ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ನಿಸ್ಸಾನ್ ಕಿಕ್ಸ್(Nissan Kicks) ಎಸ್‌ಯುವಿ ಖರೀದಿ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ನಿಸ್ಸಾನ್ ಕಂಪನಿಯು ಹಬ್ಬದ ವರ್ಷಾಂತ್ಯದಲ್ಲಿ ಕಿಕ್ಸ್ ಎಸ್‍ಯುವಿಯ ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ನಿಸ್ಸಾನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಿಕ್ಸ್ ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಆನ್‌ಲೈನ್ ಬುಕ್ಕಿಂಗ್ ಕೂಡ ಸೇರಿದೆ. ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಈ ರಿಯಾಯಿತಿಗಳು ರೂಪಾಂತರಗಳು ಮತ್ತು ಸ್ಥಳಗಳಲ್ಲಿ ಬದಲಾಗುತ್ತದೆ. ಸ್ಟಾಕ್ ಇರುವವರೆಗೆ ಅನ್ವಯವಾಗುತ್ತದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಪ್ರಕಾರ, ಟರ್ಬೊ ಪೆಟ್ರೋಲ್ ರೂಪಾಂತರದ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಅದರಂತೆ ರೂ.15,000 ನಗದು ರಿಯಾಯಿತಿ ಮತ್ತು ರೂ.70,000 ವರೆಗಿನ ವಿನಿಮಯ ಬೋನಸ್ ಅನ್ನು ನೀಡಲಾಗುತ್ತದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ಈ ನಿಸ್ಸಾನ್ ಕಿಕ್ಸ್ ಎಸ್‍ಯುವಿಯನ್ನು ಬ್ರ್ಯಾಂಡ್‌ನ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿದರೆ ರೂ.5,000 ಬೋನಸ್ ಅನ್ನು ಪಡೆಯಬಹುದಾಗಿದೆ. ಇದರೂಂದಿಗೆ ರೂ.10,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಈ ಹೊಸ ನಿಸ್ಸಾನ್ ಕಿಕ್ಸ್ ಎಸ್‍ಯುವಿಗ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ಕಿಕ್ಸ್ ಎಸ್‍ಯುವಿಯ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅಥವಾ ಬ್ರ್ಯಾಂಡ್‌ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ನಿಸ್ಸಾನ್ ಸರಣಿಯಲ್ಲಿ ಅತಿ ಹೆಚ್ಚು ಪವರ್‍ ಫುಲ್ ಎಂಜಿನ್ ಅನ್ನು ಕಿಕ್ಸ್ ಎಸ್‍ಯುವಿಯನ್ನು ಒಳಗೊಂಡಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಈ ನಿಸ್ಸಾನ್ ಕಿಕ್ಸ್ ಎಸ್‍ಯುವಿಯಲ್ಲಿ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿವೆ. ಈ ನಿಸ್ಸಾನ್ ಕಿಕ್ಸ್ ಎಸ್‍ಯುವಿ ಮಾದರಿಯಲ್ಲಿ ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ಸ್ ಗಳನ್ನು ಹೊಂದಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇದರೊಂದಿಗೆ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್, ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಒಳಗೊಂಡಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ನಿಸ್ಸಾನ್ ಇಂಡಿಯಾ ಕಂಪನಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದಲ್ಲಿ ಮ್ಯಾಗ್ನೈಟ್ ಅನ್ನು ಬಿಡುಗಡೆ ಮಾಡಿತು. ಈ ಚಿಕ್ಕ ಕ್ರಾಸ್ಒವರ್ ತ್ವರಿತವಾಗಿ ಭಾರತೀಯ ಮಾರುಕಟ್ಟೆಯನ್ನು ಬಹುಬೇಡಿಕೆಯನ್ನು ಪಡೆದುಕೊಂಡಿತು. ಇದೀಗ ಕಂಪನಿಯು