Just In
- 1 hr ago
ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್
- 3 hrs ago
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ರೂ.60 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಜಾಜ್ ಸಿಟಿ 110 ಎಕ್ಸ್ ಬೈಕ್
- 6 hrs ago
ಮಕ್ಕಳಿಗಾಗಿ 60-70 ಕಿ.ಮೀ ವರೆಗೆ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
Don't Miss!
- News
ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ
- Sports
ಗೇಲ್ ಮತ್ತು ರಾಹುಲ್ರನ್ನು ಆರ್ಸಿಬಿಗೆ ಸ್ವಾಗತಿಸಿದ ಚಹಾಲ್
- Movies
ಮುಂದುವರೆಯಲಿದೆ ರಾಜೇಂದ್ರ ಪೊನ್ನಪ್ಪ ಕುತೂಹಲಕಾರಿ ಕತೆ: 'ದೃಶ್ಯ 2'ಗೆ ರವಿಚಂದ್ರನ್ ರೆಡಿ
- Finance
ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 13ರಂದು 10 ಗ್ರಾಂ ಬೆಲೆ ಎಷ್ಟಿದೆ?
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಕೈಗೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಅಂತಿಮ ಹಂತದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ಪ್ರಕಟಿಸಿದ್ದು, ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತಿದೆ. ಹೊಸ ಸ್ಕ್ರ್ಯಾಪೇಜ್ ನೀತಿಯು 2022ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದ್ದು, 20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್ಗೊಳ್ಳಲಿವೆ.

ಹೊಸ ನೀತಿಯಿಂದಾಗಿ ಕೇವಲ ಆಟೋ ಉದ್ಯಮಕ್ಕೆ ಮಾತ್ರವಲ್ಲ ಮಾಲಿನ್ಯ ಮತ್ತು ತೈಲ ಆಮದು ತಗ್ಗಿಸಲು ಪರಿಣಾಮಕಾರಿಯಾದ ನೀತಿಯಾಗಿದ್ದು, ಹಳೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಿದ್ದಲ್ಲಿ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯ ಹೊಂದಿರುವ ಹೊಸ ವಾಹನಗಳ ಉತ್ತೇಜಿಸಲು ಸಹಕಾರಿಯಾಗಲಿದೆ.

ಜೊತೆಗೆ ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ನಿಯಮದಲ್ಲಿ ಹಳೆಯ ವಾಹನಗಳಿಗೆ ಮತ್ತು ಅನರ್ಹ ವಾಹನಗಳಿಗೆ ಪ್ರತ್ಯೇಕವಾಗಿ ಸ್ಕ್ರ್ಯಾಪೇಜ್ ನಿಯಮಗಳು ಅನ್ವಯವಾಗಲಿವೆ.

ಬಜೆಟ್ ಮಂಡನೆ ವೇಳೆ ಕೇವಲ ಹೊಸ ಸ್ಕ್ರ್ಯಾಪೇಜ್ ನೀತಿ ಪ್ರಮುಖಾಂಶಗಳನ್ನು ಮಾತ್ರ ಪ್ರಸ್ತಾಪಿಸಲಾಗಿದ್ದು, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನೀತಿಯ ಕುರಿತಂತೆ ಇದೀಗ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದೆ. ಸ್ಕ್ರ್ಯಾಪಿಂಗ್ ನೀತಿ ಅಳವಡಿಸಿಕೊಳ್ಳುವ ಮಾಲೀಕರಿಗೆ ಪರಿಹಾರವೇನು? ಎನ್ನುವ ಪ್ರಶ್ನೆ ಉತ್ತರಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅವಧಿ ಮೀರಿದ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜುರಿಗೆ ಹಾಕುವ ಮಾಲೀಕರಿಗೆ ಹೊಸ ವಾಹನ ಖರೀದಿಗೆ ಶೇ.5 ರಷ್ಟು ವಿನಾಯ್ತಿ ನೀಡಲಾಗುವುದು ಎಂದಿದ್ದಾರೆ.

ಜೊತೆಗೆ ಸ್ವಯಂಪ್ರೇರಿತ ಗುಜುರಿ ನೀತಿ ಅಳವಡಿಸಿಕೊಳ್ಳದ ವಾಹನಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳವ ಬಗೆಗೂ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವರು ದುಬಾರಿ ಮೊತ್ತದ ಹನಿರು ತೆರಿಗೆ ವಿಧಿಸುವ ಸುಳಿವು ನೀಡಿದ್ದಾರೆ.

