸಬ್‌ಸ್ಕ್ರೈಬ್ ಪಡೆದುದುಕೊಳ್ಳಲೇಬೇಕಾಗುತ್ತದೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಒಂದು ವೇಳೆ ಲೀಸ್ ಪಡೆದುಕೊಂಡ ಅವಧಿಗಿಂತಲೂ ಮೊದಲೇ ಕಾರು ಹಿಂದಿರುಗಿಸುವ ಸಂದರ್ಭ ಎದುರಾದಲ್ಲಿ ಅದಕ್ಕೂ ಅವಕಾಶಗಳನ್ನು ನೀಡಲಾಗಿದ್ದು, ಅವಧಿಗಿಂತಲೂ ಮುಂಚಿತವಾಗಿ ಕಾರು ಹಿಂದಿರುಗಿಸುವುದಾರರೇ ಕೆಲವು ಷರತ್ತುಗಳಿಗೆ ಬದ್ದವಾಗಿರಬೇಕು.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಜೊತೆಗೆ ಕಾರ್ ಸಬ್‌ಸ್ಕ್ರೈಬ್ ಮಾಲೀಕತ್ವವನ್ನು ಕಡೆದುಕೊಳ್ಳುವ 1 ತಿಂಗಳು ಮುಂಚಿತವಾಗಿಯೇ ಕಂಪನಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಸಿಕ ಚಂದಾ ಹಣ ಪಾವತಿಯಲ್ಲೂ ನಿಗದಿತ ಅವಧಿಯನ್ನು ಮೀರಿದರೆ ದಂಡದ ಶುಲ್ಕವನ್ನು ಸಹ ಪಾವತಿಮಾಡಬೇಕಾಗುತ್ತದೆ.

ಓರಿಕ್ಸ್ ಮತ್ತು ಜೂಮ್‌ ಕಾರ್ ಜೊತೆಗೂಡಿ ಕಾರ್ ಸಬ್‌ ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ

ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ನಿಸ್ಸಾನ್ ಕಾರುಗಳ ಸಬ್‌ಸ್ಕ್ರೈಬ್ ಮಾಲೀಕತ್ವದ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.

Most Read Articles

Kannada
English summary
Nissan india zoomcar and orix partner on nissan intelligent ownership subscription plan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X