ಮಾರಾಟದ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ಭಾರತ-ನಿರ್ದಿಷ್ಟ ಮಾದರಿಗಳೊಂದಿಗೆ ಇಲ್ಲಿ ತನ್ನ ಸರಣಿಯನ್ನು ವಿಸ್ತರಿಸಲು ಯೋಜಿಸುತ್ತಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇತ್ತೀಚಿನ ವರದಿಯ ಪ್ರಕಾರ, ನಿಸ್ಸಾನ್ ಭಾರತಕ್ಕಾಗಿ ಹೊಸ ಮೂರು-ಸಾಲಿನ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ, ಇದರ ಬಗ್ಗೆ ಮಾಹಿತಿಯು ಸದ್ಯಕ್ಕೆ ವಿರಳವಾಗಿದೆ. ಈ ಹೊಸ ಎಂಪಿವಿಯನ್ನು ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ ಟ್ರೈಬರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳಲ್ಲಿ ಈಗಾಗಲೇ ಬಳಸಲಾಗುತ್ತಿರುವ ಸಿಎಂಎಫ್-ಎ ಪ್ಲಾಟ್‌ಫಾರ್ಮ್‌ ಹೊಸ ಎಂಪಿವಿಯು ಆಧರಿಸಿರುತ್ತದೆ. ಏಕೆಂದರೆ ಹೊಸ ಎಂಪಿವಿ ಟ್ರೈಬರ್‌ಗಿಂತ ದೊಡ್ಡದಾಗಿರುತ್ತದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಕ್ರ್ಯಾಶ್ ಪರೀಕ್ಷೆಯಲ್ಲಿ ಮ್ಯಾಗ್ನೈಟ್ 4 ಸ್ಟಾರ್‌ಗಳನ್ನು ಗಳಿಸಿದೆ ಮತ್ತು ರೆನಾಲ್ಟ್ ಕಿಗರ್‌ಗೆ 4-ಸ್ಟಾರ್ ರೇಟಿಂಗ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಪರಿಗಣಿಸಿ ನಾವು ಅದರಿಂದ ಹೊಸ ಎಂಪಿವಿಯು ಉತ್ತಮ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ನಿರೀಕ್ಷಿಸಬಹುದು. ಪವರ್‌ಟ್ರೇನ್ ಆಯ್ಕೆಗಳು ಮ್ಯಾಗ್ನೈಟ್‌ನಂತೆಯೇ ಇರಬೇಕೆಂದು ನಾವು ನಿರೀಕ್ಷಿಸುತ್ತೇವೆ ಇದರಲ್ಲಿ 1.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಇದರಲ್ಲಿ 1.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ಟರ್ಬೋಚಾರ್ಜ್ಡ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.ಗೇರ್ ಬಾಕ್ಸ್ ಆಯ್ಕೆಗಳು ಸಹ ಈಗ ತಿಳಿದಿಲ್ಲ. ಆದರೆ, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಎರಡೂ ಎಂಜಿನ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿರುತ್ತದೆ. ಇನ್ನು ರೆನಾಲ್ಟ್ ಕಿಗರ್‌ನಿಂದ 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಪಡೆಯಬಹುದು. ಇದರೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ Nissan Kicks ಎಸ್‍ಯುವಿ ಖರೀದಿ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ನಿಸ್ಸಾನ್ ಕಿಕ್ಸ್ ಪವರ್ ಫುಲ್ ಎಂಜಿನ್ ಮತ್ತು ನೂತನ ಫೀಚರ್ ಗಳನ್ನು ಒಳಗೊಂಡಿರುವ ಎಸ್‍ಯುವಿಯಾಗಿದೆ. ಈ ನಿಸ್ಸಾನ್ ಕಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಭರ್ಜರಿ ರಿಯಾಯಿತಿಯನ್ನು ನೀಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಬಹುದು.

Most Read Articles

Kannada
English summary
Nissan kicks suv december offer upto rs 1 lakh find here more details
Story first published: Thursday, December 9, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X