ಹಸಿರು ತೆರಿಗೆ ನೀತಿ ಅಡಿಯಲ್ಲಿ ಹಳೆಯ ವಾಹನ ಮಾಲೀಕರು ದುಬಾರಿ ಮೊತ್ತವನ್ನು ಪಾವತಿ ಮಾಡಬೇಕಿದ್ದು, ವಾಹನ ನಿರ್ವಹಣೆಯು ಮತ್ತಷ್ಟು ಹೊರೆಯಾಗಲಿದೆ. ಇದರಿಂದ ಮಾಲೀಕರು ಸ್ವಯಂಪ್ರೇರಿತವಾಗಿ ಗುಜುರಿ ನೀತಿ ಅಳವಡಿಸಿಕೊಳ್ಳಬೇಕು ಇಲ್ಲವೇ ತಮ್ಮಇಷ್ಟದ ಹಳೆಯ ವಾಹನವನ್ನು ಮುಂದುವರಿಸುವುದಾರರೆ ದುಬಾರಿ ಮೊತ್ತದ ತೆರಿಗೆ ಪಾವತಿಸಲು ಸಜ್ಜಾಗಬೇಕಿದೆ.

ಸ್ಕ್ರ್ಯಾಪೇಜ್ ನೀತಿಯ ಕುರಿತಾಗಿ ಕೆಲವೇ ಕೆಲವು ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವರು ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ಪ್ರಕಟಿಸುವುತ್ತಿರುವುದಾಗಿ ಹೇಳಿಕೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿ ಅಳವಡಿಕೆಯಿಂದ ಮರುಬಳಕೆಯ ಉದ್ಯಮವನ್ನೂ ಪ್ರೋತ್ಸಾಹಿಸಲು ಹೊಸ ನೀತಿಯು ಪ್ರಮುಖ ಪಾತ್ರವಹಿಸಲಿದೆ ಎಂದಿದ್ದಾರೆ.

ಇನ್ನು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯಲ್ಲಿ ಹಳೆಯ ವಾಹನಗಳನ್ನು ಮಾಲೀಕರೇ ನೇರವಾಗಿ ಅಧಿಕೃತ ಸ್ಕ್ರ್ಯಾಪೇಜ್ ಕೇಂದ್ರಗಳಲ್ಲಿ ಸ್ಕ್ಯಾಪ್ ಮಾಡಿಸುವ ಮೂಲಕ ಹೊಸ ವಾಹನಗಳ ಖರೀದಿಗೆ ಕೆಲವು ವಿನಾಯ್ತಿ ಪಡೆದುಕೊಳ್ಳಬಹುದಾಗಿದ್ದು, ಹೊಸ ನೀತಿಯನ್ನು 2022ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆಗೊಳಿಸಲಾಗುತ್ತಿದೆ.

ಹೊಸ ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಯ ಪ್ರಕ್ರಿಯೆ ಹೆಚ್ಚಳವಾಗುವುದರಿಂದ ಹೊಸ ವಾಹನಗಳ ಬೆಲೆ ಕೂಡಾ ಕಡಿತವಾಗಲಿದ್ದು, ಸಾರಿಗೆ ಇಲಾಖೆಯ ಸಚಿವರ ಮಾಹಿತಿಯೆಂತೆ ಹೊಸ ವಾಹನಗಳ ಉತ್ಪಾದನಾ ವೆಚ್ಚವು ಪ್ರಸ್ತುತ ಮಾರುಕಟ್ಟೆಗಿಂತಲೂ ಶೇ. 20ರಿಂದ ಶೇ.30 ರಷ್ಟು ಇಳಿಕೆಯಾಗುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.

ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ಸ್ಟೀಲ್, ಪ್ಲಾಸ್ಟಿಕ್ ಮತ್ತು ರಬ್ಬರ್ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿ ಮರುಬಳಕೆಯಾಗುವುದರಿಂದ ಹೊಸ ವಾಹನಗಳ ಬೆಲೆಯಲ್ಲಿ ಇಳಿಕೆಯಾಗಿ ಹೊಸ ವಾಹನ ಖರೀದಿ ಹೆಚ್ಚಳವಾಗುವುದರ ಜೊತೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಸೃಷ್ಠಿಯಾಗುವ ನೀರಿಕ್ಷೆಯಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಜೊತೆಗೆ ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ನಿಯಮದಲ್ಲಿ ಹಳೆಯ ವಾಹನಗಳಿಗೆ ಮತ್ತು ಬಳಕೆ ಯೋಗ್ಯವಲ್ಲದ ಅನರ್ಹ ವಾಹನಗಳಿಗೆ ಪ್ರತ್ಯೇಕವಾಗಿ ಸ್ಕ್ರ್ಯಾಪೇಜ್ ನಿಯಮಗಳು ಅನ್ವಯವಾಗಲಿವೆ.