ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಓಲಾ (Ola) ಕಂಪನಿಯು ಕಳೆದ ತಿಂಗಳು ಓಲಾ ಕಾರ್ಸ್ ಎಂಬ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ಲಾಟ್ ಫಾರಂ ಅನ್ನು ಆರಂಭಿಸಿತ್ತು. ಕಂಪನಿಯು ಈ ಪ್ಲಾಟ್ ಫಾರಂ ಅನ್ನು ದೇಶದ ಏಳು ನಗರಗಳಲ್ಲಿ ಆರಂಭಿಸಿದೆ. ಓಲಾ ಕಾರ್ಸ್ ಪ್ಲಾಟ್ ಫಾರಂ ಅಡಿಯಲ್ಲಿ ಕಂಪನಿಯು ಒಂದು ತಿಂಗಳಲ್ಲಿ ಸುಮಾರು 5,000 ಕಾರುಗಳನ್ನು ಮಾರಾಟ ಮಾಡಿದೆ. ಇದರ ಅಡಿಯಲ್ಲಿ ಕಂಪನಿಯು 10,000 ಜನರಿಗೆ ಉದ್ಯೋಗವನ್ನು ನೀಡಲು ಮುಂದಾಗಿದೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಓಲಾ ಕಾರ್ಸ್ ಈ ವಾರದ ಅಂತ್ಯದ ವೇಳೆಗೆ ಇನ್ನೂ ನಾಲ್ಕು ನಗರಗಳಲ್ಲಿ ಈ ಪ್ಲಾಟ್ ಫಾರಂ ಅನ್ನು ಆರಂಭಿಸಲಿದೆ. ಓಲಾ ಕಂಪನಿಯು ಸದ್ಯಕ್ಕೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್ ಹಾಗೂ ಅಹಮದಾಬಾದ್‌ ನಗರಗಳಲ್ಲಿ ಮಾರಾಟ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಪ್ಲಾಟ್ ಫಾರಂ ಚಂಡೀಗಢ, ಜೈಪುರ, ಕೋಲ್ಕತಾ ಹಾಗೂ ಇಂದೋರ್‌ನಂತಹ ನಗರಗಳಲ್ಲಿ ಆರಂಭವಾಗಲಿದೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಕಂಪನಿಯ ಸೆಕೆಂಡ್ ಹ್ಯಾಂಡ್ ಕಾರು ಮಾರಾಟವು ಕೆಲವೇ ದಿನಗಳಲ್ಲಿ 30 ನಗರಗಳಲ್ಲಿ ಲಭ್ಯವಿರಲಿದ್ದು, ಮುಂಬರುವ ವರ್ಷದಲ್ಲಿ 100 ನಗರಗಳಿಗೆ ವಿಸ್ತರಿಸಲಿದೆ. ಈ ಪ್ಲಾಟ್‌ಫಾರಂ ಅಡಿಯಲ್ಲಿ ಕಾರು ಖರೀದಿಸುವವರು ಏಳು ದಿನಗಳಲ್ಲಿ ಕಾರ್ ಅನ್ನು ಹಿಂತಿರುಗಿಸಬಹುದು. ಓಲಾ ಕಾರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರಿಗೆ ವಾಹನ ಸಂಬಂಧಿತ ಸೇವೆಗಳನ್ನು ನೀಡಲಾಗುತ್ತಾದೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಈ ಸೇವೆಗಳಲ್ಲಿ ವಾಹನ ಹಣಕಾಸು, ವಿಮೆ, ನೋಂದಣಿ, ನಿರ್ವಹಣೆ, ವಾಹನ ತಪಾಸಣೆ, ಬಿಡಿ ಭಾಗಗಳು ಹಾಗೂ ವಾಹನ ಮರು ಮಾರಾಟ ಸೌಲಭ್ಯಗಳು ಸೇರಿವೆ. ಕಾರುಗಳ ಖರೀದಿ ಹಾಗೂ ಮಾರಾಟವನ್ನು ಸುಲಭಗೊಳಿಸಲು ಬಯಸುವ ಗ್ರಾಹಕರಿಗೆ ಇದೊಂದು ಪ್ರಮುಖ ಪ್ಲಾಟ್ ಫಾರಂ ಆಗಿದೆ ಎಂದು ಕಂಪನಿ ಹೇಳಿದೆ. ಓಲಾ ಕಾರ್ಸ್ ಪ್ಲಾಟ್‌ಫಾರಂ ಮೂಲಕ ವಾಹನಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಹಳೆಯ ವಿಧಾನಗಳಲ್ಲಿ ಬದಲಾವಣೆಯನ್ನು ತರಲು ಕಂಪನಿ ಮುಂದಾಗಿದೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಈ ಪ್ಲಾಟ್‌ಫಾರಂ ಸಂಪೂರ್ಣವಾಗಿ ಡಿಜಿಟಲ್ ಆಗಿರುವುದರಿಂದ, ಕಂಪನಿಯು ಈಗಾಗಲೇ ಲಭ್ಯವಿರುವ ಗ್ರಾಹಕ ವಿಭಾಗವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬಯಸಿದೆ. ಇದರ ಪರಿಣಾಮವಾಗಿ ಓಲಾ ಕಂಪನಿಯು ಪ್ಲಾಟ್‌ಫಾರಂ ಆರಂಭಿಸಿದ ಮೊದಲ ತಿಂಗಳಿನಲ್ಲಿಯೇ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿದೆ. ಕರೋನಾ ಸಾಂಕ್ರಾಮಿಕದ ನಂತರ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯು ವೇಗವಾಗಿ ಪ್ರಗತಿ ದಾಖಲಿಸುತ್ತಿದೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಓಲಾ ಕಂಪನಿಯು ಸಹ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ಪರಿಸ್ಥಿತಿಯಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಹೊಸ ಕಾರು ಹಾಗೂ ಇಂಧನದ ಬೆಲೆಯಲ್ಲಿ ಏರಿಕೆಯಾಗಿರುವುದು. ಈ ಕಾರಣಗಳಿಂದಾಗಿ ಜನರು ಮುಂಬರುವ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಸಾಧ್ಯತೆಗಳಿವೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಓಲಾ ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆ ಹೇಳುವುದಾದರೆ, ಓಲಾ ಕಂಪನಿಯು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಂಪನಿಯ ಸಿಇಒ ಭವಿಶ್ ಅಗರ್ವಾಲ್, ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ವ್ಯವಸ್ಥೆಯನ್ನು ಸೃಷ್ಟಿಸುವ ಬಗ್ಗೆ ಅವರು ಮಾತನಾಡಿದ್ದಾರೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಕಂಪನಿಯ ಯೋಜನೆಗಳನ್ನು ಬಹಿರಂಗಪಡಿಸಿರುವ ಅವರು, ಶೀಘ್ರದಲ್ಲೇ ಕಂಪನಿಯು ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಕಾರ್ ವಿಭಾಗವನ್ನು ಪ್ರವೇಶಿಸಲಿದೆ ಎಂದು ಹೇಳಿದ್ದಾರೆ. ಜನರಿಗೆ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಒಲವು ಹೆಚ್ಚುತ್ತಿದೆ ಎಂದು ತಿಳಿಸಿರುವ ಅವರು, ಭವಿಷ್ಯದಲ್ಲಿ ವೈಯಕ್ತಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳಿಗೆ ಖಂಡಿತ ಬೇಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಇದಕ್ಕಾಗಿ ಪ್ರತಿ ವೈಯಕ್ತಿಕ ವಾಹನ ವಿಭಾಗದಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಾಗಿರಬೇಕು ಎಂದು ಭವಿಶ್ ಅಗರ್ವಾಲ್ ತಿಳಿಸಿದ್ದಾರೆ. ಮುಂಬರುವ ಕೆಲವು ವರ್ಷಗಳಲ್ಲಿ ಓಲಾ ಕಂಪನಿಯು ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಸ್ಕೂಟರ್‌ ಹಾಗೂ ಎಲೆಕ್ಟ್ರಿಕ್ ಕಾರುಗಳೊಂದಿಗೆ ತನ್ನ ಎಲೆಕ್ಟ್ರಿಕ್ ವಾಹನ ಸರಣಿಯನ್ನು ವಿಸ್ತರಿಸಲಿದೆ. ಓಲಾ ಕಂಪನಿಯು ಕಳೆದ ಆಗಸ್ಟ್ ತಿಂಗಳಿನಲ್ಲಿ ತನ್ನ S 1 ಹಾಗೂ S 1 Pro ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಈ ಎರಡು ಸ್ಕೂಟರ್‌ಗಳ ಮಾರಾಟದಿಂದ ಕಂಪನಿಯು ಕೇವಲ ಎರಡು ದಿನಗಳಲ್ಲಿ ರೂ. 1,100 ಕೋಟಿ ಗಳಿಸಿದೆ. ಈಗ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟವು ನವೆಂಬರ್ 1 ರಿಂದ ಪುನರಾರಂಭವಾಗಲಿದೆ. ಸೆಪ್ಟೆಂಬರ್ 15 ಹಾಗೂ ಸೆಪ್ಟೆಂಬರ್ 16 ರಂದು ಕಂಪನಿಯು ಪ್ರತಿ ಸೆಕೆಂಡಿಗೆ 4 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ ಎಂಬುದು ಗಮನಾರ್ಹ.

ಮೊದಲ ತಿಂಗಳಿನಲ್ಲಿಯೇ ಐದು ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದ ಓಲಾ

ಓಲಾ ಕಂಪನಿಯು ಎಲ್ಲಾ ವಿಭಾಗಗಳಲ್ಲಿಯೂ ತನ್ನ ಅಸ್ತಿತ್ವವನ್ನು ತೋರಿಸಲು ಮುಂದಾಗಿದೆ. ಈಗಿನ ಸನ್ನಿವೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವೂ ಉತ್ತಮವಾಗಿ ನಡೆಯುತ್ತಿದೆ. ಕಂಪನಿಯ ಆರಂಭವು ಉತ್ತಮವಾಗಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ತನ್ನ ಪ್ರತಿ ಸ್ಪರ್ಧಿಗಳಿಂದ ಉಂಟಾಗುವ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
Read more on ಓಲಾ ola
English summary
Ola cars sells 5000 second hand cars in first month details
Story first published: Friday, October 22, 2021, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X