ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತದಲ್ಲಿ ಪರ್ಯಾಯ ಇಂಧನಗಳ ಬಳಕೆಗೆ ಉತ್ತೇಜನ ನೀಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್‌ ಬಳಕೆಯನ್ನು ಕಡಿಮೆ ಮಾಡಿ ಕಚ್ಚಾ ತೈಲದ ಆಮದು ಪ್ರಮಾಣವನ್ನು ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಹೊಸ ಕಾರು ಖರೀದಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಅಂದ ಹಾಗೆ ನಿತಿನ್ ಗಡ್ಕರಿ ರವರು ಖರೀದಿಸಿರುವ ಹೊಸ ಕಾರು ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿಯಿಂದ ಚಲಿಸುವುದಿಲ್ಲ. ಬದಲಿಗೆ ಈ ಕಾರು ಹೈಡ್ರೋಜನ್ ನಿಂದ ಚಲಿಸುತ್ತದೆ. ಸಚಿವ ನಿತಿನ್ ಗಡ್ಕರಿ ರವರು ಇತ್ತೀಚೆಗೆ ತ್ಯಾಜ್ಯದಿಂದ ಮೌಲ್ಯಯುತ ವಸ್ತುಗಳನ್ನು ರಚಿಸುವುದು ಎಂಬ ಸಮಾವೇಶದಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಭಾರತದ ಪ್ರಮುಖ ನಗರಗಳಲ್ಲಿ ಬಸ್‌ಗಳು, ಲಾರಿಗಳು ಹಾಗೂ ಕಾರುಗಳು ಹೈಡ್ರೋಜನ್‌ನಿಂದ ಚಾಲಿತವಾಗಿರಬೇಕು ಎಂದು ಹೇಳಿದ್ದರು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ನಾನು ಬಸ್, ಲಾರಿ, ಕಾರುಗಳನ್ನು ಹಸಿರು ಜಲಜನಕದಿಂದ ಓಡಿಸುವ ಯೋಜನೆ ಹೊಂದಿದ್ದೇನೆ. ತ್ಯಾಜ್ಯ ನೀರು ಹಾಗೂ ಘನ ತ್ಯಾಜ್ಯವನ್ನು ಬಳಸಿ ಇವುಗಳನ್ನು ತಯಾರಿಸಬಹುದು. ನಾನು ತ್ಯಾಜ್ಯದಿಂದ ಅಮೂಲ್ಯವಾದ ಉತ್ಪನ್ನಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದರು. ತಾವು ಹೊಸದಾಗಿ ಖರೀದಿಸಿರುವ ಹೈಡ್ರೋಜನ್ ಕಾರ್ ಅನ್ನು ದೆಹಲಿಯಲ್ಲಿ ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಕಾರುಗಳು ಹೈಡ್ರೋಜನ್‌ನಿಂದಲೂ ಚಾಲಿತವಾಗುತ್ತವೆ ಎಂಬ ನಂಬಿಕೆಯನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಅವರ ಉದ್ದೇಶವಾಗಿದೆ. ತಮ್ಮ ಹೊಸ ಕಾರು ಖರೀದಿಯ ಬಗ್ಗೆ ಮಾತನಾಡಿರುವ ನಿತಿನ್ ಗಡ್ಕರಿ, ನಾನು ಹೈಡ್ರೋಜನ್‌ನಿಂದ ಚಲಿಸಬಲ್ಲ ಪೈಲಟ್ ಪ್ರಾಜೆಕ್ಟ್ ಕಾರ್ ಅನ್ನು ಖರೀದಿಸಿದ್ದೇನೆ. ಈ ಕಾರ್ ಅನ್ನು ಫರಿದಾಬಾದ್‌ನ ತೈಲ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಜನರಲ್ಲಿ ಆತ್ಮವಿಶ್ವಾಸ ತುಂಬಲು ನಾನು ಈ ಕಾರಿನಲ್ಲಿ ಸಂಚರಿಸುತ್ತೇನೆ ಎಂದು ಹೇಳಿದರು. ಸದ್ಯಕ್ಕೆ ಭಾರತವು ಪ್ರತಿ ವರ್ಷ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗಾಗಿ ಸುಮಾರು 8 ಟ್ರಿಲಿಯನ್ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಭಾರತವು ಸಾಂಪ್ರದಾಯಿಕ ಇಂಧನಗಳ ಮೇಲೆ ಅವಲಂಬಿತವಾದರೆ ಮುಂದಿನ 5 ವರ್ಷಗಳಲ್ಲಿ ರೂ. 