Just In
- 2 hrs ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- 2 hrs ago ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ: ಫೋರ್ಸ್ ಗೂರ್ಖಾ 5-ಡೋರ್ ಬಿಡುಗಡೆಗೆ ಸಜ್ಜು
- 2 hrs ago 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- 3 hrs ago ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
Don't Miss!
- News Shivamogga: ದೇಶದಲ್ಲಿ ಕಾಂಗ್ರೆಸ್ನ ಸ್ಪರ್ಧೆಯ ಕ್ಷೇತ್ರ, ಟಾರ್ಗೆಟ್ ಕ್ಷೇತ್ರಗಳ ಲೆಕ್ಕ ಕೊಟ್ಟ ಮಾಜಿ ಸಿಎಂ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾದ ಕೇವಲ 45 ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್ಯುವಿ ಕಾರು ಬಿಡುಗಡೆಯ ಮೂಲಕ ಹೊಸ ದಾಖಲೆಗೆ ಕಾರಣವಾಗಿರುವ ನಿಸ್ಸಾನ್ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
2020ರ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ಮ್ಯಾಗ್ನೈಟ್ ಹೊಸ ಕಾರು ಮಾದರಿಯು ಒಂದೂವರೆ ತಿಂಗಳ ಅವಧಿಯಲ್ಲಿ ಬರೋಬ್ಬರಿ 35 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಬಿಡುಗಡೆಯಾದ ಮೊದಲ ತಿಂಗಳು ಪ್ರತಿ ದಿನ ಸರಾಸರಿಯಾಗಿ 1 ಸಾವಿರ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ. ಹೊಸ ಕಾರಿನೊಂದಿಗೆ ಹಲವು ದಾಖಲೆಗಳಿಗೆ ಕಾರಣವಾಗಿರುವ ನಿಸ್ಸಾನ್ ಕಂಪನಿಯು ಬುಕ್ಕಿಂಗ್ ಪ್ರಕ್ರಿಯೆ ಅನುಗುಣವಾಗಿ ಕಾರು ಉತ್ಪಾದನೆಯನ್ನು ತೀವ್ರಗೊಳಿಸಿದ್ದು, ಹೊಸ ಕಾರು ಖರೀದಿಗೆ ಹೊಸದಾಗಿ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರು ಕನಿಷ್ಠ 2 ತಿಂಗಳಿನಿಂದ ಗರಿಷ್ಠ 10 ತಿಂಗಳು ಕಾಯಲೇಬೇಕಾದ ಅನಿವಾರ್ಯತೆಗಳಿವೆ.
ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಹೊಸ ಮ್ಯಾಗ್ನೈಟ್ ಕಾರು ಮಾದರಿಯು ಅತ್ಯುತ್ತಮ ಬೇಡಿಕೆ ತಂದುಕೊಡುತ್ತಿದ್ದು, ಹೊಸ ಕಾರು ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್ಗಳನ್ನು ಹೊಂದಿರುವುದೇ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲು ಪ್ರಮುಖ ಕಾರಣವಾಗಿದೆ.
ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದ್ದು, ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ನಲ್ಲೂ ಉತ್ತಮ ರೇಟಿಂಗ್ಸ್ ಪಡೆದುಕೊಂಡಿರುವುದು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ.
ಮ್ಯಾಗ್ನೈಟ್ ಕಾರು ಮಾದರಿಯು ಎಕ್ಸ್ಇ, ಎಕ್ಸ್ಎಲ್, ಎಕ್ಸ್ವಿ ಮತ್ತು ಎಕ್ಸ್ವಿ ಪ್ರೀಮಿಯಂ ಎನ್ನುವ ನಾಲ್ಕು ಆವೃತ್ತಿಗಳನ್ನು ಹೊಂದಿರುವ ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆ ನೀಡಲಾಗಿದೆ.
1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಿದೆ.
1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!
ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.
ಜೊತೆಗೆ ಡ್ಯುಯಲ್ ಫ್ರಂಟ್ ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!
ಪ್ರಸ್ತುತ ಮಾರುಕಟ್ಟೆಯಲ್ಲಿ ನಿಸ್ಸಾನ್ ಮಾಗ್ನೈಟ್ ಹೊರತುಪಡಿಸಿ ಬಹುತೇಕ ಪ್ರತಿಸ್ಪರ್ಧಿ ಕಾರು ಮಾದರಿಗಳು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗಳು ರೂ. 12.80 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದ್ದು, ಉತ್ತಮ ಬೆಲೆ ಪೈಪೋಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮ್ಯಾಗ್ನೈಟ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್ಯುವಿ ಜೊತೆಗೆ ಹ್ಯಾಚ್ಬ್ಯಾಕ್ ಕಾರು ಖರೀದಿದಾರನ್ನು ಕೂಡಾ ಸೆಳೆಯುತ್ತಿದೆ.