25 ಲಕ್ಷ ಕೋಟಿ ಖರ್ಚು ಮಾಡಬೇಕಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಹೆಚ್ಚಿನ ವೆಚ್ಚದ ಕಾರಣ ಪರ್ಯಾಯ ಇಂಧನಗಳಿಗೆ ಬದಲಾಯಿಸುವ ಅಗತ್ಯವನ್ನು ಸಚಿವ ನಿತಿನ್ ಗಡ್ಕರಿ ಪದೇ ಪದೇ ಒತ್ತಿ ಹೇಳಿದ್ದಾರೆ. ಪರ್ಯಾಯ ಇಂಧನಗಳಿಗೆಬದಲಾಗುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಕಡಿಮೆ ಮಾಡಬಹುದು. ಜೊತೆಗೆ ವಾಯು ಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಬಹುದು. ಭಾರತದಲ್ಲೂ ವಾಯು ಮಾಲಿನ್ಯದ ಸಮಸ್ಯೆ ಹೆಚ್ಚುತ್ತಿದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಪರಿಸ್ಥಿತಿ ಭೀಕರವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಜನರು ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿಯಂತಹ ಪರ್ಯಾಯ ಇಂಧನಗಳಿಗೆ ಬದಲಾಗುವುದು ಅವಶ್ಯಕ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಭಾರತದಲ್ಲಿ ಒಂದು ಕಾಲದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಕಾಣುವುದು ಬಲು ಅಪರೂಪವಾಗಿತ್ತು. ಆದರೆ ಈಗ ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಕಾಣಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಗೂ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿವೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಆಗ ಸಾಮಾನ್ಯ ಪೆಟ್ರೋಲ್, ಡೀಸೆಲ್ ವಾಹನಗಳನ್ನು ನೋಡುವುದು ಅಪರೂಪವಾಗಬಹುದು. ಅಂತಹ ದಿನ ಬರುವುದು ಖಚಿತ. ಬಹುಶಃ ಮುಂದಿನ ದಶಕದಲ್ಲಿ ಈ ರೀತಿಯಾಗುವ ಸಾಧ್ಯತೆಗಳಿವೆ. ಇದಕ್ಕೆ ಪ್ರಮುಖ ಕಾರಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕ್ರಮಗಳು ಹಾಗೂ ಸಾರ್ವಜನಿಕರಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ನಿತಿನ್ ಗಡ್ಕರಿ ರವರು ಶೀಘ್ರದಲ್ಲಿಯೇ ಕಾರುಗಳಲ್ಲಿ ಫ್ಲೆಕ್ಸ್ ಎಂಜಿನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸುವುದಾಗಿ ಕೆಲವು ದಿನಗಳ ಹಿಂದಷ್ಟೇ ತಿಳಿಸಿದ್ದರು. ಫ್ಲೆಕ್ಸ್ ಇಂಧನವು ಗ್ಯಾಸೋಲಿನ್, ಮೆಥನಾಲ್ ಅಥವಾ ಎಥೆನಾಲ್ ಸಂಯೋಜನೆಯಿಂದ ಮಾಡಿದ ಪರ್ಯಾಯ ಇಂಧನವಾಗಿದೆ. ಪೆಟ್ರೋಲ್, ಡೀಸೆಲ್ ಇಂಧನಗಳ ಆಮದನ್ನು ಕಡಿಮೆ ಮಾಡಲು, ನಾನು ಮುಂದಿನ 2 - 3 ದಿನಗಳಲ್ಲಿ ಆದೇಶವನ್ನು ಹೊರಡಿಸಲಿದ್ದೇನೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಕಾರು ತಯಾರಕ ಕಂಪನಿಗಳು ಫ್ಲೆಕ್ಸ್ ಇಂಧನ ಎಂಜಿನ್ ವಾಹನಗಳನ್ನು (ಒಂದಕ್ಕಿಂತ ಹೆಚ್ಚು ಇಂಧನದಿಂದ ಚಲಾಯಿಸಬಹುದು) ಹೊಂದುವಂತೆ ಕೇಳಿ ಕೊಳ್ಳುತ್ತೇನೆ. ವಾಹನ ತಯಾರಕ ಕಂಪನಿಗಳು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಗ್ರಾಹಕರಿಗೆ ಫ್ಲೆಕ್ಸ್ ಎಂಜಿನ್ ಆಯ್ಕೆಯನ್ನು ನೀಡುತ್ತಾರೆ ಎಂದು ಅವರು ಭಾವಿಸುತ್ತೇನೆ ಎಂದು ಗಡ್ಕರಿ ಹೇಳಿದ್ದರು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಫ್ಲೆಕ್ಸ್ ಇಂಧನದಿಂದ ಭಾರತದಲ್ಲಿ ಪ್ರತಿ ವರ್ಷ ರೂ. 1 ಲಕ್ಷ ಕೋಟಿಗೂ ಹೆಚ್ಚು ಎಥೆನಾಲ್ ವ್ಯವಹಾರ ಮಾಡಬಹುದು. ಎಥೆನಾಲ್ ಬಳಕೆಯಿಂದ ಪೆಟ್ರೋಲ್ ಆಮದು ಕಡಿಮೆಯಾಗಲಿದ್ದು, ಕೋಟ್ಯಂತರ ರೂಪಾಯಿ ಆದಾಯ ಉಳಿತಾಯವಾಗಲಿದೆ. ಇದಲ್ಲದೇ ಎಥೆನಾಲ್ ಮಿಶ್ರಿತ ಫ್ಲೆಕ್ಸ್ ಇಂಧನ ಬಳಕೆಯಿಂದ ವಾಯು ಮಾಲಿನ್ಯವೂ ಕಡಿಮೆಯಾಗಲಿದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಬ್ರೆಜಿಲ್, ಕೆನಡಾ ಹಾಗೂ ಅಮೆರಿಕಾದಂತಹ ದೇಶಗಳು ಫ್ಲೆಕ್ಸ್ ಇಂಧನದಲ್ಲಿ ಚಲಿಸುವ ವಾಹನಗಳನ್ನು ಉತ್ಪಾದಿಸುತ್ತವೆ. ಇಲ್ಲಿ ಗ್ರಾಹಕರು 100% ಪೆಟ್ರೋಲ್ ಅಥವಾ 100% ಎಥೆನಾಲ್'ನಲ್ಲಿ ಚಲಿಸುವ ವಾಹನಗಳನ್ನು ಆಯ್ಕೆ ಮಾಡಬಹುದು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ಎಥೆನಾಲ್ ಇಂಧನದ ಬೆಲೆ ಪೆಟ್ರೋಲ್ ಗಿಂತ ರೂ. 30 ರಿಂದ ರೂ. 35 ಗಳಷ್ಟು ಕಡಿಮೆಯಾಗಲಿದೆ. ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆಯಿಂದ ಸಂಪೂರ್ಣವಾಗಿ ಎಥೆನಾಲ್'ನಲ್ಲಿ ಚಲಿಸುವ ವಾಹನಗಳು ಪರಿಣಾಮ ಬೀರುವುದಿಲ್ಲ. ಎಥೆನಾಲ್ ತಯಾರಿಸಲು ನಮ್ಮ ದೇಶದಲ್ಲಿ ಸಾಕಷ್ಟು ಪ್ರಮಾಣದ ಜೋಳ, ಕಬ್ಬು ಮತ್ತು ಗೋಧಿಯನ್ನು ಬೆಳೆಯಬಹುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈಡ್ರೋಜನ್ ಕಾರು ಖರೀದಿಸಿದ ಸಾರಿಗೆ ಸಚಿವ

ವಾಹನ ತಯಾರಕ ಕಂಪನಿಗಳು ಫ್ಲೆಕ್ಸ್ ಇಂಜಿನ್ ವಾಹನಗಳನ್ನು ಪರಿಚಯಿಸಿದರೆ, ಅಗ್ಗದ ಇಂಧನದ ಪ್ರಯೋಜನವನ್ನು ಪಡೆಯುತ್ತೇವೆ. ಜೊತೆಗೆ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Nitin gadkari buys hydrogen car to create awareness among people details
Story first published: Monday, December 6, 2021, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X